ಕೋಟ: ತಮ್ಮಲ್ಲಿರುವ ಸಂಪನ್ಮೂಲಗಳನ್ನು ಈ ಸಮಾಜಕ್ಕೆ ಧಾರೆ ಎರೆದು ಸಮರ್ಪಿಸಿಕೊಳ್ಳುವ ಸಂಪತ್ ಕುಮಾರ್ ರಂತಹ ವ್ಯಕ್ತಿಗಳು ಈ ಸಮಾಜದ ಆಸ್ತಿಗಳಾಗಿ ಹೊರೆಹೊಮ್ಮುತಾರೆ ಇದು ವಿ.ಶೈನ್ ಕೊಚಿಂಗ್ ಸೆಂಟರ್ ಗಳ ಮೂಲಕ ಒಂದಿಷ್ಟು ಯುವ ಮನಸ್ಸುಗಳಿಗೆ ಉದ್ಯೋಗ ಸೃಷ್ಠಿಯ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದು ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಭಾನುವಾರ ಕೋಟದ ಡಾ.ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ ಶ್ರೀ ಕೃಷ್ಣ ಪ್ರಸಾದ್ ಪೌಂಡೇಶನ್‌ನ ಪ್ರಾಯೋಜಕತ್ವದಲ್ಲಿ ವಿ-ಶೈನ್ ಕೋಚಿಂಗ್ ಸೆಂಟರ್ ಕೋಟ ನೇತೃತ್ವದಲ್ಲಿ ರಾಜ್ಯ ಸರ್ಕಾರದಿಂದ ಸರಿಸುಮಾರು 15,000 ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕ, ದೈಹಿಕ ಶಿಕ್ಷಕ ಮತ್ತು ಕಂಪ್ಯೂಟರ್ ಶಿಕ್ಷಕರ ಹುದ್ದೆಗಳನ್ನು ಆಹ್ವಾನಿಸಿದ್ದು , ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆಯ ಪೂರ್ವಭಾವಿಯಾಗಿ ಉಚಿತ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿ ಸರಕಾರಿ ಇಲಾಖೆಯಲ್ಲಿ ಅತಿ ಹೆಚ್ಚು ಉತ್ತರ ಕರ್ನಾಟಕದ ಜನ ಆಯ್ಕೆಗೊಳ್ಳುವ ಇಂದಿನ ಕಾಲಘಟ್ಟದಲ್ಲಿ ನಮ್ಮ ಅವಿಭಜಿತ ಜಿಲ್ಲೆಗಳ ಉದ್ಯೋಗಾಂಶಿಗಳಿಗೆ ಈ ವಿಶೈನ್ ಕೋಚಿಂಗ್ ಹೊಸ ಆಯಾಮ ನೀಡಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕೃಷ್ಣಪ್ರಸಾದ್ ಫೌಂಡೇಶನ್ ಮುಖ್ಯಸ್ಥ ಸಂಪತ್ ಕುಮಾರ್ ಶೆಟ್ಟಿ ವಹಿಸಿ ಮಾತನಾಡಿ ಉದ್ಯಮ ಕ್ಷೇತ್ರದಲ್ಲಿ ಎಷ್ಟು ಯಶಸ್ಸು ಕಾಣುತ್ತೇವೆ ಅದೇ ರೀತಿ ಉದ್ಯೋಗ ಕ್ಷೇತ್ರದಲ್ಲೂ ಯುವ ಮನಸ್ಸುಗಳು ವಿ.ಶೈನ್ ಕೋಚಿಂಗ್ ಮೂಲಕ ಶಿಕ್ಷಕರ ಕ್ಷೇತ್ರದಲ್ಲಿ ಮುಂಚೂಣಿಗೆ ನಿಲ್ಲುವಂತ್ತಾಗಲಿ ಎಂದು ಹಾರೈಸಿದರು.
ಈ ವೇಳೆ ಸಂಪನ್ಮೂಲ ವ್ಯಕ್ತಿಗಳಾದ ಉಪನ್ಯಾಸಕರಾದ ಡಾ.ಪದ್ಮನಾಭ ಸಿ.ಎಚ್,ಆನಂದ್ ಜಿ,ಸುಧೀರ್ ಪ್ರಭು ಇವರುಗಳನ್ನು ವಿ.ಶೈನ್ ಕೋಚಿಂಗ್ ಸೆಂಟರ್ ಪರವಾಗಿ ಗೌರವಿಸಲಾಯಿತು. ವಿಶೈನ್ ಕೋಚಿಂಗ್ ಸೆಂಟರ್ ಮುಖ್ಯಸ್ಥ ಹರೀಶ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ನಿರ್ದೇಶಕ ಗಿರೀಶ್ ಕುಮಾರ್ ಶೆಟ್ಟಿ ಸ್ವಾಗತಿಸಿದರು.ಸಂಸ್ಥೆಯ ಪ್ರಸಾದ ಬಿಲ್ಲವ ವಂದಿಸಿದರು.
ಪೂರ್ವಾಹ್ನ 9.30ರಿಂದ ಆರಂಭಗೊoಡ ಕಾರ್ಯಾಗಾರ ಸಂಜೆವರೆಗೆ ತರಬೇತಿ ಆಸಕ್ತರು ಭಾಗಿಯಾಗಿ ಪ್ರಯೋಜನ ಪಡೆದುಕೊಂಡರು. ಕೋಟದ ಡಾ.ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ ಶ್ರೀ ಕೃಷ್ಣ ಪ್ರಸಾದ್ ಪೌಂಡೇಶನ್‌ನ ಪ್ರಾಯೋಜಕತ್ವದಲ್ಲಿ ವಿ-ಶೈನ್ ಕೋಚಿಂಗ್ ಸೆಂಟರ್ ಕೋಟ ನೇತೃತ್ವದಲ್ಲಿ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕ, ದೈಹಿಕ ಶಿಕ್ಷಕ ಮತ್ತು ಕಂಪ್ಯೂಟರ್ ಶಿಕ್ಷಕರ ಲಿಖಿತ ಪರೀಕ್ಷೆಯ ಪೂರ್ವಭಾವಿಯಾಗಿ ಉಚಿತ ತರಬೇತಿ ಕಾರ್ಯಗಾರವನ್ನು ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಶ್ರೀ ಕೃಷ್ಣಪ್ರಸಾದ್ ಫೌಂಡೇಶನ್ ಮುಖ್ಯಸ್ಥ ಸಂಪತ್ ಕುಮಾರ್ ಶೆಟ್ಟಿ, ಸಂಪನ್ಮೂಲ ವ್ಯಕ್ತಿಗಳಾದ ಉಪನ್ಯಾಸಕರಾದ ಡಾ.ಪದ್ಮನಾಭ ಸಿ.ಎಚ್,ಆನಂದ್ ಜಿ,ಸುಧೀರ್ ಪ್ರಭು ಇದ್ದರು.












Leave a Reply