ಸಾವಳಗಿ: ವಿದ್ಯಾರ್ಥಿ ಜೀವನದಲ್ಲಿ ಯಾವುದೇ ಯೋಜನೆಗಳು ಮುಂದಿದ್ದರು, ಅದಕ್ಕೆ ನಿಗದಿತ ಗುರಿ ಇರಬೇಕು. ಆಗ ಮಾತ್ರ ಯಾವುದೇ ಉದ್ಯೋಗ ವ್ಯಾಪಾರಗಳಲ್ಲಿ ಯಶ ಗಳಿಸಲು ಸಾಧ್ಯ. ಹಣ ಹೂಡಿಕೆ ಹಣ ಪಡೆಯುವ ರೀತಿ ವೃತ್ತಿಪರತೆಯಿಂದ ಸ್ವ ಉದ್ಯೋಗದಲ್ಲಿ ತೊಡಗಿ ಮುಂದಿನ ಬದುಕು ರೂಪಿಸಿಕೊಳ್ಳುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಹಾಗೂ ಜಿಲ್ಲಾ ಉದ್ಯೋಗಾಧಿಕಾರಿ ಬಾಗಲಕೋಟ ಮತ್ತು ಬೆಳಗಾವಿ ಶ್ರೀ. ಗುರುಪಾದಯ್ಯ ಹಿರೇಮಠ ಹೇಳಿದರು.
ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ಶ್ರೀ. ಸಿ.ಎನ್. ನಿರಾಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಾವಳಗಿ ಐಕ್ಯೂಎಸಿ ಮತ್ತು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಬಾಗಲಕೋಟ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬಾಗಲಕೋಟ ಸಹಯೋಗದೊಂದಿಗೆ ಅಲ್ಪಸಂಖ್ಯಾತರ ಬಹುವಲಯ ಅಭಿವೃದ್ಧಿ (ಎಂ ಎಸ್ ಡಿ ಪಿ) ಯೋಜನೆಯಡಿಯಲ್ಲಿ “ಮೃದು ಕೌಶಲ್ಯ ತರಬೇತಿ ಕಾರ್ಯಕ್ರಮ” ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿತ್ತು.
ನಂತರ ಕಾರ್ಯಕ್ರಮದ ಅತಿಥಿ ಗೌರವಾನ್ವಿತರು ಮತ್ತು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶ್ರೀ. ಶ್ರೀನಿವಾಸ ಕುಲಕರ್ಣಿ ಅವರು ವಿದ್ಯಾರ್ಥಿ ದಿಸೆಯಲ್ಲಿ ಪಡೆಯುವ ಜ್ಞಾನವು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮುಖ್ಯವಾಗಿರುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಶಿಸ್ತು ಹಾಗೂ ಉತ್ತಮ ನಡವಳಿಕೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರು ಹಾಗೂ ಅಧ್ಯಕ್ಷೀಯ ಭಾಷಣವನ್ನು ಮಾಡಿದ ಶ್ರೀ. ಸಂತೋಷ್ ಖೈರವ, ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳು ಜೀವನದಲ್ಲಿ ಆತ್ಮವಿಶ್ವಾಸ, ಶ್ರದ್ಧೆ ಮತ್ತು ಸಮಯ ಪ್ರಜ್ಞೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಮೃದು ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಶೃತಿ ಬ್ಯಾಡಗಿ, ದ್ವಿತೀಯ ಬಿಎ ವಿದ್ಯಾರ್ಥಿನಿ ಪ್ರಾರ್ಥನ ಗೀತೆಯೊಂದಿಗೆ ಮುನ್ನುಡಿ ಬರೆದರು, ಕಾರ್ಯಕ್ರಮದ ಅತಿಥಿಗಳನ್ನು ಪೂರ್ಣಿಮಾ. ಸಿ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು ಸ್ವಾಗತಿಸಿದರು,
ಕಾರ್ಯಕ್ರಮದ ಪ್ರಾಸ್ತವಿಕ ನುಡಿಯನ್ನು ಶಶಿಕಲಾ. ಸಿ ಐಕ್ಯೂ ಎಸಿ ಸಂಚಾಲಕರು ನಿರ್ವಹಿಸಿದರು. ವಂದನಾರ್ಪಣೆಯನ್ನು ಡಾ||ಸಬಿಹಾಬಾನು ಮಿರ್ಚೋಣಿ, ಐಕ್ಯೂಏಸಿ ಸಹ ಸಂಚಾಲಕರು ಮತ್ತು ಕಾರ್ಯಕ್ರಮ ನಿರೂಪಣೆಯನ್ನು ಡಾ|| ಯುವರಾಜ್ ಹಳೇಮನಿ, ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರು ನಿರ್ವಹಿಸಿದರು.
ಮೃದು ಕೌಶಲ್ಯ ತರಬೇತಿ ಕಾರ್ಯಕ್ರಮದಲ್ಲಿ ಅಕ್ಬರ್, ಕುಲಕರ್ಣಿ, ಸಂಪನ್ಮೂಲ ವ್ಯಕ್ತಿಗಳು ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
















Leave a Reply