ಉಡುಪಿ, ಅಕ್ಟೋಬರ್ 29, ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ 2026-27ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಕಾರ್ಯಕಾರಿ ಸಂಘದ ಉದ್ಘಾಟನೆಯನ್ನು ಮಣಿಪಾಲದ ಮಾಹೆಯ ಪ್ರಾದ್ಯಾಪಕರು ಹಾಗೂ ಕಾರ್ಪೋರೇಟ್ ವ್ಯವಹಾರಗಳ ನಿರ್ದೇಶಕರಾದ ಡಾ. ಹರೀಶ್ ಕುಮಾರ್ ಎಸ್ ಉದ್ಘಾಟಿಸಿದರು.
ಶ್ರೀಯುತರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರಸ್ತುತ ಎಲ್ಲಾ ಕ್ಷೇತ್ರದಲ್ಲಿಯು ಕಾನೂನು ಪದವೀದರರಿಗೆ ವಿಪುಲ ಅವಕಾಶಗಳಿದ್ದು ಈ ಅವಕಾಶಗಳನ್ನು ಬಳಸಿಕೊಳ್ಳಲು ಹಾಗೂ ಯಶಸ್ಸು ಸಾದಿಸಲು ಪರಿಣಾಮಕಾರಿ ಸಂವಹನ ಕೌಶಲ್ಯಗಳ ಕಲಿಕೆ ಅವಶ್ಯಕ ಎಂದು ಹಾಗೂ ಕಾನೂನು ಕ್ಷೇತ್ರದಲ್ಲಿ ಕೃತಕ ಬುದ್ದಿಮತ್ತೆಯ ಹೆಚ್ಚುತ್ತಿರುವ ಪಾತ್ರ ಹಾಗೂ ಭವಿಷ್ಯದ ಕಾನೂನು ವೃತ್ತಿಪರರು ಆಧುನಿಕ ತಂತ್ರಜ್ಞಾನಗಳಿಗೆ ಹೊಂದಿಕೊಳುವ ಅಗತ್ಯತೆಯ ಬಗ್ಗೆಯೂ ತಿಳಿಸಿದರು. ನಾಯಕತ್ವದ ಕುರಿತು ಮಾತನಾಡಿದ ಅವರು ನಾಯಕತ್ವದಲ್ಲಿ ಪ್ರಾಮಾಣಿಕತೆ ಮತ್ತು ಜವಾಬ್ದಾರಿಯುತ ನಡವಳಿಕೆ ಅತ್ಯಂತ ಮುಖ್ಯ. ಒಬ್ಬ ನಾಯಕನನ್ನು ಅವನ ಮಾತುಗಳಿಂದಲ್ಲ, ಬದಲಾಗಿ ಆತನ ಕಾರ್ಯಗಳಿಂದ ಆಳೆಯಲಾಗುತ್ತದೆ ಹಾಗೂ ನಾಯಕನು ತನ್ನ ನಡೆ-ನುಡಿಗಳ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುರೇಖ ಕೆ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿ ಕಾರ್ಯಕಾರಿ ಸಂಘದ ಸದಸ್ಯರು ತಮ್ಮ ಕಾರ್ಯಚಟುವಟಿಕೆಗಳ ಮೂಲಕ ನಾಯಕತ್ವ, ಜವಾಬ್ದಾರಿ ಮತ್ತು ಭದ್ರತೆಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕೆಂದು ಹಾಗೂ ವಿದ್ಯಾರ್ಥಿ ಸಮುದಾಯದ ಅಭಿವೃಧ್ದಿಗೆ ನಕಾರಾತ್ಮಕ ಕೊಡುಗೆ ನೀಡಬೇಕೆಂದು ಹೇಳಿದರು.ಉಪಪ್ರಾಂಶುಪಾಲರಾದ ಡಾ.ಪ್ರೀತಿ ಹರೀಶ್ ರಾಜ್ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಮಾನವಿಕ ವಿಭಾಗದ ಮುಖ್ಯಸ್ಥರಾದ ಪ್ರೊ.ರೋಹಿತ್ ಎಸ್ ಅಮೀನ್ ( IQAS) ಸಂಯೋಜಕರಾದ ಡಾ.ಜಯಮೋಲ್ ಪಿ.ಎಸ್ ಹಾಜರಿದ್ದರು. ವಿದ್ಯಾರ್ಥಿನಿ ಭಾವನಾ ಸ್ವಾಗತಿಸಿದರು, ವಾಸುದೇವ ತಿಲಕ್ ಅತಿಥಿತಿಗಳನ್ನು ಪರಿಚಯಿಸಿದರು ಶ್ರೀಶಾ ಪೈ ವಂದನಾಪಣೆ ಸಲ್ಲಿಸಿದರು ರಿಶಾಲಿ ನಿರೂಪಿಸಿದರು.












Leave a Reply