ಶಿರ್ವಾ, ಅ.07: ಬೆಳ್ಳೆ ಗ್ರಾಮದ ಎಡ್ವಿನ್ ಆರ್ಕೆಡ್ ಕಟ್ಟಡದಲ್ಲಿರುವ ಪ್ಲಾಟ್ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ವಂಚನೆ ಹಾಗೂ ಜೀವ ಬೆದರಿಕೆ ಆರೋಪದ ಮೇರೆಗೆ ಇಬ್ಬರ ವಿರುದ್ಧ ಶಿರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ಳೆ ಗ್ರಾಮದ ನಿವಾಸಿ ವಿವಿಯನಾ ಜೊವಿಟಾ ಕ್ರಾಸ್ತಾ (42) ಅವರು ನೀಡಿರುವ ಖಾಸಗಿ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ, ಆರೋಪಿತರಾದ ಎಡ್ವರ್ಡ್ ಮಿಸ್ಕಿತ್ ಹಾಗೂ ಲೆನ್ಸಿ ಬಬಿತಾ ಮಿಸ್ಕಿತ್ ಅವರೊಂದಿಗೆ ಪ್ಲಾಟ್ ಖರೀದಿಸುವ ಕುರಿತು ವ್ಯವಹಾರ ನಡೆದಿತ್ತು.
ದಿನಾಂಕ 17/07/2021ರಂದು ₹31,00,000 ಮೊತ್ತಕ್ಕೆ ಎರಡನೇ ಆರೋಪಿತೆಯೊಂದಿಗೆ ಕರಾರು ಮಾಡಿಕೊಂಡಿದ್ದು, ಕರಾರಿನ ಷರತ್ತಿನಂತೆ 31/08/2024ರೊಳಗೆ ಪ್ಲಾಟ್‌ನ್ನು ಪಿರ್ಯಾದಿದಾರರ ಹೆಸರಿಗೆ ನೋಂದಾಯಿಸಿಕೊಡಬೇಕಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆದರೆ, ನಿಗದಿತ ಅವಧಿ ಕಳೆದರೂ ಪ್ಲಾಟ್ ನೋಂದಣಿ ಮಾಡಿಕೊಡದೆ, ವಿವಿಧ ಕಾರಣಗಳನ್ನು ಹೇಳಿ ಮುಂದಿನ ದಿನಗಳಲ್ಲಿ ನೋಂದಣಿ ಮಾಡಿಕೊಡುವುದಾಗಿ ನಂಬಿಸಲಾಗಿತ್ತು ಎಂದು ಆರೋಪಿಸಲಾಗಿದೆ. ಸುಮಾರು ಐದು ವರ್ಷ ಕಳೆದರೂ ಪ್ಲಾಟ್‌ನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಡಲಾಗಿಲ್ಲ ಎಂದು ಪಿರ್ಯಾದಿದಾರರು ದೂರಿದ್ದಾರೆ.
ಇದಲ್ಲದೆ, ಮೊದಲನೇ ಆರೋಪಿತನು ಪಿರ್ಯಾದಿದಾರರ ಪ್ಲಾಟ್‌ಗೆ ಬಂದು ಪಿರ್ಯಾದಿದಾರರಿಗೆ ಹಾಗೂ ಅವರ ಪತಿಗೆ ಅವಾಚ್ಯವಾಗಿ ನಿಂದಿಸಿ, ಪ್ಲಾಟ್‌ನ್ನು ನೋಂದಾಯಿಸಿಕೊಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಈ ದೂರಿನ ಆಧಾರದ ಮೇಲೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 75/2026ರಲ್ಲಿ BNS ಕಲಂ 316(2), 318(2), 318(3), 319(2), 318(4), 351(2) ಜೊತೆಗೆ 3(5)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.












Leave a Reply