ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಚೇತನಾ ಪ್ರೌಢಶಾಲೆಯಲ್ಲಿ ಹಿಂದಿನ ವಿದ್ಯಾರ್ಥಿ ಸಂಘ ರಚನೆ

ಕೋಟ: ಚೇತನಾ ಪ್ರೌಢಶಾಲೆ, ಹಂಗಾರಕಟ್ಟೆ ಇಲ್ಲಿ ಹಿಂದಿನ ವಿದ್ಯಾರ್ಥಿಗಳ ಸಭೆ ಇತ್ತೀಚಿಗೆ ಶಾಲಾ ಸಭಾಂಗಣದಲ್ಲಿ ಏರ್ಪಡಿಸಲಾಯಿತು. ಶಾಲಾ. ಆಡಳಿತ ಮಂಡಳಿ ಅಧ್ಯಕ್ಷ ಬಿ .ಭರತ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ 64 ವರ್ಷಗಳ ಸುದೀರ್ಘ ಹಾಗೂ ಭವ್ಯ ಇತಿಹಾಸ ಇರುವ ಚೇತನಾ ಪ್ರೌಢಶಾಲೆಯಲ್ಲಿ ಅಧಿಕೃತವಾಗಿ ‘ಹಿಂದಿನ ವಿದ್ಯಾರ್ಥಿ ಸಂಘ’ವನ್ನು ರಚಿಸುವ ಬಗ್ಗೆ ತಿರ್ಮಾನಿಸಿ ಶಾಲೆಗೆ ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸಲು ಚಿಂತಿಸಲಾಗಿದೆ ಎಂದರು.

ಹಿಂದಿನ ವಿದ್ಯಾರ್ಥಿ ಸಂಘದ ಕಾರ್ಯಕಾರಿ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಬಿ. ರಾಜರಾಮ್ ಭಟ್, ಅಧ್ಯಕ್ಷರಾಗಿ ಪ್ರವೀಣ್ ಯಕ್ಷಿಮಠ, ಉಪಾಧ್ಯಕ್ಷರಾಗಿ ಶಿವರಾಮ್ ಶ್ರೀಯಾನ್, ಜಯಲಕ್ಷ್ಮಿ ಶೆಟ್ಟಿ ಕಾರ್ಯದರ್ಶಿಯಾಗಿ ಮೇಲ್ವಿನ್ ಅಲ್ಮೇಡಾ, ಜತೆ ಕಾರ್ಯದರ್ಶಿಯಾಗಿ ಲುವಿ ರೋಡ್ರಿಗಸ್, ಕೋಶಾಧಿಕಾರಿಯಾಗಿ ಹೆಚ್. ರಾಮದೇವ ಹಂದೆ, ಸದಸ್ಯರುಗಳಾಗಿ ಕೃಷ್ಣಮೂರ್ತಿ ಮಕ್ಕಿತಾಯ, ಮೊಹಮ್ಮದ್ ಆರಿಫ್, ಡಾ.ಕೆ. ಸತೀಶ್ ಕಾಮತ್, ಆನಂದ್. ಎಂ , ಪ್ರಶಾಂತ್ ಶೆಟ್ಟಿ , ನಾಗರಾಜ ಕಾರಂತ್, ಬಾಲಮುರಳಿ ಕೃಷ್ಣ, ಗಿರೀಶ್ ಮಯ್ಯ , ನಾಗೇಶ ಪ್ರಭು, ಜಯಂತಿ ಪ್ರತಾಪ್ ಶೆಟ್ಟಿ , ಲೀಲಾವತಿ ಜಿ ಪೂಜಾರಿ, ಬಿ.ಎಸ್. ನಟರಾಜ್ ಗಾಣಿಗ , ದಿನೇಶ್ ಬಾಂಧವ್ಯ , ಬಿ.ದಿವಾಕರ್ ಶೆಟ್ಟಿ,ಸುಮಿತ್ರ ಗಾಣಿಗ , ಸೂರಜ್ ಅಮೀನ್, ಪೂಜಾಶ್ರೀ, ದಿನೇಶ್ ದೇವಾಡಿಗ , ನಟರಾಜ್ ಆಚಾರ್ಯ, ಅಲೆಕ್ಸಾಂಡರ್ ಚಾರ್ಲ್ಸ್ ಫುಟ್ರಾಡೊ, ಪ್ರಮೋದ್ ಪೂಜಾರಿ , ಅಖಿಲ್ ದೇವಾಡಿಗ, ವಿಶ್ವಂಭರ ಅಲ್ಸೆ .ಎ, ಜಗನ್ನಾಥ ಬಂಗೇರ, ಆರತಿ , ಮನ್ವಿತ್, ಆಯುಷ್ ದೇವಾಡಿಗ, ಹೆನ್ರಿ ಲೂಯಿಸ್, ಜಯಂತಿ, ದರ್ಶನ್ ದೇವಡಿಗ , ತ್ರಿಷಾ, ಜೀವಿತಾ, ಎಚ್ .ಶಂಕರ್,ಸುಪ್ರೀತ್ ಆರ್ ಅಯ್ಕೆಗೊಂಡರು.

ಶಾಲಾ ಮುಖ್ಯ ಶಿಕ್ಷಕಿ ಕಲ್ಪನಾ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿಂದಿನ ವಿದ್ಯಾರ್ಥಿ ವಿಘ್ನೇಶ್ವರ ಅಡಿಗ, ಜೊತೆ ಕಾರ್ಯದರ್ಶಿ ಆಡಳಿತ ಮಂಡಳಿ ಅಂದಿನ ವಿದ್ಯಾರ್ಥಿ ಸಂಘ ರಚನೆಯ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಶಿಕ್ಷಕ ಹರ್ಷವರ್ಧನ ಶೆಟ್ಟಿ , ಕಾರ್ಯಕ್ರಮ ನಿರೂಪಿಸಿ,ಎಂ. ಪಕೀರಪ್ಪ, ವಂದಿಸಿದರು. ಚೇತನಾ ಪ್ರೌಢಶಾಲೆ, ಹಂಗಾರಕಟ್ಟೆ ಇಲ್ಲಿ ಹಿಂದಿನ ವಿದ್ಯಾರ್ಥಿಗಳ ಸಭೆ ಇತ್ತೀಚಿಗೆ ಶಾಲಾ ಸಭಾಂಗಣದಲ್ಲಿ ಜರಗಿತು. ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರವೀಣ್ ಯಕ್ಷಿಮಠ ಉಪಾಧ್ಯಕ್ಷ ಶಿವರಾಮ್ ಶ್ರೀಯಾನ್, ಜಯಲಕ್ಷ್ಮಿ ಶೆಟ್ಟಿ ಕಾರ್ಯದರ್ಶಿ ಮೇಲ್ವಿನ್ ಅಲ್ಮೇಡಾ,ಶಾಲಾ‌‌ಮುಖ್ಯ ಶಿಕ್ಷಕಿ ಕಲ್ಪನಾ ಶೆಟ್ಟಿ ಇದ್ದರು.

Leave a Reply

Your email address will not be published. Required fields are marked *