ಕೊರವಡಿ, ಸೆ. 5: ರೋಟರಿ ಸಮುದಾಯದಳ (RCC) ಕೊರವಡಿ ವತಿಯಿಂದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವು ಸೆಪ್ಟೆಂಬರ್ 5ರಂದು ಸಂಜೆ 5 ಗಂಟೆಗೆ ಶ್ರೀನಿಧಿ ಕಾಂಪ್ಲೆಕ್ಸ್ನ ರೋಟರಿ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಣಿಪಾಲ ಟೆಕ್ನಾಲಜೀಸ್, ಮಣಿಪಾಲದ ಹೆಡ್ – ಕ್ವಾಲಿಟಿ ಲಿಮಿಟೆಡ್ ಶ್ರೀನಿವಾಸ್ ರಾವ್, ಕುಂಭಾಶಿ ಭಾಗವಹಿಸಿ ಮಾತನಾಡಿದರು. ಶಿಕ್ಷಕರ ಸೇವೆ, ವಿದ್ಯಾರ್ಥಿಗಳ ಬದುಕಿನಲ್ಲಿ ಶಿಕ್ಷಕರ ಪಾತ್ರ ಹಾಗೂ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಕೊಡುಗೆಯನ್ನು ಅವರು ಸ್ಮರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು RCC ಕೊರವಡಿಯ ಅಧ್ಯಕ್ಷರಾದ ಶ್ರೀನಿವಾಸ ಪೂಜಾರಿ ವಹಿಸಿದ್ದರು.
RCC ಕೊರವಡಿಯ ಸ್ಥಾಪಕ ಅಧ್ಯಕ್ಷರಾದ ರಾಮಚಂದ್ರ ಉಪಾಧ್ಯರು ಪ್ರಾಸ್ತಾವಿಕವಾಗಿ ಮಾತನಾಡಿದರು. ರಮೇಶ್ ಕಾಂಚನ್ ಸ್ವಾಗತಿಸಿದರು. ಕುಮಾರಿ ಸಿರಿ ಉಪಾಧ್ಯ ಪ್ರಾರ್ಥನೆ ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ವೇತಾ ಶ್ರೀನಿಧಿ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕಿಯಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಶ್ರೀಮತಿ ಮಾಲತಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಪೂರ್ವಿ ಅವರು ಸನ್ಮಾನ ಪತ್ರವನ್ನು ವಾಚಿಸಿದರು.ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಗೌರವಿಸುವ ಮೂಲಕ ಅವರ ನಿಸ್ವಾರ್ಥ ಸೇವೆಗೆ ಕೃತಜ್ಞತೆ ಸಲ್ಲಿಸಲಾಯಿತು. RCC ಕೊರವಡಿಯ ಕಾರ್ಯದರ್ಶಿ ಸುಪ್ರಿತಾ ಪ್ರಕಾಶ್ ವಂದನಾರ್ಪಣೆ ನೆರವೇರಿಸಿದರು. ಕಾರ್ಯಕ್ರಮವು ಆತ್ಮೀಯ ಹಾಗೂ ಅರ್ಥಪೂರ್ಣವಾಗಿ ನೆರವೇರಿತು.












Leave a Reply