ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಗುಂಡ್ಮಿ-ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋಜನೆಯ ಶೌರ್ಯ ಟೀಮ್ ಗೆ ದೈವಸ್ಥಾನದಿಂದ ಸನ್ಮಾನ

ಕೋಟ:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್  ಪಾಂಡೇಶ್ವರ ವಲಯದ ಗುಂಡ್ಮಿ ಕಾರ್ಯಕ್ಷೇತ್ರದ ಆಚಾರ್ಯ ಕುಟುಂಬಸ್ಥರ  ಜಟ್ಟಿಗ ಮತ್ತು ಹೈಗುಳ್ಳಿ ದೇವಸ್ಥಾನ ಮುಂಭಾಗ ಕಳೆದ ವರ್ಷ ಬಾರಿ ಗಾಳಿ ಮಳೆಗೆ  ಬೃಹತ್ ಗಾತ್ರದ ಮರ ಬಿದ್ದಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋಜನೆಯ ಶೌರ್ಯ ಟೀಮ್ ಸದಸ್ಯರು ಗ್ರಾಮಸ್ಥರು ಸೇರಿ ಬಿದ್ದಿರುವ ಬಾರಿ ಗಾತ್ರದ ಮರವನ್ನು ತೆರವುಗೊಳಿಸಿ ದೈವಸ್ಥಾನದ ದಾರಿ ಸುಗಮಗೊಳಿಸಿದ ಹಿನ್ನಲ್ಲೆಯಲ್ಲಿ ಸೋಮವಾರ ದೇವಸ್ಥಾನದ ಜೀರ್ಣೋದ್ಧಾರ ಪುನ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಶೌರ್ಯ ಟೀಮಿನ ಸದಸ್ಯರನ್ನು  ಶಾಲನ್ನು ಹೊಂದಿಸಿ ಗೌರವಿಸಿ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಗುಂಡ್ಮಿ  ಒಕ್ಕೂಟದ ಕಾರ್ಯದರ್ಶಿಯಾದ ಶೇಖರ್ ಪೂಜಾರಿ,ವಲಯದ ಮೇಲ್ವಿಚಾರಕಿ ಜಯಲಕ್ಷ್ಮಿ, ಶೌರ್ಯ ಟೀಮ್ ಅಧ್ಯಕ್ಷ ಲಕ್ಷ್ಮೀಶ ಆಚಾರ್ಯ, ಘಟಕದ ಸೇವಾ ಪ್ರತಿನಿಧಿ ಶೋಭಾ, ಸ್ಥಳೀಯ ಸೇವಾ ಪ್ರತಿನಿಧಿ  ಶಶಿಕಲಾ, ಶೌರ್ಯ ಟೀಮ್ ನ ಸದಸ್ಯರಾದ ಕಾಳಿಂಗ ಪೂಜಾರಿ, ರವಿ ಪೂಜಾರಿ, ಸತೀಶ, ರೇಣುಕಾ, ಯಶೋಧ, ವಿಜಯಶ್ರೀ , ಆಚಾರ್ಯ ಕುಟುಂಬಸ್ಥರು, ತಂಡದ ಸದಸ್ಯರು,  ಉಪಸ್ಥಿತರಿದ್ದರು.

ಕಳೆದ ವರ್ಷದ ಬಾರಿ ಗಾಳಿ ಮಳೆಗೆ ಬಾರಿ ಗಾತ್ರದ ಮರವೊಂದು ಗುಂಡ್ಮಿ ಕಾರ್ಯಕ್ಷೇತ್ರದ ಆಚಾರ್ಯ ಕುಟುಂಬಸ್ಥರ  ಜಟ್ಟಿಗ ಮತ್ತು ಹೈಗುಳ್ಳಿ ದೇವಸ್ಥಾನ ಮುಂಭಾಗ ಬಿದ್ದಿದ್ದು ಅದನ್ನು ಶೌರ್ಯ ತಂಡದ ಮೂಲಕ ತೆರವುಗೊಳಿಸಲಾಯಿತು.ಈ ಹಿನ್ನಲ್ಲೆಯಲ್ಲಿ ಶೌರ್ಯ ತಂಡವನ್ನು ಸೋಮವಾರ ದೈವಸ್ಥಾನದ ವತಿಯಿಂದ ಗುರುತಿಸಿ ಗೌರವಿಸಲಾಯಿತು.

Leave a Reply

Your email address will not be published. Required fields are marked *