ಕೋಟ: ಹೊನ್ನಾರಿ ಯುವಕ ಮಂಡಲ ಹೊನ್ನಾರಿ ಇವರ ಮುಂದಾಳತ್ವದಲ್ಲಿ ಇದೇ ಸೆ.13ರಂದು ಶ್ರೀ ಬೊಬ್ಬರ್ಯ ದೈವಸ್ಥಾನದಲ್ಲಿ, ಗಿಳಿಯಾರು ಮೈನಾಡಿ ಮನೆ ದಿ. ಭರತ್ ಕುಮಾರ್ ಶೆಟ್ಟಿ ಇವರ ಸ್ಮರಣಾರ್ಥವಾಗಿ ಹಮ್ಮಿಕೊಂಡಿರುವ ಬೃಹತ್ ರಕ್ತ ದಾನ ಶಿಬಿರ ಹಾಗೂ ಉಚಿತ ನೇತ್ರ ತಪಾಸಣೆ ಹಾಗೂ ಉಚಿತ ಅರೋಗ್ಯ ತಪಾಸಣೆ ಮತ್ತು ಉಚಿತ ರಕ್ತ ಪರೀಕ್ಷಾ ಶಿಬಿರದ ಅಮಂತ್ರ ಪತ್ರಿಕೆಯನ್ನು ಮಂಗಳವಾರ ಕೋಟ ಮಾಂಗಲ್ಯ ಮಂದಿರದಲ್ಲಿ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಶಾಸಕ ಕಿರಣ್ ಕುಮಾರ್ ಕೊಡ್ಗಿ ಬಿಡುಗಡೆಗೊಳಿಸಿದರು.
ಈ ವೇಳೆ ಕುಂದಾಪುರ ಬಿಜೆಪಿ ಕ್ಷೇತ್ರ ಅಧ್ಯಕ್ಷ ಸುರೇಶ್ ಶೆಟ್ಟಿ , ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಹೊನ್ನಾರಿ ಯುವಕಮಂಡಲದ ಅಧ್ಯಕ್ಷ ಪ್ರವೀಣ್ ಕುಮಾರ್ ಜೋಗಿ ಮತ್ತು ಕಾರ್ಯದರ್ಶಿ ಚೇತನ್ ಎಂ ಇದ್ದರು.ಹೊನ್ನಾರಿ ಯುವಕ ಮಂಡಲ ಹೊನ್ನಾರಿ ಇವರ ಮುಂದಾಳತ್ವದಲ್ಲಿಬೃಹತ್ ರಕ್ತ ದಾನ ಶಿಬಿರ,ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅಮಂತ್ರ ಪತ್ರಿಕೆ ಬಿಡುಗಡೆಗೊಳಿಸಿದರು. ಶಾಸಕ ಕಿರಣ್ ಕುಮಾರ್ ಕೊಡ್ಗಿ , ಕುಂದಾಪುರ ಬಿಜೆಪಿ ಕ್ಷೇತ್ರ ಅಧ್ಯಕ್ಷ ಸುರೇಶ್ ಶೆಟ್ಟಿ ಇದ್ದರು.












Leave a Reply