ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಬೆಳಕು-ನೆರಳಿನ ಕಾವ್ಯ: ಕಾಲವನ್ನೇ ಕಟ್ಟಿಹಾಕುವ ಛಾಯಾಚಿತ್ರಗಳ ವೈಭವ

ಬೆಂಗಳೂರು: ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ತಿನಲ್ಲಿ ಫೋಟೋ ಜರ್ನಲಿಸ್ಟ್ಸ್ ಅಸೋಸಿಯೇಷನ್ ಬೆಂಗಳೂರು (ರಿ.) ವತಿಯಿಂದ ಆಯೋಜಿಸಲಾಗಿದ್ದ ‘ಫ್ರೋಜನ್ ಮೆಮೊರೀಸ್’ ಛಾಯಾಚಿತ್ರ ಪ್ರದರ್ಶನ ಗಮನ ಸೆಳೆಯಿತು. ಪ್ರದರ್ಶನದಲ್ಲಿ ಭಾಗವಹಿಸಿದ ಗಣ್ಯರು ವಿವಿಧ ಛಾಯಾಗ್ರಾಹಕರು ಸೆರೆಹಿಡಿದಿದ್ದ ಅರ್ಥಪೂರ್ಣ ಹಾಗೂ ಸಮಾಜದ ನೈಜ ಬದುಕನ್ನು ಪ್ರತಿಬಿಂಬಿಸುವ ಹಲವಾರು ಛಾಯಾಚಿತ್ರಗಳನ್ನು ವೀಕ್ಷಿಸಿದರು.

ಬೆಳಕು-ನೆರಳಿನ ಸಂಯೋಜನೆಯೊಂದಿಗೆ ಬದುಕಿನ ವಿಭಿನ್ನ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿರುವ ಚಿತ್ರಗಳು ನೋಡುಗರ ಗಮನ ಸೆಳೆದವು. ಈ ಸಂದರ್ಭದಲ್ಲಿ ಪ್ರದರ್ಶನದಲ್ಲಿದ್ದ ಛಾಯಾಚಿತ್ರಗಳನ್ನು ವೀಕ್ಷಿಸಿದ ಬಳಿಕ ಕ್ಯಾಮೆರಾ ಹಿಡಿದು ಛಾಯಾಚಿತ್ರವೊಂದನ್ನು ಕ್ಲಿಕ್ ಮಾಡುವ ಮೂಲಕ ಛಾಯಾಗ್ರಹಣದ ಅನುಭವವನ್ನೂ ಹಂಚಿಕೊಳ್ಳಲಾಯಿತು.

ಸಮಾಜದ ನೈಜ ಪ್ರತಿಬಿಂಬವನ್ನು ತಮ್ಮ ಕ್ಯಾಮೆರಾ ಕಣ್ಣುಗಳ ಮೂಲಕ ಸೆರೆಹಿಡಿದು ಜನರಿಗೆ ತಲುಪಿಸುವ ಫೋಟೋ ಜರ್ನಲಿಸ್ಟ್‌ಗಳು ಹಾಗೂ ಛಾಯಾಗ್ರಾಹಕರ ಕಾರ್ಯವನ್ನು ಶ್ಲಾಘಿಸಲಾಯಿತು. ಸುದ್ದಿ, ಸಮಾಜ, ಸಂಸ್ಕೃತಿ ಹಾಗೂ ಜನಜೀವನದ ಮಹತ್ವದ ಕ್ಷಣಗಳನ್ನು ದಾಖಲಿಸುವ ಅವರ ಶ್ರಮ ಮತ್ತು ಪ್ರತಿಭೆಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಲಾಯಿತು.

Leave a Reply

Your email address will not be published. Required fields are marked *