ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಡಾ. ಬಿ. ಎಂ. ಉಮೇಶ್ ಕುಮಾರ್ ರವರಿಂದ ಅಸ್ಸಾಂನ ಕಾಮಾಖ್ಯಾ ದೇವಾಲಯದಲ್ಲಿ ‘ಕಾಮಾಖ್ಯಪ್ರಿಯ’ ಭಕ್ತಿಗೀತೆಗಳ ಆಲ್ಬಮ್ ಬಿಡುಗಡೆ

ಗುವಾಹಾಟಿ (ಅಸ್ಸಾಂ): ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಸಂಗೀತ ಸಂಯೋಜಕ ಮಹೇಶ್ ಮಹದೇವ್ ಸೃಷ್ಟಿಸಿರುವ ನೂತನ ‘ಕಾಮಾಖ್ಯಪ್ರಿಯ’ ರಾಗ ಹಾಗೂ 9 ಭಾಷೆಗಳಲ್ಲಿ ಮೂಡಿಬಂದಿರುವ ಭಕ್ತಿಗೀತೆಗಳ ವಿಶೇಷ ಆಲ್ಬಮ್ ಅನ್ನು ಕ್ರಿಯೇಟಿವ್ ಡಿವೈಸಸ್ ಸಂಸ್ಥೆಯ ಛೇರ್ಮನ್, ಸಹಕಾರ ರತ್ನ ಹಾಗೂ ಕಲಾಪೋಷಕ ಡಾ. ಬಿ. ಎಂ. ಉಮೇಶ್ ಕುಮಾರ್ ಅವರು ಅಸ್ಸಾಂನ ಪ್ರಸಿದ್ಧ ಕಾಮಾಖ್ಯಾ ದೇವಾಲಯದಲ್ಲಿ ಬಿಡುಗಡೆಗೊಳಿಸಿದರು.

ಈ ವಿಶೇಷ ಆಲ್ಬಮ್‌ನಲ್ಲಿ ಮಹೇಶ್ ಮಹದೇವ್ ಅವರು ಸಂಗೀತ ಸಂಯೋಜಿಸಿರುವ ‘ಜೈ ಜೈ ಮಾ ಕಾಮಾಖ್ಯಾ’, ‘ಕಾಮಾಖ್ಯ ಬೀಜ ಮಂತ್ರ’ ಹಾಗೂ ‘ಕಾಮಾಖ್ಯಾ ಸ್ತೋತ್ರಂ’ ಸೇರಿದಂತೆ ಹಲವು ಕೃತಿಗಳು ಒಳಗೊಂಡಿವೆ.ದೇವಿ ಕಾಮಾಖ್ಯಯ ಅನುಗ್ರಹದಿಂದ ಸೃಷ್ಟಿಯಾಗಿರುವ ಈ ನೂತನ ಶಾಸ್ತ್ರೀಯ ರಾಗಕ್ಕೆ ‘ಕಾಮಾಖ್ಯಪ್ರಿಯ’ ಎಂದು ಹೆಸರಿಡಲಾಗಿದೆ.

ಇದು ಕರ್ನಾಟಕ ಶಾಸ್ತ್ರೀಯ ಸಂಗೀತದ 20ನೇ ಮೇಳಕರ್ತ ರಾಗ ನಟಭೈರವಿಯ ಜನ್ಯ ರಾಗವಾಗಿದ್ದು, ಶಾಡವ–ಶಾಡವ ರಾಗ ವರ್ಗಕ್ಕೆ ಸೇರಿದೆ.ಭಕ್ತಿ ಮತ್ತು ಭಾರತೀಯ ಭಾಷಾ ವೈವಿಧ್ಯತೆಯನ್ನು ಒಂದೇ ವೇದಿಕೆಯಲ್ಲಿ ತರುವ ಉದ್ದೇಶದಿಂದ ಕನ್ನಡ, ಅಸ್ಸಾಮಿ, ಸಂಸ್ಕೃತ, ಹಿಂದಿ, ತೆಲುಗು, ಬೆಂಗಾಲಿ, ತಮಿಳು, ನೇಪಾಳಿ ಹಾಗೂ ಒಡಿಯಾ ಸೇರಿದಂತೆ ಒಟ್ಟು ಒಂಬತ್ತು ಭಾಷೆಗಳಲ್ಲಿ ಈ ಕೃತಿಗಳನ್ನು ರಚಿಸಲಾಗಿದೆ.

ಈ ನೂತನ ಗೀತೆಗೆ ಖ್ಯಾತ ಬಹುಭಾಷಾ ಹಿನ್ನೆಲೆ ಗಾಯಕಿ ಡಾ. ಪ್ರಿಯದರ್ಶಿನಿ, ರಾಜ್ ನಸೀಮ್, ಅಜಯ್ ವಾರಿಯರ್ ಹಾಗೂ ಮಹೇಶ್ ಮಹದೇವ್ ಹಾಡಿದ್ದಾರೆ. ಸುಮತಿ ರಾಮ್, ರಿಯಾ ಚೌಧರಿ, ಮಹೇಶ್ ಮಹದೇವ್ ಮತ್ತು ರಾಜ್ ನಸೀಮ್ ಸಾಹಿತ್ಯ ಬರೆದಿದ್ದಾರೆ.ಶಿವಶಕ್ತಿ ಡಿಜಿಟಲ್ ಮೀಡಿಯಾ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಸಂಗೀತ ಯೋಜನೆಗೆ ಸುನಿಲ್ ಮಹಾದೇವ್ ಹಾಗೂ ತಂಡ ಛಾಯಾಗ್ರಹಣ ಮತ್ತು ಸಂಕಲನ ಮಾಡಿದ್ದಾರೆ.

ಈ ಆಲ್ಬಮ್‌ನ ವೀಡಿಯೋ ಆವೃತ್ತಿಯು ‘PM Audios and Entertainments’ ಯೂಟ್ಯೂಬ್ ಚಾನೆಲ್ ಹಾಗೂ ಪ್ರಮುಖ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ. ಕಾಮಾಖ್ಯ ದೇವಿಯ ಆರಾಧನೆಯನ್ನು 9 ಭಾಷೆಗಳ ಮೂಲಕ ಭಕ್ತರ ಮನೆಮನಕ್ಕೆ ತಲುಪಿಸುವ ವಿಶಿಷ್ಟ ಪ್ರಯತ್ನ ಇದಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *