ಸಾಲಿಗ್ರಾಮ : ಶ್ರೀ ಗುರುನರಸಿಂಹ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ (ನಿ.), ಸಾಲಿಗ್ರಾಮ ಇದರ ಮುಂದಿನ ಐದು ವರ್ಷಗಳ ಅವಧಿಗೆ ಸೆ. 28 ರಂದು ನೂತನ ಆಡಳಿತ ಮಂಡಳಿ ರಚನೆಯಾಗಿದ್ದು, ಈ ಕೆಳಗಿನ ಸದಸ್ಯರುಗಳು ಅವಿರೋಧವಾಗಿ ಆಯ್ಕೆಗೊಂಡರು. ನಿರ್ದೇಶಕರುಗಳಾಗಿ ಆನಂದ್ ಸಿ. ಕುಂದರ್, ಸಂಜೀವ ಜಿ., ಮಂಜುನಾಥ್ ಎಸ್.ಕೆ, ಶಂಕರ ಬಂಗೇರ, ವಸಂತ ಶೆಟ್ಟಿ, ವೈ. ಕೃಷ್ಣಮೂರ್ತಿ ಐತಾಳ್, ಕೃಷ್ಣಪ್ಪ ಮರಕಾಲ, ಸುಂದರ, ವೈ. ಗೋಪಾಲ ಭಟ್ಟ, ಶಾಂತಾ ಭಟ್ಟ, ನಾಗರತ್ನ ಬಾಯರಿ, ಸವಿತಾ ಪೂಜಾರಿ ಆಯ್ಕೆಯಾಗಿದ್ದು ಮುಖ್ಯ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ಆನಂದ್ ಸಿ. ಕುಂದರ್ , ಉಪಾಧ್ಯಕ್ಷರಾಗಿ ಸಂಜೀವ ಜಿ. ಅವಿರೋಧ ಆಯ್ಕೆಗೊಂಡರು. ಚುನಾವಣಾ ಪ್ರಕ್ರಿಯೆಯನ್ನು ಉಡುಪಿಯ ಸಹಕಾರ ಸಂಘಗಳ ನಿಬಂಧಕರ ಕಚೇರಿಯ ಸಹಕಾರಿ ಅಭಿವೃದ್ಧಿ ಅಧಿಕಾರಿ ಹಾಗೂ ಚುನಾವಣಾಧಿಕಾರಿ ಜಯಂತಿ ಎಸ್. ಅವರು ನಡೆಸಿಕೊಟ್ಟರು.












Leave a Reply