ಕೋಟ: ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆಯಲ್ಲಿ ಕೋಟತಟ್ಟು ಗ್ರಾ.ಪಂ. ವ್ಯಾಪ್ತಿಯ ಜನಸಂಪರ್ಕ ಸಭೆ ಜೂ.25ರಂದು ಕೋಟತಟ್ಟು ಕಾರಂತ ಕಲಾಭವನದಲ್ಲಿ ಜರಗಿತು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜನಸಂಪರ್ಕ ಸಭೆಗಳು ಜನರನ್ನು ಜನಪ್ರತಿನಿಧಿಗಳು, ಅಧಿಕಾರಿಗಳನ್ನ ಒಗ್ಗೂಡಿಸುವ ವೇದಿಕೆ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸಕಾಲಕ್ಕೆ ಸ್ಪಂದಿಸಬೇಕು.
ಸಮಸ್ಯೆಗಳಿಗೆ ಪರಿಹಾರ ನೀಡಿ: ಕೋಟದಿಂದ ಸಾಲಿಗ್ರಾಮ ತನಕ ರಾಷ್ಟೀಯ ಹೆದ್ದಾರಿಯಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳಿದೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಜನಸಂಚಾರವಿದೆ. ಆದರೆ ಇಲ್ಲಿ ಸರ್ವಿಸ್ ರಸ್ತೆ ಇಲ್ಲದ ಕಾರಣ ಅಪಘಾತಗಳು ಹೆಚ್ಚುತ್ತಿದೆ. ಆದ್ದರಿಂದ ಈ ಭಾಗಕ್ಕೆ ಸರ್ವಿಸ್ ರಸ್ತೆ ನಿರ್ಮಾಣವಾಗಬೇಕು ಎಂದು ಜಿ.ಪಂ. ಮಾಜಿ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ ಮನವಿ ಮಾಡಿದರು. 9&11 ಸಮಸ್ಯೆಯ ಬಗ್ಗೆ ಪ್ರಶಾಂತ್ ಪಡುಕರೆ ಗಮನಸೆಳೆದರು.
ಅಕ್ರಮ ರೆಸಾರ್ಟ್ ಗಳ ಕಾರ್ಯನಿರ್ವಹಣೆ ಬಗ್ಗೆ ಗಮನಹರಿಸುವಂತೆ ಹಾಗೂ ಪಡುಕರೆ ಗ್ರಾಮ ಆಡಳಿತಾಧಿಕಾರಿ ಕಚೇರಿ ನಿರ್ಮಿಸುವಂತೆ ರವೀಂದ್ರ ತಿಂಗಳಾಯ ಮನವಿ ಮಾಡಿದರು. ಮತ್ಸಾ÷್ಯಶ್ರಯ ಯೋಜನೆಯ ಕೊನೆಯ ಕಂತಿನ ಹಣ ಪಾವತಿಯಾಗದ ಬಗ್ಗೆ ಶೇಖರ ಮರಕಾಲ ತಿಳಿಸಿದರು. ದಾನಗುಂದು ಅಂಗನವಾಡಿಗೆ ಕೇಂದ್ರಕ್ಕೆ ತೆರಳುವ ರಸ್ತೆಗೆ ಚರಂಡಿ ವ್ಯವಸ್ಥೆ ಮಾಡುವಂತೆ ಅಂಗನವಾಡಿ ಶಿಕ್ಷಕಿ ಉಷಾ ಮನವಿ ಮಾಡಿದರು. ರಸ್ತೆ ನಿರ್ಮಾಣ, ಚರಂಡಿ ಸಮಸ್ಯೆ ಸೇರಿದಂತೆ ವಿವಿಧ ಬೇಡಿಕೆ ವ್ಯಕ್ತವಾಯಿತು. ಕೆಲವೊಂದು ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ನೀಡಿದರು.
ಬಾಕಿ ಉಳಿದವುಗಳಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬ್ರಹ್ಮಾವರ ತಹಶಿಲ್ದಾರರಾದ ಶ್ರೀಕಾಂತ್ ಹೆಗ್ಡೆ, ಗ್ರಾ.ಪಂ. ಆಡಳಿತಾಧಿಕಾರಿ ಪ್ರತಾಪ್ ಶೆಟ್ಟಿ, ಮಹೇಶ್ ,ಪಿಡಿಒ ರವೀಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆಯಲ್ಲಿ ಕೋಟತಟ್ಟು ಗ್ರಾ.ಪಂ. ವ್ಯಾಪ್ತಿಯ ಜನಸಂಪರ್ಕ ಸಭೆ ಜೂ.25ರಂದು ಕೋಟತಟ್ಟು ಕಾರಂತ ಕಲಾಭವನದಲ್ಲಿ ಜರಗಿತು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬ್ರಹ್ಮಾವರ ತಹಶಿಲ್ದಾರರಾದ ಶ್ರೀಕಾಂತ್ ಹೆಗ್ಡೆ, ಗ್ರಾ.ಪಂ. ಆಡಳಿತಾಧಿಕಾರಿ ಪ್ರತಾಪ್ ಶೆಟ್ಟಿ ಇದ್ದರು.











Leave a Reply