ಉಡುಪಿ : ಹಿರಿಯ ಖ್ಯಾತ ವಕೀಲರಾಗಿರುವ ಎ.ಎಸ್.ಎನ್ ಹೆಬ್ಬಾರ್ ಬ್ರಹ್ಮಾವರ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಧಿಗಳಾಗಿ ಭಾಷೆಯ ಗೊಂದಲಗಳು ಎಂಬ ವಿಚಾರದಲ್ಲಿ ಹಾಸ್ಯ ಚಟಾಕಿ ಹೇಳಿದರು ಅದೇನೆಂದರೆ ನಾರಾಯಣ ಆಚಾರ್ ಉಳ್ಳೆಯವರೇ ಅವರ ಮಕ್ಕಳು ಅಂಡೆ ಪಿರ್ಕಿಗಳು. ತುಳು ಭಾಷೆಯಲ್ಲಿ ನಾರಾಯಣ ಆಚಾರ್ ಉಳ್ಳರಾ ಎಂದು ಕೇಳಿದಾಗ ಕುಂದಾಪುರದ ಒಬ್ಬರಿಗೆ ತುಳು ಬರದೇ ಇದ್ದವರು ನಾರಾಯಣ ಆಚಾರ್ ಒಳ್ಳೆಯವರೇ ಅವರ ಮಕ್ಕಳು ಎಲ್ಲಾ ಅಂದೆ ಪಿರ್ಕಿಗಳು ಎಂದು ಹೇಳಿದರು ಎಂದು ಭಾಷಣ ಮಾಡಿದರು.
ಇದರಲ್ಲಿ ಯಾವುದೇ ಸಮುದಾಯ ಹೆಸರನ್ನು ಹೇಳಲಿಲ್ಲ. ಬ್ರಾಹ್ಮಣ ಸಮುದಾಯದಲ್ಲೂ ನಾರಾಯಣ ಆಚಾರ್, ಬಿ.ವಿ ಆಚಾರ್ ಗಣ್ಯಾತಿ ಗಣ್ಯರ ಸರ್ ನೇಮ್ ಇದೆ. “ಉಳ್ಳರಾ’ ಹೇಳುವ ಪದ ಬ್ರಾಹ್ಮಣ ಸಮುದಾಯದ ತುಳು ಭಾಷೆಯ ಪದವಾಗಿದೆ. ಈ ನಿಟ್ಟಿನಲ್ಲಿ ಇದು ಯಾವುದೇ ಸಮುದಾಯಕ್ಕೆ ಸಂಬಂಧ ಪಟ್ಟಿ ಹಾಸ್ಯ ಚಟಾಕಿ ಅಲ್ಲ. ವಿಶ್ವಕರ್ಮ ಸಮುದಾಯದವರು ಅವರಿಗೆ ಸಂಬಂಧ ಪಟ್ಟಿದ್ದು ಎಂದು ತಪ್ಪು ಗ್ರಹಿಕೆ ಮಾಡಿಕೊಂಡು ಬೇಸಿ, ರೋಟರಿಯಂತಹ ಅಂತರಾಷ್ಟ್ರೀಯ ಸಂಸ್ಥೆಯ ನಾಯಕರಾದ 87 ವರ್ಷದ ಎ.ಎಸ್. ಎನ್ ಹೆಬ್ಬಾರ್ ಅವರನ್ನು ಕರೆಯಿಸಿ ಅವರಿಗೆ ಅವಹೇಳನಕಾರಿ ಮಾತನಾಡಿದಕ್ಕೆ ಮತ್ತು ವಿಕವಚನದಲ್ಲಿ ಬೈದದಕ್ಕೆ ಉಡುಪಿ ಜಿಲ್ಲೆಯ ಸಮಸ್ತ ವಿಪ್ರ ಬಾಂಧವರ ಪರವಾಗಿ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ(ರಿ) ಖಂಡಿಸುತ್ತದೆ.
ಮತ್ತು ಇದು ನಮ್ಮ ಸಮುದಾಯ ವ್ಯಕ್ತಿಯ ಮೇಲೆ ಸುಳ್ಳು, ಆರೋಪ ಮಾಡಿ ಅವರಿಗೆ ಮಾನಸಿಕ ಹಿಂಸೆ ನೀಡಿರುವುದು ಅಕ್ಷಮ್ಯ ಅಪರಾಧ. ಎ.ಎಸ್.ಎನ್ ಹೆಬ್ಬಾರ್‌ನ್ನು ಕರೆದು ಅವಹೇಳನ ಮಾಡಿದವರು ಏಕವಚನದಲ್ಲಿ ಮಾತನಾಡಿದವರು ಅವರಿಗೆ ಮಾನಸಿಕ ಹಿಂಸೆ ನೀಡಿದವರು ವಿಶ್ವಕರ್ಮ ಸಮಾಜದ ಪರವಾಗಿ ಬಹಿರಂಗ ಕ್ಷಮಾಯಾಚನ ಮಾಡಬೇಕು, ಮತ್ತು ಮುಂದಿನ ದಿನಗಳಲ್ಲಿ ಇಂತಹ ವಿಚಾರಗಳು ಬಂದರೆ ಸೌಹಾರ್ದಯುತವಾಗಿ ಕೂತು ಮಾತನಾಡಿ ಬಗೆಹರಿಸಬೇಕು ಎಂದು ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸ ಭಾ(ರಿ)ಇದರ ಅಧ್ಯಕ್ಷರಾದ ಸಂದೀಪ್ ಮಂಜ ಪತ್ರಿಕಾ ಗೋಷಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ್ ರಾವ್ ಕುಂಬಾಸಿ, ಸಂಘಟನಾ ಕಾರ್ಯದರ್ಶಿ ಜಯರಾಮ್ ಆಚಾರ್ಯ, ಉಪಾಧ್ಯಕ್ಷ ಶ್ರೀನಿವಾಸ್ ಬಲ್ಲಾಳ್, ಜೊತೆ ಕಾರ್ಯದರ್ಶಿ ನಾಗರಾಜ್ ಉಪಾದ್ಯಾಯ, ತುಷಿಮಾಮ ಕೋಶಾಧಿಕಾರಿ ಕೃಷ್ಣಮೂರ್ತಿ ಆಚಾರ್ಯ ಉಪಸ್ಥಿತರಿದ್ದರು.











Leave a Reply