ಕಿರಣ್ ಪೂಜಾರಿ ಸಾರಥ್ಯದಲ್ಲಿ…..

‘ಜಾಂಬವತಿ ಕಲ್ಯಾಣ’ ಯಕ್ಷಗಾನ ತಾಳಮದ್ದಳೆ ರಂಗ ಪ್ರಸ್ತುತಿ

ಕೋಟ: ಎಂ.ಜಿ.ಎo. ಸಂಧ್ಯಾ ಕಾಲೇಜು ಉಡುಪಿ ಇದರ ಸಂಸ್ಥಾಪನಾ ದಿನಾಚರಣೆ ಹಾಗೂ ಐದನೇ ವರ್ಷದ ಪ್ರಾರಂಭೋತ್ಸವದ ಅಂಗವಾಗಿ ಸೆ.1ರಂದು ನೂತನ ರವೀಂದ್ರ ಮಂಟಪ ಎಂ.ಜಿ.ಎo. ಕಾಲೇಜು ಆವರಣ ಉಡುಪಿಯಲ್ಲಿ ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಸಂಯೋಜನೆಯಲ್ಲಿ ಯಕ್ಷಗಾನ ತಾಳಮದ್ದಳೆ ‘ಜಾಂಬವತಿ ಕಲ್ಯಾಣ’ ರಂಗ ಪ್ರಸ್ತುತಿಗೊಂಡಿತು.

ಪ್ರಾಂಶುಪಾಲರಾದ ಡಾ. ದೇವಿದಾಸ್ ನೈಕ್ರ ಕಲಾವಿದರನ್ನು ಗೌರವಿಸಿದರು. ಕಲಾವಿದರಾಗಿ ಜಬ್ಬಾರ್ ಸಮೋ, ವಾಸುದೇವ ರಂಗ ಭಟ್, ಲಂಬೋದರ ಹೆಗಡೆ ನಿಟ್ಟೂರು, ಶಿವಾನಂದ ಕೋಟ, ಆದಿತ್ಯ ಹೆಗಡೆ, ಸುಧಾ ಮಣೂರು, ಭರತ್‌ಚಂದನ್ ಕೋಟೇಶ್ವರ, ಪಂಚಮಿ ವೈದ್ಯ ಭಾಗವಹಿಸಿದ್ದರು.

Leave a Reply

Your email address will not be published. Required fields are marked *