ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ವಿವಾಹದ ಶೃಂಗಾರ ತರಬೇತಿ ಕಾರ್ಯಕ್ರಮ

ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬ್ರಹ್ಮಾವರ ತಾಲೂಕು ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಬುಧವಾರ ಪಾಂಡೇಶ್ವರ ವಲಯದ ಗುಂಡ್ಮಿ ಕಾರ್ಯಕ್ಷೇತ್ರದ ಶ್ರೀ ಭಗವತಿ ಜ್ಞಾನವಿಕಾಸ ಕೇಂದ್ರದಲ್ಲಿ ಸೃಜನಶೀಲ ಕಾರ್ಯಕ್ರಮ ದಡಿಯಲ್ಲಿ ವಿವಾಹದ ಶೃಂಗಾರ ತರಬೇತಿ ಕಾರ್ಯಕ್ರಮವನ್ನು ಹಂದೆ ಸಭಾಭವನದಲ್ಲಿ ಹಮ್ಮಿಕೊಂಡಿತು.

ಕಾರ್ಯಕ್ರಮವನ್ನು ಸಾಲಿಗ್ರಾಮ ಪಟ್ಟಣ ಪಂಚಾಯತಿಯ ಮಾಜಿ ಅಧ್ಯಕ್ಷೆ ಸುಲತ ಹೆಗ್ಡೆ ಉದ್ಘಾಟಿಸಿ ಮಹಿಳೆಯರಿಗೆ ಅರ್ಥಪೂರ್ಣ ಕಾರ್ಯಕ್ರಮ, ಪ್ರತಿಯೊಬ್ಬ ಮಹಿಳೆಯು ತಾನು ಚೆನ್ನಾಗಿ ಕಾಣಬೇಕು ಎನ್ನುವ ಆಸೆಯಿಂದ ಬಯಸುತ್ತಾಳೆ , ಈ ದಿಸೆಯಲ್ಲಿ ಇದರ ಪ್ರಯೋಜನ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಾಸ್ತಾನ ಸಿ ಎ ಬ್ಯಾಂಕ್ ನಿರ್ದೇಶಕಿ ಲೀಲಾವತಿ ಗಂಗಾಧರ್ ಮಾತೃಶ್ರೀ ಹೇಮಾವತಿ ಅಮ್ಮನವರ ಪ್ರತಿಯೊಂದು ಕಾರ್ಯಕ್ರಮವು ಅತ್ಯುತ್ತಮವಾದ ಕಾರ್ಯಕ್ರಮ, ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ ಜಗದೀಶ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಒಕ್ಕೂಟದ ಮಾಜಿ ಅಧ್ಯಕ್ಷ ಶೇಖರ್ ಪೂಜಾರಿ, ತರಬೇತಿದರಾದ ಪೂರ್ಣಿಮಾ ಉಪಸಿತರಿದ್ದರು. ಕಾರ್ಯಕ್ರಮವನ್ನು ಜ್ಞಾನವಿಕಾಸ ಸಮನ್ವಯಾಧಿಕಾರಿ ಪುಷ್ಪಲತಾ ಸ್ವಾಗತಿಸಿ ನಿರೂಪಿಸಿ,ಸೇವಾ ಪ್ರತಿನಿಧಿ ಶಶಿಕಲ ವಂದಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬ್ರಹ್ಮಾವರ ತಾಲೂಕು ಮಹಿಳಾ ಜ್ಞಾನವಿಕಾಸ ಸಂಯೋಜನೆಯಲ್ಲಿ ಪಾಂಡೇಶ್ವರ ವಲಯದ ಗುಂಡ್ಮಿ ಕಾರ್ಯಕ್ಷೇತ್ರದ ಶ್ರೀ ಭಗವತಿ ಜ್ಞಾನವಿಕಾಸ ಕೇಂದ್ರದಲ್ಲಿ ಸೃಜನಶೀಲ ಕಾರ್ಯಕ್ರಮವನ್ನು ಸಾಲಿಗ್ರಾಮ ಪಟ್ಟಣ ಪಂಚಾಯತಿಯ ಮಾಜಿ ಅಧ್ಯಕ್ಷೆ ಸುಲತ ಹೆಗ್ಡೆ ಉದ್ಘಾಟಿಸಿದರು.ಸಾಸ್ತಾನ ಸಿ ಎ ಬ್ಯಾಂಕ್ ನಿರ್ದೇಶಕಿ ಲೀಲಾವತಿ ಗಂಗಾಧರ್, ಒಕ್ಕೂಟದ ಮಾಜಿ ಅಧ್ಯಕ್ಷ ಶೇಖರ್ ಪೂಜಾರಿ, ತರಬೇತಿದರಾದ ಪೂರ್ಣಿಮಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *