ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಯುವವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ(ರಿ) ಇವರಿಂದ ಶಿಕ್ಷಕರ ದಿನಾಚರಣೆಯ ಆಚರಣೆ

ಸರ್ವಪಳ್ಳಿ ಡಾ.ರಾಧಕೃಷ್ಣನ್ ಇವರ ಜನುಮದಿನದ ಅಂಗವಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಿಕೊಳ್ಳುವ ಸಂದರ್ಭದಲ್ಲಿ ನಿವೃತ್ತ ಅಧ್ಯಾಪಕರದ ಶ್ರೀ ಕೆ. ಜನಾರ್ಧನ್ ಹಂದೆ ಅವರನ್ನು ಕೋಟದ ಅವರ ಸ್ವಗ್ರಹದಲ್ಲಿ ಯುವ ವೇದಿಕೆಕೂಟ ಮಹಾಜಗತ್ತು ಸಾಲಿಗ್ರಾಮ (ರಿ.) ಸಾಲಿಗ್ರಾಮ ಅಂಗಸಂಸ್ಥೆ ಇವರ ವತಿಯಿಂದ ಸನ್ಮಾನಿಸಲಾಯಿತು.

ವೇದಿಕೆಯ ಗೌರವಾಧ್ಯಕ್ಷರದ ಶ್ರೀ ಪಿ. ವೈ.ಕೃಷ್ಣಪ್ರಸಾದ್ ಹೇರ್ಳೆಯವರು ಪ್ರಾಸ್ತವಿಕ ನುಡಿಗಳನ್ನು ಆಡಿದರು. ವೇದಿಕೆಯ ಕಾರ್ಯದರ್ಶಿ ಸುದಿಂದ್ರ ಐತಾಳ ಸನ್ಮಾನ ಪತ್ರ ವಾಚಿಸಿದರು ವೇದಿಕೆಯ ಅಧ್ಯಕ್ಷರಾದ ಸಚಿನ್ ಹೇರ್ಳೆ, ಸದಸ್ಯರಾದ ನಾಗರಾಜ್ ಐತಾಳ, ಶ್ರೀ ಕೃಷ್ಣ ಐತಾಳ, ಶ್ರೀಕಾಂತ್ ಐತಾಳ,ರವಿ ಉಪಾಧ್ಯ, ಪ್ರಶಾಂತ್ ಹೇರ್ಳೆ, ಲೋಹಿತಕ್ಷ ಉಪಾಧ್ಯ, ಪನ್ನಗ ನಾವಡ, ರಾಮಕೃಷ್ಣ ಸೋಮಯಾಜಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *