ರೋಟರಿ ಉಡುಪಿಯಿಂದ ಶ್ರೀ ಕೃಷ್ಣಬಾಲನಿಕೇತನದ ಮಕ್ಕಳಿಗೆ ಸಮವಸ್ತ್ರವನ್ನು ವಿತರಣಾ ಕಾರ್ಯಕ್ರಮ ನಡೆಯಿತು. ಅದರೊಂದಿಗೆ ಅಲ್ಲಿ ವನಮಹೋತ್ಸವವನ್ನು ಗಿಡಗಳನ್ನು ನೆಡುವುದರ ಮೂಲಕ ನೆರವೇರಿಸಲಾಯ್ತು. ಮುಖ್ಯ ಅತಿಥಿಗಳಾಗಿ ಸಮವಸ್ತ್ರದ ಪ್ರಾಯೋಜಕತ್ವನ್ನು ವಹಿಸಿದ ರೋ. ಗೋಕುಲದಾಸ ಪೈಯವರು ಮಾತಾಡುತ್ತಾ ಬಾಲನಿಕೇತನದೊಂದಿಗೆ ತಮ್ಮ ಭಾಂದವ್ಯವನ್ನು ನೆನಪಿಸಿಕೊಂಡು ರೋಟರಿ ಮುಖಾಂತರ ಕಾರ್ಯಕ್ರಮ ನಡೆಸುವರೇ ತಮಗೆ ನೀಡಿದ ಅವಕಾಶಕ್ಕಾಗಿ ಧನ್ಯತೆಯನ್ನು ಅನುಭವಿಸಿದೆ ಎಂದರು.

ರೋಟರಿ ಉಡುಪಿಯ ಅಧ್ಯಕ್ಷ ರೋ.ಗೋಪಾಲಕೃಷ್ಣ ಪ್ರಭುಗಳು ಸಮವಸ್ತ್ರದ ಪ್ರಾಯೋಜಕತ್ವ ವಹಿಸಿದ್ದ ರೋ. ಗೋಕುಲದಾಸ ಪೈಯವರನ್ನು ಅಭಿನಂದಿಸಿ ಬಾಲನಿಕೇತನದೊಂದಿಗೆ ರೋಟರಿಯ ಭಾಂದವ್ಯವನ್ನು ಸ್ಮರಿಸಿ ಇಂತಹ ಕಾರ್ಯಕ್ರಮ ನಡೆಸುವರೇ ನೀಡಿದ ಅವಕಾಶಕ್ಕಾಗಿ ಧನ್ಯವಾದ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಬಾಲನಿಕೇತನದ ಕಾರ್ಯದರ್ಶಿ ರೋ. ರಾಮಚಂದ್ರ ಉಪಾಧ್ಯಾಯ, ಕ್ಲಬ್ ನ ಕಾರ್ಯದರ್ಶಿ ರೋ. ಗಣಪತಿ ಪ್ರಭು, ರೋ. ನಾರಾಯಣ ಬಿ.ಕೆ., ರೋ.ಸುಬ್ರಹ್ಮಣ್ಯ ಕಾರಂತ, ಮಾತಾಜಿಯವರು ಮಕ್ಕಳು ಉಪಸ್ಥಿತರಿದ್ದರು. ರೋ. ಗುರುರಾಜ ಭಟ್ ರು ಕಾರ್ಯಕ್ರಮ ಸಂಯೋಜಿಸಿದ್ದರು.















Leave a Reply