ಕಿರಣ್ ಪೂಜಾರಿ ಸಾರಥ್ಯದಲ್ಲಿ…..

‘ಶೇರ್ ಅಂಡ್ ಕೇರ್’ – ಹಿರಿಯರೊಂದಿಗೆ ವಿದ್ಯಾರ್ಥಿಗಳ ಆತ್ಮೀಯ ಒಡನಾಟ; ವಿದ್ಯಾರ್ಥಿಗಳಿಗೆ ಮಾನವೀಯತೆಯ ಪಾಠ

ಬೆಂಗಳೂರು: ಎಂ.ಎಸ್. ರಾಮಯ್ಯ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಗಾಂಧಿ ಸೇವಾಶ್ರಮದಲ್ಲಿ ಕಾಳಜಿವಹಿಸಿ, ಒಡನಾಟದಿಂದ ಸಂಪರ್ಕಿತರಾಗುವ ಒಂದು ದಿನದ ‘ಶೇರ್ ಅಂಡ್ ಕೇರ್ – ಎ ಡೇ ಆಫ್ ಕೇರ್, ಕಂಪ್ಯಾನಿಯನ್ಶಿಪ್ ಅಂಡ್ ಕನೆಕ್ಷನ್’ ಎಂಬ ಸಮುದಾಯ ಸಂಪರ್ಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಒಲುಮೆಯಿಂದ ಪಾಲ್ಗೊಂಡಿದ್ದರು.

ಬಿ.ಕಾಂ ಅಂತಿಮ ವರ್ಷದ ಸುಮಾರು 46 ವಿದ್ಯಾರ್ಥಿಗಳು ಸೇವಾಶ್ರಮದ ಹಿರಿಯ ನಾಗರಿಕರೊಂದಿಗೆ ಸಮಯ ಕಳೆದರು. ಹಿರಿಯರೊಂದಿಗೆ ಮಾತುಕತೆ ಮಾತ್ರವಲ್ಲ ಆಟ, ಸಂಗೀತ ಹಾಗೂ ವಿವಿಧ ಮನರಂಜನಾ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸಂತಸದ ಕ್ಷಣಗಳನ್ನು ವಿದ್ಯಾರ್ಥಿಗಳು ಹಂಚಿಕೊಂಡರು.

ಹಿರಿಯರಿಗೆ ವಸ್ತು ರೂಪದ ನೆರವು ನೀಡುವುದಕ್ಕಿಂತಲೂ ಅವರೊಂದಿಗೆ ಸಮಯ ಕಳೆಯುವುದು, ಮಾತನಾಡುವುದು ಹಾಗೂ ಅವರ ಅನುಭವಗಳನ್ನು ಆಲಿಸುವ ಮೂಲಕ ಆತ್ಮೀಯ ಒಡನಾಟ ಬೆಳೆಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.

ಹಿರಿಯರ ಜೀವನಾನುಭವಗಳನ್ನು ಆಲಿಸುವ ಮೂಲಕ ವಿದ್ಯಾರ್ಥಿಗಳು ಸಹಾನುಭೂತಿ, ಗೌರವ, ಕೃತಜ್ಞತೆ ಹಾಗೂ ಸಾಮಾಜಿಕ ಹೊಣೆಗಾರಿಕೆಯ ಮಹತ್ವವನ್ನು ಅರಿತುಕೊಂಡರು. ಸಣ್ಣ ಪ್ರಮಾಣದ ಮಾನವೀಯ ಕಾಳಜಿಯೂ ಸಮಾಜದಲ್ಲಿ ಮಹತ್ವದ ಪರಿಣಾಮ ಬೀರಬಲ್ಲದು ಎಂಬ ಸಂದೇಶವನ್ನು ಕಾರ್ಯಕ್ರಮ ನೀಡಿತು. ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ನಿವಿತಾ ಗೌಡ ಎಂ. ಅವರು ಕಾರ್ಯಕ್ರಮದ ಸಂಯೋಜಕರಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

Leave a Reply

Your email address will not be published. Required fields are marked *