ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟದ ಕಾರಂತ ಥಿಮ್ ಪಾರ್ಕನಲ್ಲಿ ಗಾಡಿ ಕೂಸಣ್ಣನಿಗೆ ನುಡಿ ನಮನ

ಕೋಟ : ತನ್ನ ವಿಶಿಷ್ಠವಾದ ಕಾರ್ಯದ ಮೂಲಕ ಮನೆ ಮಾತಾಗಿದ್ದ ಮತ್ತು ಸಾಮಾಜಿಕ ಸೇವೆಗಳಿಗೆ ತನ್ನನ್ನು ತಾನು ಅರ್ಪಿಸಿಕೊಂಡ, ಜೊತೆಗೆ ವ್ಯವಹಾರಗಳಲ್ಲಿ ತನ್ನದೇ ವಿಶಿಷ್ಠ ಛಾಪನ್ನು ಮೂಡಿಸಿದ ಗಿಳಿಯಾರು ಗಾಡಿ ಕೂಸ ಪೂಜಾರಿಯವರಿಗೆ ಇತ್ತೀಚಿಗೆ ಕಾರಂತ ಥೀಂ ಪಾರ್ಕ್ನಲ್ಲಿ ಸಮಾರೋಪಗೊಂಡ ಬೇಸಿಗೆ ಶಿಬಿರ ವಿಕಸನದಲ್ಲಿ ನುಡಿನಮನ ಸಲ್ಲಿಸಲಾಯಿತು.

ಗಾಡಿ ಕೂಸ ಪೂಜಾರಿಯವರ ಪುತ್ರ ಬೋಜ ಪೂಜಾರಿ ತನ್ನ ತಂದೆಯ ಕಾರ್ಯಗಳನ್ನು ಅವರು ನೀಡಿದ ಸಂದೇಶಗಳನ್ನು ವಿದ್ಯಾರ್ಥಿಗಳ ಜೊತೆ ಹಂಚಿಕೊoಡರು. ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಸದಸ್ಯ ಎಂ.ಸುಬ್ರಾಯ ಆಚಾರ್,ಶಿಬಿರದ ನಿರ್ದೇಶಕ ನರೇಂದ್ರ ಕುಮಾರ್ ಕೋಟ ಸ್ವಾಗತಿಸಿ ವಂದಿಸಿದರು. ವಿದ್ಯಾರ್ಥಿನಿಯರಾದ ಸೃಷ್ಠಿ ಮಾನ್ವಿ ಸಮೀಕ್ಷಾ ಮೊದಲಾದವರು ನುಡಿನಮನ ಸಲ್ಲಿಸಿದರು. ಕೋಟದ ಕಾರಂತ ಥಿಮ್ ಪಾರ್ಕನಲ್ಲಿ ಗಾಡಿ ಕೂಸಣ್ಣನಿಗೆ ಶಿಬಿರಾರ್ಥಿಗಳಿಂದ ನುಡಿ ನಮನ ಸಲ್ಲಿಸಲಾಯಿತು.

ಗಾಡಿ ಕೂಸ ಪೂಜಾರಿಯವರ ಪುತ್ರ ಬೋಜ ಪೂಜಾರಿ, ಶಿಬಿರದ ನಿರ್ದೇಶಕ ನರೇಂದ್ರ ಕುಮಾರ್ ಕೋಟ, ವಿದ್ಯಾರ್ಥಿನಿಯರಾದ ಸೃಷ್ಠಿ ಮಾನ್ವಿ ಇದ್ದರು.

Leave a Reply

Your email address will not be published. Required fields are marked *