ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮಲ್ಲೇಶ್ವರದಲ್ಲಿ ಕರ್ನಾಟಕ ಪತ್ರಕರ್ತರ ಸಂಘಟನೆಗಳ ಮಹಾಒಕ್ಕೂಟ ಉದ್ಘಾಟನೆ ಹಾಗೂ ಪತ್ರಿಕಾ ದಿನಾಚರಣೆ

ಬೆಂಗಳೂರು : ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಗಾಂಧಿ ಸಾಹಿತ್ಯ ಸಂಘದ ಭವನದಲ್ಲಿ ಕರ್ನಾಟಕ ಪತ್ರಕರ್ತರ ಸಂಘಟನೆಗಳ ಮಹಾಒಕ್ಕೂಟದ ಉದ್ಘಾಟನೆ ಹಾಗೂ ಪತ್ರಿಕಾ ದಿನಾಚರಣೆಯನ್ನು ಆಚರಿಸಲಾಯಿತು. ರಾಜ್ಯದ ಮೂಲೆ ಮೂಲೆಯಲ್ಲಿರುವ ಪತ್ರಿಕಾ ಸಂಘಟನೆಗಳೆಲ್ಲ ಒಗ್ಗೂಡಿ ಮಹಾಒಕ್ಕೂಟದ ಆರಂಭಕ್ಕೆ  ನಾಂದಿಯಾಯಿತು. ಈ ಉದ್ಘಾಟನೆಯ ಸಮಾರಂಭಕ್ಕೆ ಹಾಗೂ ಪತ್ರಿಕಾ ದಿನಾಚರಣೆಗೆ ಪತ್ರಕರ್ತ ಮಿತ್ರರು ಹಾಗೂ ಪತ್ರಿಕ ಅಭಿಮಾನಿಗಳ ದಂಡೆ ಹರಿದು ಬಂದದ್ದು ವಿಶೇಷವಾಗಿತ್ತು.

ಈ ಕಾರ್ಯಕ್ರಮದಲ್ಲಿ ಪತ್ರಕರ್ತರ ಕಷ್ಟ-ನಷ್ಟ, ಸಮಸ್ಯೆಗಳನ್ನು ಮತ್ತಿತರ ವಿಚಾರವನ್ನು ಚರ್ಚಿಸಲಾಯಿತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯ ಅತಿಥಿಗಳಿಗೆ ಮತ್ತು ಪ್ರಾಮಾಣಿಕ ಪತ್ರಕರ್ತರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಹಾಒಕ್ಕೂಟದ ರಾಜ್ಯಾಧ್ಯಕ್ಷರು ಆದ ಶ್ರೀಯುತ ಮಲ್ಲಿಕಾರ್ಜುನ್ ಬಂಗ್ಲೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್( ಸೂರ್ಯಗ್ನಿ ಶಿವು ), ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸರಾವ್ ಟಿ ಎಲ್, ಉಪಾಧ್ಯಕ್ಷರುಗಳಾದ ವಿನಯ್ ಕುಮಾರ್ ಮತ್ತು ಶಿವಕುಮಾರ್, ರಾಜ್ಯ ಜಂಟಿ ಸಂಘಟನಾ ಕಾರ್ಯದರ್ಶಿ ವೇಣುಗೋಪಾಲ್, ರಾಜ ಜಂಟಿ ಕಾರ್ಯದರ್ಶಿ ಮನೀಶ್ ಸೂರ್ಯ ಮತ್ತಿತರರು ಹಾಜರಿದ್ದರು. ಮಹಾಒಕ್ಕೂಟದ ಉದಯವು ಮುಂದಿನ ದಿನಗಳಲ್ಲಿ ಪತ್ರಕರ್ತರಿಗೆ ಸಲ್ಲಬೇಕಾದ ಕಾನೂನಾತ್ಮಕವಾದ ಸೌಲಭ್ಯಗಳನ್ನು ಕೊಡಿಸುವಲ್ಲಿ ಯಶಸ್ವಿಯಾಗಲಿ ಎಂಬುದು ಪತ್ರಕರ್ತರ ಬಯಕೆ.

Leave a Reply

Your email address will not be published. Required fields are marked *