ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಲಿಗ್ರಾಮದಲ್ಲಿ ಅಕ್ಟೋಬರ್ 11ರಂದು ‘ಡಾ. ಕೋಟ ಶಿವರಾಮ ಕಾರಂತರ ಜನ್ಮದಿನಾಚರಣೆ’ ಹಾಗೂ ‘ಕಾರಂತ ಪುರಸ್ಕಾರ’ ಪ್ರದಾನ ಸಮಾರಂಭ

ಕೋಟ: ಗೆಳೆಯರ ಬಳಗ ಕಾರ್ಕಡ, ಸಾಲಿಗ್ರಾಮ ಇವರ ಆಶ್ರಯದಲ್ಲಿ ಡಾ. ಕೋಟ ಶಿವರಾಮ ಕಾರಂತರ ಜನ್ಮದಿನಾಚರಣೆ ಕಾರ್ಯಕ್ರಮವು ದಿನಾಂಕ 11 ಅಕ್ಟೋಬರ್ 2026ರ ಆದಿತ್ಯವಾರದಂದು ಸಾಲಿಗ್ರಾಮದ ಶ್ರೀ ಗುರುನರಸಿಂಹ ಬಯಲು ರಂಗ ಮಂದಿರದಲ್ಲಿ ನಡೆಯಲಿದೆ.ಸಂಜೆ 4.30 ರಿಂದ ಸ್ಥಳೀಯ ಪ್ರತಿಭೆಗಳಿಂದ ‘ಗಾನ ನಮನ’ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.​ಸಂಜೆ 6.00 ರಿಂದ: ‘ಕಾರಂತ ಸಂಸ್ಮರಣೆ’ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ.

ಈ ಬಾರಿಯ ಗೆಳೆಯರ ಬಳಗದ “ಕಾರಂತ ಪುರಸ್ಕಾರ 2026” ಅನ್ನು ಕೋಟತಟ್ಟು ಮೂಲದ ರಾಮ ಮೊಗವೀರ ಅವರಿಗೆ ಪ್ರದಾನಿಸಿ ಗೌರವಿಸಲಿದ್ದು.ಸಭಾ ಕಾರ್ಯಕ್ರಮದ ನಂತರ ಮಯ್ಯ ಯಕ್ಷ ಬಳಗ, ಹಾಲಾಡಿ ಇವರ ಪ್ರಸಿದ್ಧ ಕಲಾವಿದರಿಂದ ‘ಮಹಿಷ ಮರ್ದಿನಿ’ ಎಂಬ ಪೌರಾಣಿಕ ಬಡಗುತಿಟ್ಟು ಯಕ್ಷಗಾನ ಪ್ರದರ್ಶನಗೊಳ್ಳಲಿದೆ.​ ಈ ವೈವಿಧ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ, ಗೆಳೆಯರ ಬಳಗ ಕಾರ್ಕಡದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *