ಕೋಟ: ಮಹಿಳೆಯರು ತಾಳಮದ್ದಲೆ ಹಾಗೂ ಯಕ್ಷಗಾನ ರಂಗದಲ್ಲಿ ಅನುಭವಿಸಿ ತೊಡಗಿಕೊಂಡರೆ ಅದು ಕಲೆಗೂ ಪೂರಕವಾಗುತ್ತದೆ ಎಂದು ಯಕ್ಷನುಡಿಸಿರಿ ಬಳಗ ಸಿದ್ಧಾಪುರ ಇದರ ಅಧ್ಯಕ್ಷ ತಾಳಮದ್ದಲೆಯ ಅರ್ಥಧಾರಿ ಡಾ.ಜಗದೀಶ ಶೆಟ್ಟಿ ನುಡಿದರು.ಅವರು ರಸರಂಗ ಕೋಟ ಇವರ ಆಶ್ರಯದಲ್ಲಿ ಇತ್ತೀಚೆಗೆ ಹಯಗ್ರೀವ ಸಭಾಭವನ ತೆಕ್ಕಟೆ ಇಲ್ಲಿ ಆಯೋಜಿಸಿದ್ದ ಆಷಾಢ ವೈಭವ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿ ಮಹಿಳೆಯರು ಕಲಿತರೆ ಮನೆಯೊಂದು ಕಲಿತಂತೆ. ಮನೆಯ ಕಿರಿಯ ಸದಸ್ಯರು ಯಕ್ಷಗಾನದತ್ತ ಆಕರ್ಷಿತರಾಗಲು ಇದು ಸಾಧ್ಯವಾಗಿಸುತ್ತದೆ ಎಂದರು.
ಅತಿಥಿಗಳಾದ ವಿದ್ವಾನ್ ಮಂಜುನಾಥ ಉಪಾಧ್ಯ ಮಾತನಾಡಿ ರಸರಂಗವು ತನ್ನ ಕಲೆಯ ಮೂಲಕ ಜನರ ಆಂತರ್ಯದ ಕಲ್ಮಷವನ್ನು ಹೋಗಲಾಡಿಸುವ ರಸಗಂಗವಾಗಿ ಪ್ರವಹಿಸಲಿ ಎಂದರು.ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ತಾರಾನಾಥ ಹೊಳ್ಳ, ಕಲಾಭಿಮಾನಿ ಎ.ಪಿ.ಡಿಸಿಲ್ವಾ, ಸುಶೀಲಾ ಸೋಮಶೇಖರ್, ಸಾಮಾಜಿಕ ಕಾರ್ಯಕರ್ತೆ ಪ್ರೇಮಾ ಶೆಟ್ಟಿ ಸಂಸ್ಥೆಗೆ ಶುಭ ಹಾರೈಸಿದರು.
ಯಶಸ್ವೀ ಕಲಾವೃಂದದ ಸಂಚಾಲಕರಾದ ವೆಂಕಟೇಶ ವೈದ್ಯ,ರಸರಂಗದ ಅಧ್ಯಕ್ಷೆ ಸುಧಾ ಮಣೂರು ಉಪಸ್ಥಿತರಿದ್ದರು. ರಸರಂಗದ ಸುಧಾ ಮಣೂರು ಪ್ರಸ್ತಾವಿಸಿ ಸ್ವಾಗತಿಸಿದರು. ಸುಪ್ರೀತಾ ಪುರಾಣಿಕ್ ವಂದಿಸಿದರು. ಸುಶೀಲಾ ಹೊಳ್ಳ ನಿರೂಪಿಸಿದರು. ರಸರಂಗದ ಮಹಿಳಾ ಸದಸ್ಯೆಯರಿಂದ ತಾಳಮದ್ದಲೆ ದ್ರೌಪದೀ ಪ್ರತಾಪ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಸುಧಾ ಮಣೂರು ವಿರಚಿತ ಯಕ್ಷಗಾನ ಪ್ರಸಂಗ ಮದನಕೋಮಲೆ ಪ್ರಸ್ತುತಗೊಂಡಿತು.
ರಸರoಗ ಕೋಟ ಇವರ ಆಶ್ರಯದಲ್ಲಿ ಇತ್ತೀಚೆಗೆ ಹಯಗ್ರೀವ ಸಭಾಭವನ ತೆಕ್ಕಟೆ ಇಲ್ಲಿ ಆಯೋಜಿಸಿದ್ದ ಆಷಾಢ ವೈಭವ ಕಾರ್ಯಕ್ರಮದಲ್ಲಿ ಯಕ್ಷನುಡಿಸಿರಿ ಬಳಗ ಸಿದ್ಧಾಪುರ ಇದರ ಅಧ್ಯಕ್ಷ ತಾಳಮದ್ದಲೆಯ ಅರ್ಥಧಾರಿ ಡಾ.ಜಗದೀಶ ಶೆಟ್ಟಿ ಮಾತನಾಡಿದರು. ವಿದ್ವಾನ್ ಮಂಜುನಾಥ ಉಪಾಧ್ಯ, ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ತಾರಾನಾಥ ಹೊಳ್ಳ, ಕಲಾಭಿಮಾನಿಗಳಾದ ಎ.ಪಿ.ಡಿಸಿಲ್ವಾ, ಸುಶೀಲಾ ಸೋಮಶೇಖರ್ ಇದ್ದರು.















Leave a Reply