ಬ್ರಾಹ್ಮಣ ಮಹಾಸಭಾ ಪುತ್ತೂರು ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಇಂಜಿನಿಯರ್ಸ್ ದಿನಾಚರಣೆ ಪುತ್ತೂರು ಶ್ರೀ ದುರ್ಗಾಪರಮೇಶ್ವರಿ ದೇವಳದ ಭಗವತೀ ಸಭಾಗ್ರಹದಲ್ಲಿ ಜರುಗಿತು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಪೂರ್ಣಪ್ರಜ್ಞ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ. ಕೆ. ಸದಾಶಿವ ರಾವ್ ಅವರು ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅವರು ಮಾತನಾಡುತ್ತಾ ಸರ್ವೆಪಲ್ಲಿ ರಾಧಾಕೃಷ್ಣನ್ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಅವರ ಜೀವನಾದರ್ಶದ ಚಿಂತನೆಗಳೊಂದಿಗೆ ನಾವು ಬದುಕಬೇಕು. ಜೀವನದ ಮೊದಲ ಗುರುವಾದ ತಾಯಿಯು ಶಿಕ್ಷಕನ ಮೌಲ್ಯಗಳನ್ನು ಹೊಂದಿರಬೇಕು ಮತ್ತು ಶಿಕ್ಷಕರು ಮಾತೃ ಹೃದಯದಿಂದ ಕೂಡಿರಬೇಕು ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಶಿಕ್ಷಕರ ದಿನಾಚರಣೆಯ ಅಂಗವಾಗಿ ನಿವೃತ್ತ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಎಂ. ಪುಷ್ಪಲತಾ ಮತ್ತು ವಿಶ್ರಾಂತ ಪ್ರಾಂಶುಪಾಲರಾದ ಶ್ರೀ ರಮೇಶ್ ಅಡಿಗ ಇವರನ್ನು ಸನ್ಮಾನಿಸಲಾಯಿತು. ಇಂಜಿನಿಯರ್ಸ್ ದಿನಾಚರಣೆಯ ಅಂಗವಾಗಿ ಪ್ರತಿಭಾವಂತ ಯುವ ಆರ್ಕಿಟೆಕ್ಚರ್ ಕಲ್ಕೂರ ಬಿಲ್ಡರ್ಸ್ ನ ನಿರ್ದೇಶಕ ರಾಹುಲ್ ಕಲ್ಕೂರ ಇವರನ್ನು ಸನ್ಮಾನಿಸಲಾಯಿತು.
ನಂತರ ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಇಂಜಿನಿಯರ್ಸ್ ಮತ್ತು ಶಿಕ್ಷಕರನ್ನು ವೇದಿಕೆಗೆ ಕರೆದು ಗೌರವಿಸಲಾಯಿತು. ಸಪ್ಟೆಂಬರ್ ತಿಂಗಳಲ್ಲಿ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಸದಸ್ಯರನ್ನು ಗುರುತಿಸಿ ಗೌರವಿಸಲಾಯಿತು. ವೈದ್ಯಕೀಯ ತಪಾಸಣೆ ನಡೆಸಿಕೊಟ್ಟ ಡಾ. ಪ್ರಜ್ಞಾಮಿ ಅನಿಲ್ ಮತ್ತು ಸಹಕರಿಸಿದ ಮಂಜುಳಾ ಪ್ರಸಾದ್ ಮತ್ತು ಶ್ರೀಲಕ್ಷ್ಮಿ ತೆಂಕಿಲ್ಲಾಯ ಅವರನ್ನು ಗೌರವಿಸಲಾಯಿತು. ಆಪದ್ಬಾಂಧವ ಸಮಿತಿ ಸಂಚಾಲಕ ಪ್ರೊ. ಸುಬ್ರಮಣ್ಯ ಜೋಶಿ ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ ಉಡುಪ, ಮೋಹನ ಉಡುಪ, ನಾಗರಾಜ ಸರಳಾಯ, ಚಿದಂಬರ, ಪ್ರಿಯಂವದಾ ಐತಾಳ್ ಸಹಕರಿಸಿದರು. ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಅಡಿಗ ಪ್ರಸ್ತಾವನೆಗೈದು ಸ್ವಾಗತಿಸಿದರು. ಚೈತನ್ಯ ಎಂ.ಜಿ. ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ನಿರಂಜನ್ ಭಟ್ ವಂದನಾರ್ಪಣೆಗೈದರು.















Leave a Reply