ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸದಾಶಿವ ದಶವತಾರ

ಸಮಾಜದೆದುರು ಸುಭಗನ ವೇಷ ತೊಟ್ಟ ಗೋಮುಖ ವ್ಯಾಘ್ರನೊಬ್ಬನ ಮುಖವಾಡವನ್ನ ನಾಡಿನ ಸುದ್ದಿ ಬಯಲು ಮಾಡಿದ ರೋಚಕತೆಯ ವಿವರವಿದು. ಎಲ್ಲರೆದುರು ತಾನು ಬಂಕಳ ನಿಷ್ಠಾವಂತ ಯಾರಿಂದಲೂ ನಯಾ ಪೈಸೆ ಮುಟ್ಟದ ವ್ಯಕ್ತಿ. ಎಂದು ನಂಬಿಸುತ್ತದೆ ಅವರಿವರಿಂದ ದೋಚಿದ ಲಕ್ಷ ಲಕ್ಷ ಹಣ ಹೇಳಿಕೊಳ್ಳಲಿಕ್ಕೆ ಮಾಹಿತಿ ಹಕ್ಕು ಹೋರಾಟಗಾರನ ಗೆಟಪ್ಪು, ಜೊತೆಗೆ ಮಾನವ ಹಕ್ಕುಗಳ ಕಾರ್ಯಕರ್ತನ ಸ್ವಯಂ ಘೋಷಿತ ಗೆಟಪ್ಪು, ಮಗದೊಂದು ಕಡೆ ವಿಶ್ವಮಾನವ ಹಕ್ಕುಗಳ ಅಧಿಕಾರವೆಂಬ ಪತ್ರಕರ್ತನ ಅವತಾರ ಇವಿಷ್ಟು ಒಟ್ಟು ಸೇರಿದರೆ ಸಭ್ಯ ಸಮಾಜದೆದುರು ಕಂಡುಬರುವ ವ್ಯಕ್ತಿಯೇ ಪರಮ ದುರ್ಬುದ್ಧಿಯ ಮಹಾ ವಂಚಕ ಸದಾಶಿವ್ ಕೋಟೆಕಾರ್ ಅಲಿಯಾಸ್ ಬಾಬು!! ಯಾವುದರಲ್ಲಿಯೂ ಅನುಭವವಿಲ್ಲದ ಪರಮ ಕಿಲಾಡಿ ಒಬ್ಬ ಸಭ್ಯ ಸಮಾಜವನ್ನ ಹೇಗೆಲ್ಲಾ ಲೂಟಿಗೆಯುತ್ತಾನೆ ಎಂದು ತಿಳಿಯಬೇಕೆಂದರೆ ಈ ದಗಲ್ಬಾಜಿ ಸದಾಶಿವನ ಮನೆಹಾಳು ಕೃತ್ಯಗಳನ್ನು ಮತ್ತೊಮ್ಮೆ ಕಣ್ಣಾಯಿಸಬೇಕು. ಒಂದೇ ಒಂದು ರೂಪಾಯಿಯ ನಯಾ ಪೈಸೆ ಕೆಲಸ ಕಾರ್ಯವಿಲ್ಲದೆ ಒಂದು ಬೆಳಗಿನಿಂದ ಸಂಜೆ ತನಕ ಕೋರ್ಟ್ ರೆಸ್ಟೋರೆಂಟ್ ಹೋಟಲ್ ಎದುರುಗಿರುವ ರಸ್ತೆಯ ಅಕ್ಕ ಪಕ್ಕದಲ್ಲಿ ನಿಂತು ಕಾರ್ಖಾನೆ ಹೊಗೆ ಉಗುಳುವಂತೆ ಬಾಯಿಂದ ಹೊಗೆಯುಗುಳುತ್ತ ಸಿಗರೇಟ್ ನ್ನ ಸಾರ್ವಜನಿಕ ಸ್ಥಳದಲ್ಲಿ ಸೇದುತ್ತಾ ನಿಮ್ಮೆದುರು ಕಂಡು ಬರುವ ಸದಾಶಿವ ಪ್ರತಿದಿನ ಸಂಜೆ ಕಂಠ ಮಟ್ಟ ಪ್ರತಿಷ್ಠಿತ ಹೋಟೆಲ್ಗಳಲ್ಲಿ ಕುಡಿದು ಇನ್ಯಾರಿಗೋ ಕಾಲ್ ಮಾಡಿ ಹಾಕುವ ರಣಕೇಕೆ ಸಣ್ಣ ಮಟ್ಟದ್ದಲ್ಲ!! ಹಾಗಂತ ಇವನ ಇಂತಹ ಐಷಾರಾಮಿ ಜೀವನ ಸಾಗಿಸಲು ಹಣ ಎಲ್ಲಿಂದ ಬರುತ್ತದೆ ಎನ್ನುವುದೇ ಸಾರ್ವಜನಿಕರ ಪ್ರಶ್ನೆ!!ಹೌದು ಕುಂದಾಪುರದ ಪ್ರತಿಯೊಬ್ಬ ನಾಗರಿಕರದ್ದು ಇಂಥದ್ದೇ ಪ್ರಶ್ನೆ ಅಸಲಿಗೆ ಈತನ ದುಡಿಮೆಯ ಮೂಲವೇ ಸರಕಾರಿ ಅಧಿಕಾರಿಗಳನ್ನು ಮಾಹಿತಿ ಹಕ್ಕು ಅರ್ಜಿಗಳ ಮೂಲಕ ಬೆದರಿಸಿ ಅವರಿಂದ ಸಿಕ್ಕಿದಷ್ಟು ಪಡೆದು ಸ್ವಾಹ ಮಾಡುವುದು ಇವನ ದನ ದಾಹಕ್ಕೆ ಮಣಿಯದ ಅಧಿಕಾರಿಗಳ ಮೇಲೆ ಅವರ ಮೇಲಿನ ಅಧಿಕಾರಿಗಳಿಗೆ ದೂರು ನೀಡಿ ಮಾನಸಿಕ ಹಿಂಸೆ ನೀಡುವುದು, ನಂತರ ಸಂಜೆ ಕಂಠ ಮಟ್ಟ ಕುಡಿದು “ಆ ಬಡ್ಡಿ ಮಕ್ಕಳಿಗೆ ಸಸ್ಪೆಂಡ್ ಮಾಡಿದ್ದೇನೆ” ಎಂದು ತನ್ನನ್ನು ತಾನು ಕತ್ತಲ ಲೋಕದಲ್ಲಿ ಹೊಗಳಿಕೊಂಡು ಕಿಟಾರನೆ ನಗುತ್ತಾನೆ. ಈ ಸದಾಶಿವನಿಂದ ಯಾವ ಅಧಿಕಾರಿಯಾದರೂ ನೆಮ್ಮದಿಯಿಂದ ಇದ್ದ ಒಂದೇ ಒಂದು ಉದಾಹರಣೆ ಇದ್ದರೆ ತೋರಿಸಿ ನೋಡುವಾ ಎಲ್ಲರನ್ನೂ ಮಾಹಿತಿ ಹಕ್ಕು ಅರ್ಜಿಯಿಂದಲೇ ಮಣಿಸುತ್ತಿದ್ದ ಸದಾಶಿವ ಬಗ್ಗಿದ ಅಧಿಕಾರಿಗಳನ್ನ ಪಳಗಿಸಿ ಲಕ್ಷ ಲಕ್ಷ ಹಣವನ್ನು ಪಡೆದು ಐಷಾರಾಮಿ ಜೀವನವನ್ನು ನಡೆಸುತ್ತಿದ್ದು, ಇವನ ಕಾಟ ಅರಣ್ಯ ಇಲಾಖೆ ಸೇರಿದಂತೆ ಕಂದಾಯ, ಸರ್ವೆ, ತಾಲೂಕು ಕಚೇರಿ, ಪುರಸಭೆ, ಆರ್.ಐ ಕಚೇರಿ ಕುಂದಾಪುರದಲ್ಲಿ ಯಾವ ಯಾವ ಬಿಲ್ಡಿಂಗ್ ನಿಯಮ ಮೀರಿ ತಲೆಯೆತ್ತಿ ನಿಂತಿದೆಯೋ ಅದರ ಮಾಲೀಕರನ್ನ ಗುಪ್ತವಾಗಿ ಬೆದರಿಸಿ ತಣ್ಣನೆಯ ವ್ಯವಹಾರವನ್ನ ಸದಾಶಿವ ಕುದುರಿಸುತ್ತಿದ್ದ. ಹೀಗೆ ಹಾಳು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಸದಾಶಿವನಿಗೆ ಒಂದಲ್ಲ ಒಂದು ದಿನ ತನ್ನ ಮನೆಹಾಳ ಕತ್ತೆಗಳು ಬಯಲಾಗಿ ಸಮಾಜದೆದುರು ಬೆತ್ತಲಾಗಲಿದ್ದೇನೆಂಬ ಸಣ್ಣದೊಂದು ಅನುಮಾನವೂ ಈತನ್ನ ಕಾಡಿರಲಿಲ್ಲ ಕಾರಣ ಈತನ ಸುತ್ತ ಒಂದಷ್ಟು ಮಂದಿಯ ದಂಡೆ ಇತ್ತು. ಅವರಿಗೆಲ್ಲ ಸದಾಶಿವನೆ ಬಾಸ್!! ಒಂದು ಕಡೆ ಮಾಹಿತಿ ಹಕ್ಕಿನ ಅರ್ಜಿ ಹೆಸರಲ್ಲಿ ಅಧಿಕಾರಿಗಳನ್ನು ಬೆದರಿಸಿ ದುಡ್ಡು ಮಾಡುತ್ತಿದ್ದರೆ, ಮತ್ತೊಂದು ಕಡೆ ಮಾನವ ಹಕ್ಕುಗಳ ಕಾರ್ಯಕರ್ತನೆನ್ನುತ್ತಾ ಇದ್ದ ಬದ್ದ ಮಾನವರ ಹಕ್ಕುಗಳನ್ನ ಈತ ಉಲ್ಲಂಘಿಸುತ್ತ ದಿನ ಕಳೆಯುತ್ತಾ ಇದ್ದ ಸದಾಶಿವ ಜೊತೆಗೊಂದು ಬ್ರೋಕರ್ ಕೆಲಸವನ್ನು ಮಾಡುತ್ತಾನೆ. ಈತನ ಬಳಿ ಕೆಲಸ ಮಾಡಿಕೊಡಿ ಎಂದು ಫೈಲ್ ನೀಡಿದರೆ ಮೊದಲಿಗೆ 20000 ಕೊಡಿ ಮಿಕ್ಕಿದ್ದು ಮತ್ತೆ ನೋಡುವ ಎನ್ನುತ್ತಾನೆ. ಹಾಗೆ ಪಡೆದ ಪಯಲು ಯಾವ ಇಲಾಖೆಗೆ ಸಂಬಂಧಿಸಿದ್ದು ಎಂದು ತಿಳಿದು ಆ ಇಲಾಖೆ ಅಧಿಕಾರಿ ಬಳಿ ನಯ ಪೈಸೆ ಲಂಚ ನೀಡದೆ ತನ್ನ ಕೆಲಸವನ್ನು ಸಲೀಸಾಗಿ ಮಾಡಿಕೊಂಡು ಬಂದು ಫೈಲ್ ಕೊಟ್ಟವನ ಬಳಿ ಅಧಿಕಾರಿಗಳು ತುಂಬಾ ಹಣ ಕೇಳಿದರು ಅಂತ ಮತ್ತೆ 20 ಸಾವಿರ ರೂಪಾಯಿ ಕಿತ್ತು ಸಂಜೆ ಮತ್ತದೆ ಭಾರಿನಲ್ಲಿ ಕತ್ತಲೆಯ ನಶೆಯಲ್ಲಿ ತೇಲಿ ಹೋಗುತ್ತಾನೆ. ಈತನ ಬಳಿ ಯಾವುದಾದರೂ ಅಧಿಕಾರಿ ಒಂದು ಫೈಲ್ಗೆ ಇಂತಿಷ್ಟು ಕೊಡಬೇಕು ಅಂದರೆ ಮಾರನೇ ದಿನವೇ ಆ ಅಧಿಕಾರಿಯ ಮೇಲೆ ಮಾಹಿತಿ ಹಕ್ಕು ಅರ್ಜಿ ಹಾಕಿ ಹಿಂಸಿಸಲು ಪ್ರಾರಂಭಿಸುತ್ತಾನೆ. ಒಂದು ಕಾಲದಲ್ಲಿ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರನಾಗಿ ಜೀಪು ಚಾಲಕನ ಕೆಲಸಕ್ಕೆ ಸೇರಿಕೊಂಡಿದ್ದ ಸದಾಶಿವ ಅಲ್ಲೇ ಸಕಲ ಮನೆಹಾಳು ಬುದ್ಧಿಗಳನ್ನು ಕಲಿತು ಅಲ್ಲಿಂದ ಹೊರದಬ್ಬಿಸಿಕೊಂಡಿದ್ದ. ಹಾಗೆ ಹೊರ ಬಿದ್ದವನಿಗೆ ಅದ್ಯಾರೋ ಮಾಹಿತಿ ಹಕ್ಕಿನ ಅರ್ಜಿಯ ವಿಷಯ ತಲೆಗೆ ತುಂಬಿದ್ದಾರೆ. ಹೀಗಾಗಿ ಮಾಹಿತಿ ಹಕ್ಕು ಕಾರ್ಯಕರ್ತನ ಅವತಾರವೆತ್ತುತ್ತಾನೆ. ಅಲ್ಲಿಂದ ಈತನ ಚೋರ್ ಗ್ಯಾಂಗ್ ಸಿಕ್ಕಸಿಕ್ಕವರನ್ನೆಲ್ಲಾ ಲೂಟ್ ಮಾರ್ ಟ್ ಮಾಡಲು ತೊಡಗುತ್ತದೆ. ಸದಾಶಿವ ಅಂಡ್ ಗ್ಯಾಂಗ್ ನ ಮಾಹಿತಿ ಹಕ್ಕುವಿನ ಹಾವಳಿಗೆ ಇಡೀ ಸರಕಾರಿ ಅಧಿಕಾರಿಗಳೇ ಪದರುಗುಟ್ಟಿ ಹೋಗುತ್ತಾರೆ. ಹೀಗೆ ಸಮಾಜದಲ್ಲಿನ ವಿವಿಧಸ್ತರದ ಅಧಿಕಾರಿಗಳನ್ನೆಲ್ಲ ಬೆದರಿಸುತ್ತಾ ಸಾಗಿದ ಸದಾಶಿವ್ ಕೋಟೆಗಾರ್ , ಉಡುಪಿ ಜಿಲ್ಲೆಯಷ್ಟೇ ಅಲ್ಲ, ಚಿಕ್ಕಮಗಳೂರು, ತರಿಕೆರೆ, ಭಟ್ಕಳ ಸೇರಿದಂತೆ ನಾನಾ ಕಡೆಯ ಅರಣ್ಯ ಇಲಾಖೆಗೆ ಲಗ್ಗೆ ಇಟ್ಟು ಅಲ್ಲಿನ ಅಧಿಕಾರಿಗಳಿಗೆ ದಮ್ಕಿಕೊಟ್ಟು ಹೆದರಿಸಿ, ಬೆದರಿಸಿ ಒಂದಿಷ್ಟು ಕಾಸು ಕಿತ್ತುಕೊಂಡು ಬಂದು ದೌಲತ್ ನಡೆಸಿದ್ದಾನೆ. ಸಾಲದೆಂಬಂತೆ ತನ್ನ ಜೊತೆಯಲ್ಲಿ ಇರುವರಿಗೆಲ್ಲ ಅತ್ಯಂತ ಕೆಟ್ಟ ಶಬ್ದದಿಂದ ಬೈಯುತ್ತಾ, ಅವರಿಂದ ಇವರಿಗೆ ಇವರಿಂದ ಅವರಿಗೆ ಹಿಡಿಸಿ ಹಾಕಿ ಮಜಾ ತೆಗೆದುಕೊಳ್ಳುತ್ತಿದ್ದ ಬಿಟ್ಟರೆ ” ಕರ್ಮ ರಿಟರ್ನ್ಸ್” ಎನ್ನುವ ಸತ್ಯ ಸದಾಶಿವನಿಗೆ ಗೊತ್ತೇ ಇರಲಿಲ್ಲ. ಅಥವಾ ಗೊತ್ತಿದ್ದು ಯಾರೇನು ಮಾಡಿ ಯಾರು ಎಂಬ ಹುಂಬ ಧೈರ್ಯವಾ ಗೊತ್ತಿಲ್ಲ! ಹೀಗಾಗಿ ಫೇರಿ ರೋಡಿನಲ್ಲಿ ತೆರೆದುಕೊಂಡಿರುವ ಒಂದಷ್ಟು ಅರ್ಜಿ ಫಾರ್ಮ್ ಅಂಗಡಿಗಳಲ್ಲಿನ ಮಾಲೀಕರ ಮೇಲೆಲ್ಲಾ ಸದಾಶಿವ ಅಂಡ್ ಗ್ಯಾಂಗ್ ಮುಗಿಬಿದ್ದು ಒಬ್ಬ ಜೈಲಿಗೆ ಹೋದ, ಇನ್ನೊಬ್ಬನ ಮಾನ ಮರ್ಯಾದೆ ಈ ಸದಾಶಿವ ತೆಗೆದ ಫೋಟೋದ ಮೂಲಕ ಸುದ್ದಿಯಾಗಿ ಹೊರಹೊಮ್ಮಿದಾಗಲೂ ಸದಾಶಿವ ನಾನೇನು ಮಾಡಿಲ್ಲ ಎಂದು ಬಿಳಿ ಊದುಬತ್ತಿ ಹಚ್ಚಿದ ಹೊಗೆ ಹಾರಿಸಿದ್ದ ನಂತರ ಇನ್ಯಾರದ್ದು ನೆಮ್ಮದಿಗೆ ಬೆಂಕಿ ಹಚ್ಚುವ ಪ್ಲಾನ್ ರಚಿಸುತ್ತಿದ್ದ. ಈ ಪರಿ ಸಮಾಜವನ್ನ ಲಗಾಡಿ ಎಬ್ಬಿಸುತ್ತ ಲಕ್ಷಗಟ್ಟಲೆ ಹಣ ಲೂಟಿ ಮಾಡುತ್ತಿರುವ ಸಮಯ ಸರಿಯಾಗಿ ಈತನೊಂದು ಪತ್ರಿಕೆಯ ಜಿಲ್ಲಾ ವರದಿಗಾರನ ಗೆಟಪ್ ನಲ್ಲಿ ಮತ್ತೆ ಎಲ್ಲ ಕಚೇರಿಯ ಅಧಿಕಾರಿಗಳ ಎದುರು ಪ್ರತ್ಯಕ್ಷಗೊಂಡು ಅವರ ಕೈಗೊಂದು ಅವಲಕ್ಕಿ ಕಟ್ಟಲು ಯೋಗ್ಯವಿಲ್ಲದ ಪತ್ರಿಕೆಯೊಂದರ ಪ್ರತಿಯೊಂದನ್ನು ನೀಡಿ ಸ್ವಗತದಲ್ಲಿ “ನಾನು ಈ ಪತ್ರಿಕೆಯ ಜಿಲ್ಲಾ ವರದಿಗಾರ ಎನ್ನುತ್ತಾನೆ, ಹಾಗೆ ಅವರ ಬಳಿ ಅಷ್ಟೊಂದು ಭಕ್ಷಿಸು ಪಡೆದು ಅವರಿಗೊಂದು ಪತ್ರಿಕೆ ನೀಡುತ್ತಿರುವ ಫೋಟೋವನ್ನ ಕ್ಲಿಕ್ಕಿಸಿಕೊಂಡು ತನ್ನಂತೆ ಇರುವ ತಲೆ ಮಾಸಿದ ಗ್ರೂಪ್ಗಳಲ್ಲಿ ಹಾಕಿ ಕಿಲ ಕಿಲಾ ಎಂದು ನಕ್ಕು ಬಿಡುತ್ತಾನೆ.” ಪತ್ರಿಕೆಯ ಬಗ್ಗೆಯಾಗಲಿ, ಪತ್ರಿಕೋದ್ಯಮದ ಬಗ್ಗೆ ಗಂಧಗಾಳಿ ಗೊತ್ತಿಲ್ಲದ ಸದಾಶಿವ ಕುಂದಾಪುರದಲ್ಲಿರುವ ಪತ್ರಿಕೆಗಳೆಲ್ಲಾ ಪ್ರಯೋಜನವಿಲ್ಲ ನನ್ನದು ವಿಶ್ವ ಲೆವೆಲ್ ಪೇಪರ್ ಎನ್ನುತ್ತಾ ಐ ಡಿ ಕಾರ್ಡ್ ಬೇಕಾ? 40 ಸಾವಿರ ಮತ್ತು ಸೋರೆ ಮಾಡಿದರೆ 30, 20 ಸಾವಿರಕ್ಕೂ ಐಡಿ ಕಾರ್ಡ್ ಮಾಡಿಸಿ ಕೊಡುವ ಸದಾಶಿವ ಕೋಟೆಗಾರನ ಹರಾಮ್ ಕೋರ್ ಕೆಲಸಗಳ ಬಗ್ಗೆ ನಾಡಿನ ಸುದ್ದಿ ಪತ್ರಿಕೆ ಆರಂಭದಿಂದಲೂ ಕಣ್ಣ ಇಡುತ್ತಲೇ ಬಂದಿತ್ತು.

ಹೀಗಾಗಿ ಸಲೀಸಾಗಿ ಸದಾಶಿವನ ಅಷ್ಟು ಜಾತಕವನ್ನು ದಾಖಲೆ ಸಮೇತ ಓದುಗರ ಮುಂದೆ ಇಡುತ್ತಾ ಸಾಗಿದ್ದೇವೆ. ಇನ್ನು ಪತ್ರಿಕೆ ಹೆಸರಿನಲ್ಲಿ ಈತ ಮಾಡಿದ ಲೂಟಿಯೂ ಸಣ್ಣ ಮಟ್ಟದಲ್ಲ ಈ ಲೂಟಿ ಮಾಡಲು ಈತನೊಂದಿಗೆ ಈತನೇ ಸೃಷ್ಟಿಸಿದ ತಾಲೂಕು ವರದಿಗಾರ ಕಂ ಬ್ರೋಕರ್ ರಾಘವೇಂದ್ರನ ಜೊತೆಗೆ ಸೇರಿದ್ದು ಮತ್ತೊಂದು ವಿಶೇಷ. ಈ ರಾಘವೇಂದ್ರ ಸರ್ವೇ ಇಲಾಖೆಯಲ್ಲಿ ಸರ್ವೆ ಅಧಿಕಾರಿಗಳು ಯಾವುದಾದರೂ ಸ್ಥಳದ ಅಳತೆ ಮಾಡಲು ಇದ್ದರೆ ಅಳತೆ ಮಾಡುವ ಚೈನ್(ಸರಪಳಿ)ನ ಒಂದು ತುದಿ ಹಿಡಿಯಲು ದಿನಗೂಲಿಯಂತೆ ಕೆಲಸಕ್ಕೆ ಇದ್ದ ರಾಘವೇಂದ್ರ ತಾನು ಸರ್ವೇರ್ ಎಂದು ನಂಬಿಸಿ ಅದ್ಯಾವುದೋ ಹುಡುಗಿಯನ್ನ ನಂಬಿಸಿ ಅವಳನ್ನ ತನ್ನ ಬಲೆಗೆ ಕೆಡವಿಕೊಂಡ ಚಾಲಾಕಿ ಮಾತ್ರವಲ್ಲ, ಬೆಂಗಳೂರು ಮೂಲದ ವ್ಯಕ್ತಿಗೆ ಲಕ್ಷಗಟ್ಟಲೆ ಪಂಗನಾಮ ಹಾಕಿದ ಖ್ಯಾತಿಯೂ ಈ ರಾಘವೇಂದ್ರನಿಗಿದೆ. ಅಷ್ಟೇ ಅಲ್ಲದೆ ತಲೆಮಾಸಿದ ಅನೇಕ ಸ್ನೇಹಿತರು ಈ ರಾಘವೇಂದ್ರನಿಗಿದ್ದಾರೆ. ಇಂಥ ಹಿನ್ನೆಲೆಯುಳ್ಳ ರಾಘವೇಂದ್ರ ಅದ್ಯಾವುದೋ ವಿಲಕ್ಷಣ ಹೆಸರಿನ ಪತ್ರಿಕೆಯ ತಾಲೂಕು ವರದಿಗಾರ. ಈತನನ್ನ ಜೊತೆ ಮಾಡಿಕೊಂಡಿದ್ದು ಸಹ ಇದೇ ಸದಾಶಿವ, ಮೂರು ಬಿಟ್ಟವರು ಊರಿಗೆ ದೊಡ್ಡವರು ಎನ್ನುವ ಗಾದೆ ಮಾತು ಇಂಥವರಿಗಾಗಿಯೇ ಹುಟ್ಟಿಕೊಂಡಿತ್ತೋ ಏನೋ? ಗೋಳಿಬಜೆ, ಈರುಳ್ಳಿ ಬಜೆ, ಬಿಡಿ ಉಪ್ಪಿಟ್ಟು ಕಟ್ಟಲಿಕ್ಕೂ ಯೋಗ್ಯವಿಲ್ಲದ ಪತ್ರಿಕೆ ಒಂದನ್ನ ಮುದ್ರಿಸಿಕೊಂಡು ಇವರುಗಳು ಆಡುವ ಡೊಂಬರಾಟವಿದೆಯಲ್ಲ ಅದು ಪರಮ ಅಸಹ್ಯವೇನಿಸಿದೆ ಇರದು. ಹೀಗೆ ಒಂದಷ್ಟು ದಿನ ತಮ್ಮ ಬೇಳೆ ಬೇಯಿಸಿ ಕೊಳ್ಳುತ್ತಾ ಸಾಗಿದ ಸದಾಶಿವ ಅಂಡ್ ಗ್ಯಾಂಗ್ ನ ಅಂಡಿಗೆ ಮೊನ್ನೆ ಆನಂದ ಬಳೆಗಾರನೆಂಬ ಅರಣ್ಯ ಇಲಾಖೆಯ ಸಿಬ್ಬಂದಿ ಟೈಮ್ ಬಾಂಬ್ ಫಿಕ್ಸ್ ಮಾಡಿದ್ದಾರೆ. ಅರ್ಥಾತ್ ಸದಾಶಿವ ನುಂಗು ಪುರಾಣದ ಕುರಿತಾದ ದೂರೊಂದನ್ನು ಪೊಲೀಸ್ ಇಲಾಖೆಗೆ ನೀಡಿದ್ದಾರೆ. ಸದಾಶಿವನ ಮೇಲೆ ದೂರು ದಾಖಲಾಗುತ್ತಿದ್ದಂತೆ ಸದಾಶಿವನ ಸಹಚರರು ಸದಾಶಿವನ ರಕ್ಷಣೆಗೆ ನಿಲ್ಲುತ್ತಾರೆ. ಅದರಲ್ಲಿ ಸುಧಾಕರ್ ಖಾರ್ವಿ, ರಾಜು ಬಸ್ರೂರು, ರಮೇಶ್ ದೇವಾಡಿಗ ಇನ್ನು ಕೆಲವರು ಸಾಲು ಸಾಲು ಚರ್ಚೆ ನಡೆಸಿ ಸದಾಶಿವನ ರಕ್ಷಣೆ ಮಾಡಲು ಮುಂದಾಗುತ್ತಾರೆ. ಹಾಗೇ ರಕ್ಷಣೆ ಮಾಡುವ ನೆಪದಲ್ಲಿ ರಾಜು ಬಸ್ರೂರು ಎಂಬ ಸೋ ಕಾಲ್ಲ್ಡ್ ಹಾರಾಟಗಾರ ತನ್ನ ಜಾತಿಯನ್ನೇ ಟ್ರಂಪ್ ಕಾರ್ಡ್ ಆಗಿ ಯೂಸ್ ಮಾಡಲು ಹೊರಟು ನಿಂತು

ಆಡಬಾರದ ಮಾತುಗಳನ್ನೆಲ್ಲ ಆಡಿ ಕಾಲ್ ರೆಕಾರ್ಡಿನಲ್ಲಿ ಸಿಕ್ಕಿಬಿದ್ದು ಬಿಟ್ಟ ರಾಜು ತನ್ನದೇ ಸಂಘಟನೆಯಲ್ಲಿನ ಮುಖಂಡೆಯೊರ್ವರೊಂದಿಗೆ ಮಾತನಾಡುತ್ತಾ ಪೊಲೀಸರು ಮಾಡುವ ಕೇಸ್ ಗಳ ಬಗ್ಗೆ ಸೇರಿದಂತೆ ಸದಾಶಿವನ ವಿರುದ್ಧ ಪತ್ರಿಕೆಯಲ್ಲಿ ಬಂದ ಸುದ್ದಿಯ ಬಗ್ಗೆ ಆಕ್ರೋಶಗೊಂಡು ಪತ್ರಕರ್ತರು ಟಿಪ್ಪರ್ ಅಡಿ ಬಿದ್ದು ಸಾಯದೇ ಹೋದರೆ ನೋಡಿ ಅನ್ನುತ್ತಾನೆ. ಹಾಗಾದರೆ ರಾಜು ಬಸ್ರೂರು ಪುಡಿ ರೌಡಿನಾ? ಬರೀ ಲಾಟ್ ಪುಟ್ ಬಿಡುತ್ತಾ ತಿರುಗುವ ಈತನ ಬಗ್ಗೆ ಕೋಣಿ ಹಾಗೂ ಬಸ್ರೂರು ಭಾಗದಲ್ಲಿ ರಹಸ್ಯ ಕಥೆಗಳಿವೆ. ಹೀಗೆ ಹೆಂಗಸಿನೊಂದಿಗೆ ಮಾತನಾಡುತ್ತಿರುವನೆಂಬ ಪ್ರಜ್ಞೆ ಇಲ್ಲದೆ ಹೈಪ್ ತೆಗೆದುಕೊಳ್ಳುವ ಗಡಿಬಿಡಿಯಲ್ಲಿ ರಾಜು ಬಸ್ರೂರು ಹೊಗೆ ಹಾರಿಸಿದ್ದೆ ಹಾರಿಸಿದ್ದು, ಈತನ ಗಾರೆ ಕೆಲಸ ಏನು? ಲ್ಯಾಂಡ್ ಲಿಂಕ್ಸ್ ಏನು? ಯಾರ್ಯಾರಿಗೆಲ್ಲ ಎಲ್ಲೆಲ್ಲಿ ಉಂಡೆನಾಮ ತಿಕ್ಕಿದ, ಹೀಗೆ ಈತನ ಬಗ್ಗೆ ಬರೆದರೆ ಅದೇ ಒಂದು ಸಿನಿಮಾ ಸ್ಟೋರಿಗೆ ಆಗುವಷ್ಟು ಸರಕಾಗುತ್ತದೆ. ಥೇಟ್ ಓತಿಕೇತನಂತಿರುವ ಈ ರಾಜು ಬಸ್ರೂರು ಸಹ ಬ್ರೋಕರ್! ಯಾವುದೆನೆಲ್ಲ ಬ್ರೋಕರ್ ಮಾಡುತ್ತಾನೋ! ಬಿಡುತ್ತಾನೋ?ಆದರೆ ನಾನಾ ಸಂಘಟನೆ ಹೆಸರಿನಲ್ಲಿ ಸದಾಶಿವ ನೊಂದಿಗೆ ಸೇರಿ ಲಕ್ಷ ಲಕ್ಷ ಚಂದಾ ಎತ್ತಿ ಸೆಕೆಂಡ್ ಸೆಟಪ್ ನೊಂದಿಗೆ ಆರಾಮವಾಗಿದ್ದಾನೆ. ಮೊನ್ನೆ ಮೊನ್ನೆ ಅಷ್ಟೇ ಈ ರಾಜು ಸದಾಶಿವ ಸೇರಿ ಅರಣ್ಯ ಇಲಾಖೆಯನ್ನ ಯಾವ ಪರಿ ಕಾಡಿ ಬೇಡಿ ಹರಿದು ಮುಕ್ಕಿದರೆಂದರೆ ಅದರ ವಸೂಲಿ ಬಾಜಿಯೇ 20 ಲಕ್ಷಕ್ಕೆ ಮಿಕ್ಕಿದೆ ಎನ್ನುವ ಸುದ್ದಿ ಇದೆ. ಇವನಿಗೂ ಸಹ ಸದಾಶಿವನಂತೆ ಯಾವುದೇ ಉದ್ಯೋಗವಿಲ್ಲ ಥೇಟು ತಿರುಬೋಕಿ. ಹೀಗಾಗಿ ಸದಾಶಿವನ ಬಗ್ಗೆ ಸುದ್ದಿ ಬರೆದಾಗ ಆತನೊಂದಿಗೆ ಈತನೂ ವಸೂಲಿಕೋರನಾಗಿರುವ ಕಾರಣ ಸಹಜವಾಗಿಯೇ ಸಿಟ್ಟಿಗೆದ್ದಿದ್ದಾನೆ, ಹಾಗೆ ಸಿಟ್ಟಿಗೆದ್ದ ಪರಿಣಾಮ ಗಂಗೊಳ್ಳಿ ಠಾಣೆಯಲ್ಲಿ ಇಬ್ಬರ ಮೇಲೂ ದೂರು ಸಹ ದಾಖಲಾಗಿದೆ. ಹಾಗಂತ ಈ ರಾಜು ಮತ್ತಷ್ಟು ಹಾರಾಟ ಮಾಡಲು ಆರಂಭಿಸಿದರೆ ಈತನ ಇನ್ನಷ್ಟು ರೋಚಕ ವಿಷಯ ಮುಂದೆ ಎಳೆಎಳೆಯಾಗಿ ಬಿತ್ತರಿಸಲಿದ್ದೇವೆ. ಯಾವುದಕ್ಕೂ ನೆಟ್ಟಗಾದರೆ ಒಳಿತು, ಅತ್ತ ಸದಾಶಿವನ ಮೇಲೆ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು, ದೂರು ನೀಡಿದ್ದು ಆನಂದ ಬಳೆಗಾರ ಅರಣ್ಯ ಸಂರಕ್ಷಕ. ಈ ಆನಂದ ಬಳಗಾರನಿಗೆ ಈ ದರ್ಬೇಸಿ ಸದಾಶಿವ ಅದ್ಯಾವ ಪರಿ ಕಾಡಿದ್ದಾನೆಂದರೆ ಆತನ ಬಳಿ ಹಣಕ್ಕೆ ಬೇಡಿಕೆಯನ್ನಿಟ್ಟಿದ್ದು, ಅದು ನೀಡದ ಕಾರಣ ಆತನನ್ನು ಕೆಲಸದಿಂದ ಸಸ್ಪೆಂಡ್ ಮಾಡಿ ಬಿಳಿ ಬೀಡಿ ಹೋಗೆ ಹಾರಿಸಿದ್ದ, ಆದರೆ ಕರ್ಮ ರಿಟರ್ನ್ಸ್ ಮೊನ್ನೆ ಪುನಃ ಆನಂದ ಬಳೆಗಾರನಿಗೆ ಧಮ್ಕಿ ಹಾಕಿ ಬೇಡಿಕೆ ಇಟ್ಟ ಪರಿಣಾಮ ಸದಾಶಿವನ ಮೇಲೆ ಕೇಸು ದಾಖಲಾಗಿ ಹಿರಿಯಡ್ಕ ಜೈಲು ಸೇರಿದ್ದಾನೆ. ಅತ್ತ ಈತನ ಖಾಸ್ ಜಿಗರಿ ದೋಸ್ತ್ ರಾಜು ನಾಪತ್ತೆ, ರಾಘವೇಂದ್ರ ಅಯ್ಯಯ್ಯೋ ನನ್ನದೇನಿಲ್ಲ ಎನ್ನುತ್ತಿದ್ದಾರೆ. ರಮೇಶ್ ದೇವಾಡಿಗ ಮತ್ತು ಸುಧಾಕರ್ ಖಾರ್ವಿ ನಿಮ್ಮ ಸಹವಾಸ ಬೇಡ ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಈ ನಡುವೆ ಸದಾಶಿವ ಕೋಟೆಕಾರ್ ಪತ್ರಿಕೆ ಹಾಗೂ ಸಂಘಟನೆಗೆ ರಾಜೀನಾಮೆ ಪತ್ರ ರವಾನಿಸಿದ್ದಾನೆ. ಸದ್ಯ ಕುಂದಾಪುರ ನೆಮ್ಮದಿ ನಿಟ್ಟಿಸಿರು ಬಿಟ್ಟಿದೆ ಮತ್ತು ಸದಾಶಿವನ ಹಾವಳಿಯಲ್ಲಿ ಯಾರಾದರೂ ಇದ್ದರೆ ನೇರ ಪತ್ರಿಕೆಯನ್ನು ಸಂಪರ್ಕಿಸಿ.

Leave a Reply

Your email address will not be published. Required fields are marked *