ಕೋಟ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋಟ ಇಲ್ಲಿ ಆಯೋಜಿಸಿದ್ದ ಹಿರಿಯ ಸಾಹಿತಿ ಪ್ರೊ.ಕ ವೆಂ ರಾಜಗೋಪಾಲರ ಶತಮಾನೋತ್ಸವ ಸಂಸ್ಮರಣೆ, ದತ್ತಿ ಉಪನ್ಯಾಸ, ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ನೀಲಾವರ ಸುರೇಂದ್ರ ಅಡಿಗರ ಅಡಿಗರ 82ನೇ ಕೃತಿ ಅಡಿಗರ ಬಿಡಿ ಬರೆಹಗಳು’ ಕೃತಿಯ ಪುಸ್ತಕವನ್ನು ಉಡುಪಿ ಜಿಲ್ಲಾ ಕಸಾಪ ಸ್ಥಾಪಕ ಅಧ್ಯಕ್ಷ ಎ.ಎಸ್.ಎನ್ ಹೆಬ್ಬಾರ್ ಬಿಡುಗಡೆಗೊಳಿಸಿ ಅಡಿಗರ ಸಾಹಿತ್ಯಿಕ ಹಾಗೂ ಸಾಹಿತ್ಯ ಪರಿಷತ್ ಕಾಶರ್ಯಚಟುವಟಿಕೆಗಳನ್ನು ಶ್ಲಾಘಿಸಿದರು.
ನಿವೃತ್ತ ಪ್ರಾಚಾರ್ಯ ಎಂ.ಬಾಲಕೃಷ್ಣ ಶೆಟ್ಟಿ ಅಕ್ಕಮ್ಮ ಮತ್ತು ಪರಮೇಶ್ವರ ಹೆಬ್ಬಾರ ಚುಂಗಿಗುಡ್ಡೆ ಸ್ಮಾರಕ ದತ್ತಿ ಉಪನ್ಯಾಸದಲ್ಲಿ ಕುಂದಾಪ್ರ ಭಾಷಾ ಸೊಬಗಿನ ಕುರಿತು ಮಾತನಾಡಿದರು. ಉಪನ್ಯಾಸಕರಾದ ರಾಜ್ಯಪ್ರಶಸ್ತಿ ಪುರಸ್ಕತ ಶಿಕ್ಷಕ ನರೇಂದ್ರ ಕುಮಾರ್ ಕೋಟ ಅವರು ಶ್ರೀಮತಿ ರತ್ನಾವತಿ ಉಪನ್ಯಾಸದಲ್ಲಿ ಶಿಕ್ಷಣ ಮತ್ತು ಶಿಕ್ಷಕ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ, ರಂಗ ಕರ್ಮಿ ಪ್ರೊ. ಉಪೇಂದ್ರ ಸೋಮಯಾಜಿ ಅವರಿಗೆ ಕ ವೆಂ ರಾಜಗೋಪಾಲ ಜೀವಮಾನ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಷ್ಟçಪ್ರಶಸ್ತಿ ಪುರಸ್ಕತ ಸುರೇಶ ಮರಕಾಲ ಅವರಿಗೆ ಅನಂತಯ್ಯ ಹಂದೆ ಸ್ಮರಣಾರ್ಥ ರತ್ನಾವತಿ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದತ್ತಿ ದಾನಿಗಳಾದ ಪ್ರಕಾಶ್ ಹೆಬ್ಬಾರ್, ಶ್ರೀಮತಿ ರತ್ನಾವತಿ, ಕಾಪು ಕಸಾಪ ಅಧ್ಯಕ್ಷ ಪುಂಡಲೀಕ ಮರಾಠೆ, ದೇವದಾಸ ಹೆಬ್ಬಾರ್, ಕೊಂಡಳ್ಳಿ ಪ್ರಭಾಕರ ಶೆಟ್ಟಿ, ನರಸಿಂಹ ಮೂರ್ತಿ ಮಣಿಪಾಲ, ಸುನಂದಾ ಎಸ್ ಅಡಿಗ ಉಪಸ್ಥಿತರಿದ್ದರು. ರಂಗಕರ್ಮಿ ಸತ್ಯನಾ ಕೊಡೇರಿ ರಂಗಗೀತೆ ಪ್ರಸ್ತುತ ಪಡಿಸಿದರು.ಕಾರ್ಕಳ ಕಸಾಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಮಂಕುತಿಮ್ಮನ ಕಗ್ಗ ವಾಚಿಸಿದರು.
ಬ್ರಹ್ಮಾವರ ಕಸಾಪ ಅಧ್ಯಕ್ಷ ರಾಮಚಂದ್ರ ಐತಾಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಸಾಪ ಜಿಲ್ಲಾ ಕೋಶಾಧ್ಯಕ್ಷ ಮನೋಹರ ಪಿ ವಂದಿಸಿದರು. ಲೇಖಕಿ ಸುಮನ ಹೇರ್ಳೆ ಸನ್ಮಾನ ಪತ್ರ ವಾಚಿಸಿದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗರ 82ನೇ ಅಡಿಗರ ಬಿಡಿ ಬರೆಹಗಳು’ ಕೃತಿ ಉಡುಪಿ ಜಿಲ್ಲಾ ಕಸಾಪ ಸ್ಥಾಪಕ ಅಧ್ಯಕ್ಷ ಎ.ಎಸ್.ಎನ್ ಹೆಬ್ಬಾರ್ ಬಿಡುಗಡೆಗೊಳಿಸಿದರು. ನಿವೃತ್ತ ಪ್ರಾಚಾರ್ಯ ಎಂ.ಬಾಲಕೃಷ್ಣ ಶೆಟ್ಟಿ, ಉಪನ್ಯಾಸಕರಾದ ರಾಜ್ಯಪ್ರಶಸ್ತಿ ಪುರಸ್ಕತ ಶಿಕ್ಷಕ ನರೇಂದ್ರ ಕುಮಾರ್ ಕೋಟ, ದತ್ತಿ ದಾನಿಗಳಾದ ಪ್ರಕಾಶ್ ಹೆಬ್ಬಾರ್, ಶ್ರೀಮತಿ ರತ್ನಾವತಿ, ಕಾಪು ಕಸಾಪ ಅಧ್ಯಕ್ಷ ಪುಂಡಲೀಕ ಮರಾಠೆ, ದೇವದಾಸ ಹೆಬ್ಬಾರ್, ಕೊಂಡಳ್ಳಿ ಪ್ರಭಾಕರ ಶೆಟ್ಟಿ ಇದ್ದರು.












Leave a Reply