ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ರೋಟರಿ ಕ್ಲಬ್ ಕೋಟ ಬ್ರಿಗೇಡ್ ವತಿಯಿಂದ ಶ್ರವಣ ಸಾಧನ ಉಚಿತ ಕೊಡುಗೆ

ಕೋಟ: ಹೆಬ್ರಿ ತಾಲೂಕು ಸಂತೆಕಟ್ಟೆ ನಿವಾಸಿ ಕಾಲೇಜು ವಿಧ್ಯಾರ್ಥಿನಿ ಕುಮಾರಿ ಸಮ್ರದ್ಧಿ ನಾಯ್ಕ್ ಅವರ ಶ್ರವಣ ದೋಷಕ್ಕೆ ತಕ್ಷಣ ಸ್ಪಂದಿಸಿದ ಕೋಟ ಬ್ರಿಗೇಡ್ ರೋಟರಿ ಸಂಸ್ಥೆ ಸುಮಾರು 25,000 ಮೌಲ್ಯದ ಆಧುನಿಕ ಶ್ರವಣ ಸಾಧನವನ್ನು ಉಚಿತವಾಗಿ ನೀಡಲಾಯಿತು.ನಿಯೋಜಿತ ಜಿಲ್ಲಾ ಗವರ್ನರ್ ಅಲೆನ್ ವಿನಯ್ ಲೂಯಿಸ್ ಅವರು ಸಾಧನವನ್ನು ವಿಧ್ಯಾರ್ಥಿನಿಗೆ ಹಸ್ಥಾಂತರಿಸಿ, ಮುಂದಿನ ವಿಧ್ಯಾಭ್ಯಾಸ ಹಾಗು ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು. ಹಾಗು ಕೋಟ ಬ್ರಿಗೇಡ್ ರೋಟರಿ ಸಂಸ್ಥೆಯ ಮಾನವೀಯ ಕಾರ್ಯವನ್ನು ಶ್ಲಾಘಿಸಿದರು.

ಈ ಸಂದರ್ಭ ವಲಯ ಎರಡರ ಮಾಜಿ ಸಹಾಯಕ ಗವರ್ನರ್ ಹಾಗು ಕ್ಲಬ್ ಸಲಹೆಗಾರ ಚಂದ್ರಶೇಖರ್ ಮೆಂಡನ್, ಕ್ಲಬ್‌ನ ಅಧ್ಯಕ್ಷ ಪ್ರಕಾಶ್ ಪೂಜಾರಿ, ಬನ್ನಾಡಿ, ವಲಯ ಸೇನಾನಿ ದಯನಂದ ಆಚಾರ್, ಮಾಜಿ ಅಧ್ಯಕ್ಷರುಗಳಾದ ಸುರೇಶ್ ಆಚಾರ್, ಡಾ. ಗಣೇಶ್, ಪ್ರಕಾಶ್ ಹಂದಟ್ಟು, ಚಾರ್ಟರ್ ಅಧ್ಯಕ್ಷ ಪ್ರಥ್ವಿನ್ ಸಿ ಮೆಂಡನ್, ಸದಸ್ಯರಾದ ಅರುಣ್ ಬಿ ಕೆ ಎಸ್ ಗುಂಡ್ಮಿ, ಮತ್ತು ಫಲಾನುಭವಿ ತಾಯಿ ಮುಂತಾದವರು ಉಪಸ್ಥಿತರಿದ್ದರು.

ಹೆಬ್ರಿ ತಾಲೂಕು ಸಂತೆಕಟ್ಟೆ ನಿವಾಸಿ ಕಾಲೇಜು ವಿಧ್ಯಾರ್ಥಿನಿ ಕುಮಾರಿ ಸಮ್ರದ್ಧಿ ನಾಯ್ಕ್ ಅವರ ಶ್ರವಣ ದೋಷಕ್ಕೆ ತಕ್ಷಣ ಸ್ಪಂದಿಸಿದ ಕೋಟ ಬ್ರಿಗೇಡ್ ರೋಟರಿ ಸಂಸ್ಥೆ ಸುಮಾರು 25,000 ಮೌಲ್ಯದ ಆಧುನಿಕ ಶ್ರವಣ ಸಾಧನವನ್ನು ಉಚಿತವಾಗಿ ನೀಡಲಾಯಿತು. ವಲಯ ಎರಡರ ಮಾಜಿ ಸಹಾಯಕ ಗವರ್ನರ್ ಹಾಗು ಕ್ಲಬ್ ಸಲಹೆಗಾರ ಚಂದ್ರಶೇಖರ್ ಮೆಂಡನ್, ಕ್ಲಬ್‌ನ ಅಧ್ಯಕ್ಷ ಪ್ರಕಾಶ್ ಪೂಜಾರಿ, ಬನ್ನಾಡಿ, ವಲಯ ಸೇನಾನಿ ದಯನಂದ ಆಚಾರ್ ಇದ್ದರು.

Leave a Reply

Your email address will not be published. Required fields are marked *