ಕೋಟ: ಸಂಘಸಂಸ್ಥೆಗಳು ಸಮಾಜ ಸೇವಕರು ಈ ಸಮಾಜದ ಆಸ್ತಿಯಾಗಿ ಸಮರ್ಪಣಾ ಮನೋಭಾವದಿಂದ ಮಾಡಿದ ಸೇವಾ ಕಾರ್ಯವನ್ನು ಪ್ರತಿಯೊಬ್ಬರು ಗುರುತಿಸುವಂತ್ತಾಗಬೇಕು ಎಂದು ಸಾಲಿಗ್ರಾಮ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಬಂಟ್ವಾಳ ಪ್ರಕಾಶ್ ಕಾರಂತ್ ನುಡಿದರು.
ಶನಿವಾರ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ಶ್ರಾವಣ ಮಾಸದ ಮೊದಲ ಶನಿವಾರದ ಸಾಂಸ್ಕೃತಿಕ ವೇದಿಕೆಯಲ್ಲಿ ಸಂಘಸoಸ್ಥೆಗಳಿಗೆ ಸಮಾಜಸೇವಕರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮದಲ್ಲಿ ಮಾತನಾಡಿ ಭಗವಂತನ ಮೆಚ್ಚುವ ಕಾರ್ಯವೆಂದರೆ ಅದು ನಿಸ್ವಾರ್ಥ ಸೇವೆ ಸದಾ ಸಮಾಜಮುಖಿ ಕಾರ್ಯದ ಮೂಲಕ ಪಂಚವರ್ಣದoತಹ ಸಂಘಟನೆಗಳು ಸಮಾಜಕ್ಕೆಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಕೋಟದ ಪಂಚವರ್ಣ ಸಂಘಟನೆ ಪರಿಸರಸ್ನೇಹಿ ಸಾಮಾಜಿಕ ಕಾರ್ಯವನ್ನು ಗುರುತಿಸಿ ಗೌರವ ಸಂಮ್ಮಾನ ನೀಡಲಾಯಿತು. ಕೋಟ ವಿವೇಕ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ವೆಂಕಟೇಶ ಉಡುಪ, ಹೊಸಬದುಕು ಆಶ್ರಮದ ಮುಖ್ಯಸ್ಥ ವಿನಯಚಂದ್ರ, ಸಾಲಿಗ್ರಾಮದ ನಿವೃತ್ತ ಬ್ಯಾಂಕ್ ಉದ್ಯೋಗಿ ರಾಮದಾಸ್ ನಾಯಕ್ ಇವರುಗಳನ್ನು ಅಭಿನಂದಿಸಿ ಪುರಸ್ಕರಿಸಲಾಯಿತು. ವೇದಿಕೆಯಲ್ಲಿ ದೇಗುಲದ ಆಡಳಿತ ಮಂಡಳಿಯ ಉಪಾಧ್ಯಕ್ಷ ಚಂದ್ರಶೇಖರ ಉಪಾಧ್ಯಾಯ, ಕಾರ್ಯದರ್ಶಿ ಪರುಶರಾಮ ಭಟ್, ಸದಸ್ಯರಾದ ಕೆ.ತಾರಾನಾಥ ಹೊಳ್ಳ,ಪ್ರಸನ್ನ ತುಂಗ, ದೇಗುಲದ ವ್ಯವಸ್ಥಾಪಕ ಗಣೇಶ್ ಭಟ್ ಇದ್ದರು.
ಕಾರ್ಯಕ್ರಮವನ್ನು ನಾಗರತ್ನ ಹೇರ್ಳೆ ಸ್ವಾಗತಿಸಿ ನಿರೂಪಿಸಿ ವಾದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಮಹಿಳಾವೇದಿಕೆಯಿಂದ ಪ್ರಹಸನ ನೃತ್ಯ ಕಾರ್ಯಕ್ರಮಗಳು ಜರಗಿದವು. ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ಶ್ರಾವಣ ಮಾಸದ ಮೊದಲ ಶನಿವಾರದ ಸಾಂಸ್ಕೃತಿಕ ವೇದಿಕೆಯಲ್ಲಿ ಕೋಟದ ಪಂಚವರ್ಣ ಸಂಘಟನೆ ಪರಿಸರಸ್ನೇಹಿ ಸಾಮಾಜಿಕ ಕಾರ್ಯವನ್ನು ಗುರುತಿಸಿ ಗೌರವ ಸಂಮ್ಮಾನ ನೀಡಲಾಯಿತು.
ಸಾಲಿಗ್ರಾಮ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಬಂಟ್ವಾಳ ಪ್ರಕಾಶ್ ಕಾರಂತ್, ದೇಗುಲದ ಆಡಳಿತ ಮಂಡಳಿಯ ಉಪಾಧ್ಯಕ್ಷ ಚಂದ್ರಶೇಖರ ಉಪಾಧ್ಯಾಯ, ಕಾರ್ಯದರ್ಶಿ ಪರುಶರಾಮ ಭಟ್,ಸದಸ್ಯರಾದ ಕೆ.ತಾರಾನಾಥ ಹೊಳ್ಳ ಇದ್ದರು












Leave a Reply