ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕಿಂಗ್ ಫಿಶರ್ ಅಧ್ಯಕ್ಷ ರಂಜಿತ್ ಖಾರ್ವಿ ನೇತೃತ್ವದಲ್ಲಿ ವಿಜೃಂಭಣೆಯ 80ನೇ ಸ್ವಾತಂತ್ರ್ಯೋತ್ಸವ

ಕುಂದಾಪುರ : 80ನೇ ಸ್ವಾತಂತ್ರ್ಯೋತ್ಸವವನ್ನು ಕಿಂಗ್ ಫಿಶರ್ ಅಧ್ಯಕ್ಷರಾದ ಶ್ರೀ ರಂಜಿತ್ ಖಾರ್ವಿ ಅವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಣ ಪೂರ್ಣಗೊಳಿಸಿ ಉದ್ಯೋಗಕ್ಕೆ ಸೇರಿದ ಕುಮಾರಿ ರಕ್ಷಿತಾ ಶೇಖರ ಖಾರ್ವಿ ಹಾಗೂ ಸಮಾಜಸೇವಕರಾದ ಶ್ರೀ ದಾಸ ಹೆಗ್ಡೆ ಅವರು ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಶ್ರೀ ಚಂದ್ರಕಾಂತ ಖಾರ್ವಿ, ಶ್ರೀಮತಿ ರೂಪಾ, ಶ್ರೀಮತಿ ಪ್ರೇಮಾ ಹಾಗೂ ಶ್ರೀಮತಿ ಯಮುನಾ ಅವರು ವಂದೇ ಮಾತರಂ ಹಾಗೂ ರಾಷ್ಟ್ರಗೀತೆಯನ್ನು ಹಾಡಿದರು.

SSLC ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಮಹಾಕಾಳಿ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಅಜಂತಾ ಖಾರ್ವಿ, ನಿಯೋಜಿತ ಅಧ್ಯಕ್ಷರಾದ ಶ್ರೀ ಪ್ರಕಾಶ್ ಆರ್. ಖಾರ್ವಿ, ವಿದ್ಯಾರಂಗ ಮಿತ್ರ ಮಂಡಳಿಯ ನೂತನ ಅಧ್ಯಕ್ಷರಾದ ಶ್ರೀ ಜಯಾನಂದ ಕೃಷ್ಣ ಖಾರ್ವಿ, ಮಹಿಳಾ ಘಟಕದ ಉಪಾಧ್ಯಕ್ಷರಾದ ಶ್ರೀಮತಿ ಗೀತಾ ಚಂದ್ರಶೇಖರ್ ಸಾರಂಗ, ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ನಾಗರಾಜ ಖಾರ್ವಿ, ಪುರಸಭೆಯ ಮಾಜಿ ಸದಸ್ಯರಾದ ಶ್ರೀ ಚಂದ್ರಶೇಖರ ಖಾರ್ವಿ, ನಾಗಜಟ್ಟಿಗ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಮಂಜುನಾಥ ಖಾರ್ವಿ ಹಾಗೂ ಜಬ್ ಜಬ್ ಫ್ರೆಂಡ್ಸ್‌ನ ಸಂಚಾಲಕರಾದ ಶ್ರೀ ಕಿರಣ್ ಖಾರ್ವಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಶ್ರೀ ನಾಗರಾಜ ಖಾರ್ವಿ, ಶ್ರೀ ಜನಾರ್ದನ ಖಾರ್ವಿ ಹಾಗೂ ಶ್ರೀ ರಮೇಶ್ ಖಾರ್ವಿ ಅವರು ಸ್ವಾಗತಿಸಿ ವಂದಿಸಿದರು. ಶ್ರೀ ವಿಶು ಪಿ. ಖಾರ್ವಿ ಅವರು ಪ್ರತಿಭಾವಂತ ವಿದ್ಯಾರ್ಥಿಗಳ ಪರಿಚಯ ನೀಡಿದರು. ಶ್ರೀ ಹರೀಶ ಖಾರ್ವಿ ಕಾರ್ಯಕ್ರಮ ನಿರೂಪಿಸಿದರು. ಪ್ರತಿವರ್ಷದಂತೆ ಈ ಬಾರಿಯೂ ಶ್ರೀ ನಾರಾಯಣ ಖಾರ್ವಿ (888) ಅವರು ಸಿಹಿ ತಿಂಡಿ ವಿತರಿಸಿ ಕಾರ್ಯಕ್ರಮಕ್ಕೆ ಸಹಕರಿಸಿದರು. ದೇಶಭಕ್ತಿ, ಪ್ರತಿಭಾ ಗೌರವ ಹಾಗೂ ಸಾಮಾಜಿಕ ಒಗ್ಗಟ್ಟಿನ ಸಂದೇಶದೊಂದಿಗೆ ಕಾರ್ಯಕ್ರಮವು ಸಂಭ್ರಮದಿಂದ ನೆರವೇರಿತು.

Leave a Reply

Your email address will not be published. Required fields are marked *