ಕೋಟ: ಇತ್ತೀಚೆಗೆ ತಿರುಪತಿಯಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಅಖಿಲಕರ್ನಾಟಕ ಪದ್ಮ ಬ್ರಾಹ್ಮಣ ಪುರೋಹಿತ ಸಂಘದ ಮಾಜಿ ಅಧ್ಯಕ್ಷರಾದ ವಾಸ್ತುತಜ್ಞ ಡಾ|ಬಸವರಾಜ್ ಶೆಟ್ಟಿಗಾರ್ ಕೋಟೇಶ್ವರ ಇವರು ಅಖಿಲ ಭಾರತ ಪದ್ಮ ಬ್ರಾಹ್ಮಣ ಪುರೋಹಿತಸಂಘದ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು.ಅಖಿಲ ಭಾರತ ಪದ್ಮ ಬ್ರಾಹ್ಮಣ ಪುರೋಹಿತ ಸಂಘದ ಗೌರವಾಧ್ಯಕ್ಷರಾದ ಬ್ರಹ್ಮಶ್ರೀಬೊಜ್ಜನ್ನ ಪಂತುಲು ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದ ಜ್ಯೋತಿಷಿ ಬಸವರಾಜ್ ಶೆಟ್ಟಿಗಾರ್ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಅಖಿಲ ಭಾರತ ಪದ್ಮ ಬ್ರಾಹ್ಮಣ ಪುರೋಹಿತ ಸಂಘದ ಅಧ್ಯಕ್ಷರಾದ ಬ್ರಹ್ಮಶ್ರೀ ಕೇಶವಮೂರ್ತಿ ಭಾರ್ಗವ ಆಚಾರ್ಯರು ರಾಷ್ಟ್ರೀಯ ಮಟ್ಟದಜವಾಬ್ದಾರಿಯೊಂದಿಗೆ ಉಪಾಧ್ಯಕ್ಷರಾಗಿ ಆಯ್ಕೆ ಆದ ಬಗ್ಗೆ ಅಧಿಕೃತ ದಾಖಲೆ ಪತ್ರವನ್ನು ನೀಡಿಶುಭ ಹಾರೈಸಿದರು.ಪ್ರಸಂಗಕರ್ತ ಬಸವರಾಜ ಶೆಟ್ಟಿಗಾರ್ ಅವರು ಕೇರಳದ ಪೈನ್ನೂರಿನಲ್ಲಿ ಅಧುನಿಕ ಜ್ಯೋತಿಷ್ಯ ಹಾಗೂ ವಾಸ್ತು ಶಾಸ್ತ್ರವನ್ನು ಅಧ್ಯಯನ ಮಾಡಿದ್ದು. ಮದುವೆ ಗೃಹಪ್ರವೇಶ. ಗಣಪತಿ ಹೋಮ. ಸತ್ಯನಾರಾಯಣ ಪೂಜೆ, ಹೀಗೆ ಎಲ್ಲಾ ವಿಭಾಗದ ಹೋಮ ಹವನಾದಿಗಳನ್ನು,ಪೂಜೆ ಪುರಸ್ಕಾರಗಳನ್ನು ದೇಶ ವಿದೇಶದಲ್ಲೆಡೆ ಮಾಡಿ ಚಿರಪರಿಚಿತರಾಗಿದ್ದರು.
ಸ್ವರ್ಣಾರೋಡಪ್ರಶ್ನೆ, ತಾಂಬೂಲ ಪ್ರಶ್ನೆ, ಕವಡೆ ಪ್ರಶ್ನೆಯೊಂದಿಗೆ ನೊಂದವರಿಗೆ ಸರಳಾತಿ ಸರಳ ದೋಷಪರಿಹಾರವನ್ನು ಮಾಡುತ್ತಿದ್ದು ನಿರಂತರ 52 ಕ್ಷೇತ್ರಗಳ ಅಧ್ಯಯನ ಮಾಡಿ 52 ಕ್ಷೇತ್ರ ಮಹಾತ್ಮಪ್ರಸಂಗವನ್ನು ರಚಿಸಿ ಜಾಗತಿಕ ದಾಖಲೆ ನಿರ್ಮಿಸಿದ್ದಾರೆ ಹಲವಾರು ಕ್ಷೇತ್ರದ ಮಹಾತ್ಮಿಯನ್ನು ತಿಳಿಯಲು ಸ್ವರ್ಣಾರೋಡ ಪ್ರಶ್ನೆಯನ್ನು ಇರಿಸಿ ಕ್ಷೇತ್ರದ 2000 ವರ್ಷಗಳ ಹಿಂದಿನ ಇತಿಹಾಸವನ್ನು ಕಂಡು ಹಿಡಿದಿರುವುದು ಶ್ಲಾಘನೀಯವಾಗಿದೆ.











Leave a Reply