ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೆಸರುಗದ್ದೆ ಮಿಂದೆದ್ದ ಕಾರ್ಕಡದ ಜನತೆ ಕೆಸ್ರರಂಗ್ ಆಟ – 2026 ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಕಾರ್ಕಡ ರಾಜು ಪೂಜಾರಿ

ಕಾರ್ಕಡ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಕಡ ಹಾಗೂ ಕಾರ್ಕಡ ಗ್ರಾಮದ ಹತ್ತು ಸಮಸ್ತರ ಸಹಕಾರದೊಂದಿಗೆ ಕಾರ್ಕಡ ಗ್ರಾಮಸ್ಥರಿಗಾಗಿ `ಕೆಸ್ರ್ ರಂಗ್ ಆಟ – 2026′ ಕೆಸರುಗದ್ದೆ ಕ್ರೀಡಾಕೂಟವನ್ನು ಭಾನುವಾರ ಕಾರ್ಕಡ ಪರಿಸರದಲ್ಲಿ ಜರಗಿತು.

ಕಾರ್ಯಕ್ರಮವನ್ನು ಸಾಲಿಗ್ರಾಮ ಪಟ್ಟಣಪಂಚಾಯತ್ ಮಾಜಿ ಅಧ್ಯಕ್ಷ ಕಾರ್ಕಡ ರಾಜು ಪೂಜಾರಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಾಬು ಮರಕಾಲ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಪಟ್ಟಣಪಂಚಾಯತ್ ಮಾಜಿ ಸದಸ್ಯರಾದ ಸಂಜೀವ ದೇವಾಡಿಗ,ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ಪಾಂಡು ಪೂಜಾರಿ,ಕಾರ್ಯದರ್ಶಿ ಶೀನ,ಕೋಶಾಧಿಕಾರಿ ಸಂತೋಷ್ ಪೂಜಾರಿ, ಜೊತೆಕಾರ್ಯದರ್ಶಿ ದೇವೇಂದ್ರ ಪೂಜಾರಿ, ದುರ್ಗಾಪರಮೇಶ್ವರಿ ದೇಗುಲದ ಮುಕ್ತೇಸರ ಲಕ್ಷಣ್ ನಕ್ಷತ್ರಿ, ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಸತ್ಯನಾರಾಯಣ ಉಪಸ್ಥಿತರಿದ್ದರು.

ಗಮನ ಸೆಳೆದ ಕ್ರೀಡೆಗಳು ಕಾರ್ಕಡ ವಿಶ್ವೇಶ್ವರ ದೇವಸ್ಥಾನದ ಹತ್ತಿರದ ಕೆಸರುಗದ್ದೆಯಲ್ಲಿ ನಡೆದ ವಿವಿಧ ವಿಭಾಗಗಳ ಕ್ರೀಡಾ ಸ್ಪರ್ಧೆಗಳಲ್ಲಿ ಪುರುಷರಿಗೆ ಉಪ್ಪಿನ ಮೂಟೆ, ಹಿಮ್ಮುಖ ಓಟ, ಕಪ್ಪೆ ಜಿಗಿತ, ಓಟ, ಮಡಿಕೆ ಒಡೆಯುವುದು ಹಾಗೂ ಹಗ್ಗ ಜಗ್ಗಾಟ, ಮಹಿಳೆಯರಿಗೆ ಹಗ್ಗ ಜಗ್ಗಾಟ, ಓಟ, ತೆಂಗಿನಕಾಯಿ ಎಸೆತ, ಹಿಮ್ಮುಖ ಓಟ, ನಿಂಬೆ ಚಮಚ ಓಟ ಹಾಗೂ ಮಡಿಕೆ ಒಡೆಯುವುದು. ಮಕ್ಕಳಿಗೆ (10 ರಿಂದ 16 ವರ್ಷ)ಓಟ, ಹಿಮ್ಮುಖ ಓಟ, ಒಂದು ಕಾಲಿನ ಓಟ ಸ್ಪರ್ಧೆ,ಮಕ್ಕಳಿಗೆ (3 ರಿಂದ 7ನೇ ತರಗತಿ) ಓಟ, ತ್ರೋಬಾಲ್ ಎಸೆತ,ಹಿರಿಯರಿಗೆ (50 ವರ್ಷ ಮೇಲ್ಪಟ್ಟವರಿಗೆ ಓಟ ಸ್ಪರ್ಧೆಗಳು ಜರಗಿದವು.

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಕಡ ಹಾಗೂ ಕಾರ್ಕಡ ಗ್ರಾಮದ ಹತ್ತು ಸಮಸ್ತರ ಸಹಕಾರದೊಂದಿಗೆ ಕಾರ್ಕಡ ಗ್ರಾಮಸ್ಥರಿಗಾಗಿ `ಕೆಸ್ರ್ ರಂಗ್ ಆಟ – 2026′ ಕೆಸರುಗದ್ದೆ ಕ್ರೀಡಾಕೂಟವನ್ನು ಸಾಲಿಗ್ರಾಮ ಪಟ್ಟಣಪಂಚಾಯತ್ ಮಾಜಿ ಅಧ್ಯಕ್ಷ ಕಾರ್ಕಡ ರಾಜು ಪೂಜಾರಿ ಉದ್ಘಾಟಿಸಿದರು. ಪಟ್ಟಣಪಂಚಾಯತ್ ಮಾಜಿ ಸದಸ್ಯರಾದ ಸಂಜೀವ ದೇವಾಡಿಗ,ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ಪಾಂಡು ಪೂಜಾರಿ,ಕಾರ್ಯದರ್ಶಿ ಶೀನ,ಕೋಶಾಧಿಕಾರಿ ಸಂತೋಷ್ ಪೂಜಾರಿ, ಇದ್ದರು.

Leave a Reply

Your email address will not be published. Required fields are marked *