ಬ್ರಹ್ಮಾವರ: ವಿಷ್ಣುಮೂರ್ತಿ ಗೆಳೆಯರ ಬಳಗ, ಹಂದಾಡಿ ಇವರ ಆಶ್ರಯದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಹಂದಾಡಿ ಪಂಚಾಯಿತಿಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.

ಬಳಿಕ ಎಲ್‌ಕೆಜಿ, ಯುಕೆಜಿ, ಅಂಗನವಾಡಿ ಹಾಗೂ ವಿವಿಧ ತರಗತಿಗಳ ಮಕ್ಕಳಿಗಾಗಿ ಗ್ರಾಮೀಣ ಕ್ರೀಡೆ ಸೇರಿದಂತೆ ತಲಾ ನಾಲ್ಕು ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ 2 ಗಂಟೆಯ ಬಳಿಕ ಸಾರ್ವಜನಿಕ ಮಹಿಳೆಯರು ಹಾಗೂ ಪುರುಷರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸಂದೀಪ್ ವಹಿಸಿದ್ದರು.

ಮುಖ್ಯ ಆತಿಥಿಗಳಾಗಿ ಹಂದಾಡಿಯ ನಿವೃತ್ತ ಪ್ರಾಂಶುಪಾಲರು ಹಾಗೂ ಭಟ್ಕಳದ ಅಜುಂಮಾನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕರಾದ ಡಾ. ಉದಯ ಪ್ರಸನ್ನ ಭಟ್ ಹಾಗೂ ಸೋಮೇಶ್ವರ ಸರ್ಕಾರಿ ಆಯುರ್ವೇದ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ರಶ್ಮಿ ಚಾಂತಾರು ಉಪಸ್ಥಿತರಿದ್ದರು.

ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಹಾಗೂ ಭಾಗವಹಿಸಿದ ಎಲ್ಲರಿಗೂ ವಿಶೇಷ ಬಹುಮಾನ ನೀಡಿ ಗೌರವಿಸಲಾಯಿತು.ಸತೀಶ್ ಹಂದಾಡಿ ಸ್ವಾಗತಿಸಿದರು. ಕುಂದ ಕನ್ನಡದ ರಾಯಭಾರಿ ಮನು ಹಂದಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಮೇಶ್ ಪೂಜಾರಿ ಹಾಗೂ ಅರ್ಪಿತಾ ಬ್ರಹ್ಮಾವರ ಕ್ರೀಡಾಕೂಟ ಮತ್ತು ಸಮಾರೋಪ ಸಮಾರಂಭದ ನಿರೂಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಸಂದೀಪ್, ಕಾರ್ಯದರ್ಶಿ ಜಗದೀಶ್ ಆಚಾರ್ ಹಾಗೂ ತಂಡದ ಪ್ರಮುಖರಾದ ಸತೀಶ್ ಹಂದಾಡಿ, ಸುಬ್ರಮಣ್ಯ ಗಾಣಿಗ, ಸುಶಾಂತ್ ಗಾಣಿಗ, ದಿಲೀಪ್ ಹಂದಾಡಿ, ನಟರಾಜ್ ಗಾಣಿಗ, ಫಾರೂಕ್, ಶ್ರೀಕಾಂತ್ ಹಂದಾಡಿ, ನಾಗರಾಜ್ ಗಾಣಿಗ, ಧನಂಜಯ ಶೆಟ್ಟಿ, ಕೃಷ್ಣ ನಾಯಕ್, ಹರೀಶ್ ಪೂಜಾರಿ, ಗಣೇಶ್ ನಾಯಕ್, ಸಂದೀಪ್ ಪೂಜಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Leave a Reply