ಐರೋಡಿ : ಇಲ್ಲಿನ ಐರೋಡಿ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ಮೋಸೆಸ್ ರೋಡ್ರಿಗಸ್ 55 ವ. ಶುಕ್ರವಾರ ಅನಾರೋಗ್ಯದಿಂದ ನಿಧನರಾದರು.ಪತ್ನಿ,ಒರ್ವ ಪುತ್ರ ಪುತ್ರಿಯನ್ನು ಅಗಲಿದ್ದಾರೆ. ಸಾಸ್ತಾನ ಸಿ ಎ ಬ್ಯಾಂಕ್ ನ ಮಾಜಿ ನಿರ್ದೇಶಕರಾಗಿ, ಸಾಸ್ತಾನ ಗಣೇಶೋತ್ಸವ ಸಮಿತಿ ಉಪಾ ಧ್ಯಕ್ಷರಾಗಿ, ಜಯ ಕರ್ನಾಟಕ ಸಾಸ್ತಾನದ ಉಪಾಧ್ಯಕ್ಷರಾಗಿ, ಸಂತ ಥಾಮಸ್ ಆರ್ಥೋಡಾಕ್ಸ್ ಸಿರಿಯನ್ ಚರ್ಚ್ ಸಾಸ್ತಾನ ಇದರ ಖಜಾಂಚಿಯಾಗಿ, ಚರ್ಚ್ ನವೀಕರಣ ಸಮಿತಿಯ ಸಂಯೋಜಕರಾಗಿ ಹಾಗೂ ಹಲವಾರು ಸಂಘ-ಸAಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಇವರ ಪಾರ್ಥಿವ ಶರೀರವನ್ನು ಶನಿವಾರ ಮಧ್ಯಾಹ್ನ 2:00 ರಿಂದ 4:00 ಗಂಟೆಯವರೆಗೆ ಚರ್ಚ್ ಆವರಣದಲ್ಲಿ ಸಾರ್ವಜನಿಕ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಾನುವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.














Leave a Reply