ಕೋಟ: ರಾಷ್ಟ್ರೀಯ ಸ್ವಚ್ಛತಾ ಅಭಿಯಾನದಡಿ ಮೂಡುಗಿಳಿಯಾರಿನ ರೋಟರಿ ಸಮುದಾಯದಳ ಮತ್ತು ಹಿರಿಯ ನಾಗರೀಕ ವೇದಿಕೆ ಗಿಳಿಯಾರು ಇವರ ಸಯುಕ್ತ ಆಶ್ರಯದಲ್ಲಿ ಮೂಡುಗಿಳಿಯಾರು ಶಾಲಾ ವಠಾರ ಹಾಗೂ ಗ್ರಾಮದ ಧಾರ್ಮಿಕ ಸ್ಥಳ ಹೊನ್ನಾರಿ ಬೊಬ್ಬರ್ಯ ದೇವಸ್ಥಾನದ ಆಸುಪಾಸಿನ ರಸ್ತೆ ಬದಿ ಸೇರಿದಂತೆ ವಿವಿಧ ಭಾಗಗಳ ಸ್ವಚ್ಛತಾ ಕಾರ್ಯಕ್ರಮ ಭಾನುವಾರ ಜರಗಿತು.
ಈ ಸಂದರ್ಭದಲ್ಲಿ ಸ್ಥಳೀಯ ನಾಗರೀಕರಿಗೆ ಸ್ವಚ್ಛತೆ ಮತ್ತು ಆರೋಗ್ಯಕಾಪಾಡುದರ ಬಗ್ಗೆ ಮಾಹಿತಿ ನೀಡಲಾತು.
ಈ ಕಾರ್ಯಕ್ರಮದಲ್ಲಿ ಹಿರಿಯ ನಾಗರೀಕ ವೇದಿಕೆ ಕೋಟ ಗಿಳಿಯಾರು ಇದರ ಅಧ್ಯಕ್ಷ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಂದ ಕುಂದ ಸೋಮಶೇಖರ್ ಶೆಟ್ಟಿ ಗಿಳಿಯಾರು ಮತ್ತು ವೇದಿಕೆಯ ಸದಸ್ಯರು ಹಾಗೂ ರೋಟರಿ ಸಮುದಾಯದ ದಳದ ಅಧ್ಯಕ್ಷ ದಯಾನಂದ ಪೂಜಾರಿ, ಮಾಜಿ ಅಧ್ಯಕ್ಷ ಶರಣಯ್ಯ ಹೀರೆಮಠ, ಗೋಪಾಲ ಗರಡಿ ಮಕ್ಕಿ, ಪ್ರಮುಖರಾದ ರಾಘವೇಂದ್ರ ಬಸವನ ಕಲ್ಲು, ಲಲಿತಾ ಪೂಜಾರಿ,ಸದಾನಂದ ಹೊನ್ನಾರಿ ಉಪಸ್ಥಿತಾರಿದ್ದರು.
ರಾಷ್ಟ್ರೀಯ ಸ್ವಚ್ಛತಾ ಅಭಿಯಾನದಡಿ ಮೂಡುಗಿಳಿಯಾರಿನ ರೋಟರಿ ಸಮುದಾಯದಳ ಮತ್ತು ಹಿರಿಯ ನಾಗರೀಕ ವೇದಿಕೆ ಗಿಳಿಯಾರು ಇವರ ಸಯುಕ್ತ ಆಶ್ರಯದಲ್ಲಿ ಮೂಡುಗಿಳಿಯಾರು ಶಾಲಾ ವಠಾರ ಆಸುಪಾಸು ಸ್ವಚ್ಛತೆ ಕೈಗೊಂಡಿತು.













Leave a Reply