ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಎಪಿಎಸ್ ಅಂತರ್ ಕಾಲೇಜು ಕ್ರಿಕೆಟ್ ಪಂದ್ಯಾವಳಿ: ಸೇಂಟ್ ಪಾಲ್ಸ್ ಕಾಲೇಜು ಚಾಂಪಿಯನ್, ಎನ್.ಆರ್ ಕಾಲೋನಿಯ ಎಪಿಎಸ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜು ರನ್ನರ್ಸ್-ಅಪ್

ಬೆಂಗಳೂರು,ಅ,28: ಎಪಿಎಸ್ ಪಿಯು ಕಾಲೇಜು ಮತ್ತು ಎಪಿಎಸ್ ಪದವಿ ಕಾಲೇಜುಗಳ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಅಂತರ್ ಕಾಲೇಜು ಕ್ರಿಕೆಟ್ ಪಂದ್ಯಾವಳಿಯಲ್ಲಿ 20ಕ್ಕೂ ಹೆಚ್ಚು ಕಾಲೇಜು ತಂಡಗಳು ಅಮಿತೋತ್ಸಾಹದಿಂದ ಭಾಗವಹಿಸಿದ್ದವು. ಯುವ ಕ್ರಿಕೆಟಿಗರು ತಮ್ಮ ಅದ್ಭುತ ಪ್ರತಿಭೆ, ಅಚಲ ಆತ್ಮವಿಶ್ವಾಸ, ಶಿಸ್ತು, ಪರಿಶ್ರಮ, ತಂಡದ ಸಂಘಟಿತ ಪ್ರಯತ್ನ ಮತ್ತು ಅತ್ಯುತ್ತಮ ಕ್ರೀಡಾಸ್ಫೂರ್ತಿಯನ್ನು ಮೆರೆದರು.

ಪ್ರತಿಯೊಂದು ಪಂದ್ಯವೂ ತೀವ್ರ ಪೈಪೋಟಿಯಿಂದ ಕೂಡಿದ್ದು, ಆಟಗಾರರಲ್ಲಿನ ಸ್ಪರ್ಧಾತ್ಮಕ ಮನೋಭಾವ, ಪರಸ್ಪರ ಸಹಕಾರ ಮತ್ತು ಕ್ರಿಕೆಟ್ ಆಟದ ಮೇಲಿನ ಅಪಾರ ಪ್ರೀತಿಯನ್ನು ಪಂದ್ಯಾವಳಿ ಅನಾವರಣಗೊಳಿಸಿತು. ಅಂತಿಮ ಪಂದ್ಯ ಕೊನೆಯ ಎಸೆತದವರೆಗೂ ಕುತೂಹಲ ಕೆರಳಿಸಿ, ಅತ್ಯಂತ ರೋಚಕತೆಯಲ್ಲಿ ಮುಳುಗಿಸಿತು. ಅಂತಿಮವಾಗಿ ಸೇಂಟ್ ಪಾಲ್ಸ್ ಕಾಲೇಜು ಚಾಂಪಿಯನ್ ಚಾಂಪಿಯನ್ ಆಗಿ ಹೊರ ಹೊಮ್ಮಿದರೆ ಎನ್.ಆರ್ ಕಾಲೋನಿಯ ಎಪಿಎಸ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜು ರನ್ನರ್ ಅಪ್ ಪ್ರಶಸ್ತಿಗೆ ಭಾಜನವಾಯಿತು.

ವಿಜೇತ ತಂಡಗಳಿಗೆ ಎಪಿಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಿಎ ಡಾ. ವಿಷ್ಣು ಭರತ್ ಆಲಂಪಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಕ್ರೀಡೆ ಎಂದರೆ ಕೇವಲ ಗೆಲುವಲ್ಲ. ಜೀವನದ ಮೌಲ್ಯಗಳನ್ನು ಕಲಿಸುವ ಪಾಠ. ಕ್ರಿಕೆಟ್ ಸ್ಪರ್ಧೆಯಾಗಿರದೆ, ಸ್ನೇಹ, ಸೌಹಾರ್ದ, ಆರೋಗ್ಯಕರ ಸ್ಪರ್ಧೆಗೆ ವೇದಿಕೆಯಾಗಿದೆ. ಪರಿಶ್ರಮ, ಸಹಕಾರ ಮತ್ತು ಯುವಜನರ ಉತ್ಸಾಹದ ಸೊಗಸಾದ ಸಂಭ್ರಮ ಎಂದು ವರ್ಣಿಸಿದರು. ಈ ಸಂದರ್ಭದಲ್ಲಿ ಪ್ರೊ. ಎ. ಪ್ರಕಾಶ್, ಪಿ. ಕೃಷ್ಣಸ್ವಾಮಿ, ಪ್ರಾಂಶುಪಾಲರಾದ ರೇಣುಕಾ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *