ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸ್ವಾತಂತ್ರ್ಯೋತ್ಸವದ ಅಂಗವಾಗಿ ಸ್ನೇಹ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ವಾಲಿಬಾಲ್ ಪಂದ್ಯಾಟ

ಸ್ನೇಹ ಸ್ಪೋರ್ಟ್ಸ್ ಕ್ಲಬ್ (ರಿ) ಹಾವಂಜೆ. ಇವರವತಿಯಿಂದ ಇತ್ತೀಚೆಗೆ 80ನೇ ಸ್ವಾತಂತ್ರ್ಯ ಕಾರ್ಯಕ್ರಮದಲ್ಲಿ ಬೆಳಿಗ್ಗೆ 8.00 ಗಂಟೆಗೆ ಧ್ವಜಾರೋಹಣ ಗೈದು ತದನಂತರ ಹಾವಂಜೆ ಹಾಗೂ ಆಸುಪಾಸಿನ ವಾಲಿಬಾಲ್ ಆಟಗಾರರಿಗಾಗಿ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಟವನ್ನು ನಡೆಸಲಾಯಿತು. ಸಮಾರೋಪ ಸಮಾರಂಭದಲ್ಲಿ ಇತ್ತಿಚ್ಚಗೆ ಪೊಲೀಸ್ ಹೆಡ್ ಕಾಂಸ್ಟೇಬಲ್ ಆಗಿ ಬಡ್ತಿ ಪಡೆದ ಹಾವಂಜೆಯ ಗುರುಪ್ರಸಾದ್ ಮುಗ್ಗೇರಿ, ಹಾಗೂ ಮಂಜುನಾಥ್ ಹಾವಂಜೆ ಇವರನ್ನು ಸನ್ಮಾನಿಸಲಾಯಿತು.

ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಸ್ನೇಹದ ಅಧ್ಯಕ್ಷರಾದ ಉದಯ ಕೋಟ್ಯಾನ್ ಹಾವಂಜೆ ಇವರು ಅಧ್ಯಕ್ಷರಾಗಿದ್ದರು. ಮುಖ್ಯಅತಿಥಿಗಳಾಗಿ ಸಂಘದ ಪ್ರೊಸಹಕರಾದ ಸತ್ಯದಾಮ ಲೇಔಟ್ ಇದರ ಮಾಲಕರಾದ ರಾಮ ಮೂರ್ತಿ ಭಟ್ ಹಾಗೂ ನಿವೃತ್ತ ಮುಕ್ಯೋಪಾಧ್ಯಾಯರಾದ ಸಖರಾಮ್ ಗೊಳಿಕಟ್ಟೆ ಹಾಗೂ ಸಂಘದ ಉಪಾಧ್ಯಕ್ಷರುಆದ ರಿಚ್ಚ ಡಿಸೋಜ ಹಾವಂಜೆ, ಪ್ರಧಾನ ಕಾರ್ಯದರ್ಶಿ ಸುಂದರ ಪೂಜಾರಿ ಕೊಳಲಗಿರಿ, ಕೋಶಾಧಿಕಾರಿ ರಾಜೇಂದ್ರ ಪೂಜಾರಿ, ಜಗದೀಶ್ ಸನಿಲ್, ರವೀಂದ್ರ ಪೂಜಾರಿ, ಪ್ರಭಾಕರ ಮರಕಲ, ಸತೀಶ ಪೂಜಾರಿ, ಶ್ರೀನಿವಾಸ್ ಪೂಜಾರಿ ಉಜಂಗಾರು ಹಾಗೂ ಸಭೆಯಲ್ಲಿ ಸಂಘದ ಸದಸ್ಯರು ಊರ ಮಹಾನೀಯರು ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *