ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಬಿಲ್ಲವ ಯುವ ಬ್ರಿಗೇಡ್‌ನಲ್ಲಿ ನಾರಾಯಣ ಗುರು ಜಯಂತಿಯ ಅಂಗವಾಗಿ ಕರಾವಳಿಯ ಹಾಸ್ಯ ಕಲಾವಿದನಿಗೆ ಗೌರವ ಸಂಮ್ಮಾನ

ಕೋಟ: ಇಲ್ಲಿನ ಬೆಂಗಳೂರಿನ ಹೆಬ್ಬಾಳದ ಹೋಟೆಲ್ ಅಮೃತ್ ಸಾಗರ್‌ನಲ್ಲಿ ನೂತನವಾಗಿ ಪ್ರಾರಂಭಗೊoಡ ಬಿಲ್ಲವ ಯುವ ಬ್ರಿಗೇಡ್‌ನ ಎರಡನೇ ಪೂರ್ವ ಭಾವಿ ಸಭೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ೧೭೨ನೇ ಜಯಂತಿಯನ್ನು ಹಮ್ಮಿಕೊಂಡಿತು. ಶ್ರೀ ನಾರಾಯಣ ಗುರು ಭಾವ ಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವುದರೊಂದಿಗೆ ನಾರಾಯಣಗುರುಗಳು ಜಗತ್ತಿಗೆ ನೀಡಿದ ಸಂದೇಶವನ್ನು ವೇದಿಕೆಯಲ್ಲಿದ್ದ ಗಣ್ಯರು ನೀಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಕರಾವಳಿಯ ಬಡಗಿನ ಯಕ್ಷ ಹಾಸ್ಯ ಕಲಾವಿದ ಚೌಕುಳಮಕ್ಕಿ ಬಸವ ಪೂಜಾರಿಯವರನ್ನು ಗೌರವ ಧನ ನೀಡಿ ಸನ್ಮಾನಿಸಲಾಯಿತು. ಸಂಘಟನೆಯ ಮುಖ್ಯಸ್ಥರಾದ ಪ್ರದೀಪ್ ಪೂಜಾರಿ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ, ಉದ್ದೇಶದ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡುವುದರೊಂದಿಗೆ ಎಲ್ಲರ ಒಗ್ಗಟ್ಟಿನೊಂದಿಗೆ ಸಮುದಾಯ ಬಲಪಡಿಸೋಣ, ಒಂದಾಗಿ ಕಟ್ಟ ಕಡೆಯ ಬಿಲ್ಲವರು ಮುನ್ನೆಲೆಗೆ ಬರುವಂತೆ ಮಾಡುವುದು ನಮ್ಮ ಹೋರಾಟ ಎಂಬುದಾಗಿ ಘೋಷಿಸಿದರು.

ಕಾರ್ಯಕ್ರಮದಲ್ಲಿ ಅಥಿತಿಗಳು, ಸಂಸ್ಥೆಯ ಸದಸ್ಯರು ಭಾಗಿಯಾಗಿದ್ದರು. ಬೆಂಗಳೂರಿನ ಹೆಬ್ಬಾಳದಲ್ಲಿ ನಡೆದ ಬಿಲ್ಲವ ಯುವ ಬ್ರಿಗೇಡ್‌ನ ಎರಡನೇ ಪೂರ್ವ ಭಾವಿ ಸಭೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ೧೭೨ನೇ ಜಯಂತಿಯನ್ನು ಹಮ್ಮಿಕೊಂಡ ಸಭೆಯಲ್ಲಿ ಕರಾವಳಿಯ ಬಡಗಿನ ಯಕ್ಷ ಹಾಸ್ಯ ಕಲಾವಿದ ಚೌಕುಳಮಕ್ಕಿ ಬಸವ ಪೂಜಾರಿಯವರನ್ನು ಗೌರವ ಧನ ನೀಡಿ ಸನ್ಮಾನಿಸಲಾಯಿತು. ಸಂಘಟನೆಯ ಮುಖ್ಯಸ್ಥರಾದ ಪ್ರದೀಪ್ ಪೂಜಾರಿ ಸೇರಿದಂತೆ ಅನೇಕರಿ ಇದ್ದರು.

Leave a Reply

Your email address will not be published. Required fields are marked *