ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ನೂತನ ಅಧ್ಯಕ್ಷರ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಸಾವಳಗಿ: ನಗರದ ಪ್ರತಿಷ್ಠಿತ ಶ್ರೀ ಭವಾನಿ ಕೋ ಆಫ್ ಕ್ರೇಡಿಟ ಸೊಸಾಯಿಟಿ ನಿಯ  ಅಧ್ಯಕ್ಷರಾಗಿ ಕೆಂಚರಾಯ (ಬಂಡು) ಕಲ್ಲಪ್ಪ ಮಾನೋಜಿ ಉಪಾಧ್ಯಕ್ಷರಾಗಿ ಧರ್ಮಣ್ಣ ಆನಂದ ಜಾಧವ ಅವಿರೋಧವಾಗಿ ಆಯ್ಕೆಯಾದರು.

ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ಶ್ರೀ ಭವಾನಿ ಕೋ ಆಫ್ ಕ್ರೇಡಿಟ ಸೊಸಾಯಿಟಿ ಸಂಘದ ಕಚೇರಿಯಲ್ಲಿ ಶುಕ್ರವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ನಡೆಯಿತು. ಚುನಾವಣಾ ಅಧಿಕಾರಿ ಎಮ್. ಎಸ್. ಘೋಲಪ ಅವರು ಅವಿರೋಧ ಘೋಷಣೆ ಮಾಡಿ ಪ್ರಮಾಣ ಪತ್ರ ವಿತರಿಸಿದರು‌.

ಸಂಘದ ನಿರ್ದೇಶಕರಾದ ವಾಸುದೇವ್ ಅಪ್ಪಾರಾಯ ಶಿಂಧೆ, ಶಿವಾಜಿ ಬಾವು ಬೋಸ್ಲೆ,  ರಾಜು ಭೀಮಪ್ಪ ಜಾಧವ, ಪ್ರವೀಣ್ ಕಾಶಿನಾಥ್ ಹಟ್ಟಿ, ರಾವು ಶಂಕರ್ ಮಾನೆ, ದೀಪಕ್ ಮಾರುತಿ ಗಾಯಕವಾಡ, ರಾಮಪ್ಪ ವಿಠ್ಠಲ ಜಾಧವ, ಸುಮಿತ್ರಾ ಗಣಪತಿ ಹರಪಾಳೆ, ರುಕ್ಮಿಣಿ ಮಹಾದೇವ್ ಕ್ಷೀರಸಾಗರ್,  ನಿಂಬೆವ್ವ ಶೇಖರ್ ಭಜಂತ್ರಿ  ನಿರ್ದೇಶಕರಾಗಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ಹಿರಿಯರಾದ ಸುಭಾಷ್ ಪಾಟೋಳ್ಳಿ, ತುಳಜಪ್ಪ ಬಾಪಕರ, ತುಕಾರಾಮ ಬಾಪಕರ, ಶ್ರೀಕಾಂತ್ ಗೌಳಿ, ಉಮೇಶ್ ಜಾಧವ, ಕಲ್ಲಪ್ಪ ಹುನ್ನೂರ, ದುಂಡಪ್ಪ ಮಾನೋಜಿ, ಕೃಷ್ಣಪ್ಪ ಜಾಧವ, ಅರ್ಜುನ ಬಾಪಕರ, ಭವಾನಿ ಕೋ ಆಫ್ ಕ್ರೇಡಿಟ ಸೊಸಾಯಿಟಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಎಸ್ ಕೇಸ್ಕರ, ಬ್ಯಾಂಕಿನ ಸಿಬ್ಬಂದಿಗಳಾದ ಬಿ. ಆರ್. ಬಾಬರ, ಅಶೋಕ ಜಾಧವ, ಶ್ಯಾಮರಾವ್ ತೋರವಿ, ಬಾಬು ಹುನ್ನೂರ, ಚೇತನ್ ಮಾನೋಜಿ, ಸಚೀನ ಜಾಧವ, ಅಮರ ಆಲಗೂರ, ಅಮರ ಹರಪಾಳೆ, ಶಶಾಂಕ್ ಬೋಸಲೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *