ಕಿರಣ್ ಪೂಜಾರಿ ಸಾರಥ್ಯದಲ್ಲಿ…..

2025-26 ನೇ ಸಾಲಿಗೆ ಆದರ್ಶ ವಿದ್ಯಾಲಯದ 6 ನೇ ತರಗತಿಗೆ ಅರ್ಜಿ ಆಹ್ವಾನ

ವರದಿ : ಅಶ್ವಿನಿ ಅಂಗಡಿ

ಬಾದಾಮಿ: ತಾಲೂಕಿನ ಚಿಕ್ಕಮುಚ್ಚಳಗುಡ್ಡ ಗ್ರಾಮದ ಸರಕಾರಿ ಆದರ್ಶ ವಿದ್ಯಾಲಯಕ್ಕೆ 2025-26 ನೇ ಸಾಲಿನ ಆಂಗ್ಲ ಮಾದ್ಯಮ 6 ನೇ ತರಗತಿಗೆ 120 ಸೀಟುಗಳ ಆಯ್ಕೆಯಾಗಿ ಅರ್ಜಿ ಆಹ್ವಾನಿಸಲಾಗಿದೆ.

ಪ್ರಸಕ್ತ ಸಾಲಿನಲ್ಲಿ  5ನೇ ತರಗತಿಯಲ್ಲಿ ಓದುತ್ತಿರುವ ಅರ್ಹ ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಅರ್ಜಿ ಸಲ್ಲಿಸಬಯಸುವವರು ಫೆ.14 ರಿಂದ 28 ರ ಒಳಗೆ ಅಗತ್ಯ ದಾಖಲೆಗಳಾದ ಎಸ್.ಎ.ಟಿ.ಎಸ್.ನಂಬರ, ಭಾವಚಿತ್ರ, ಆಧಾರ ಕಾರ್ಡ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಪಾಲಕರ ಚಾಲ್ತಿ ಇರುವ ಮೊಬೈಲ್ ನಂಬರ, ವಿಕಲಚೇತನರಾಗಿದ್ದಲ್ಲಿ ವೈದ್ಯಕೀಯ ಪ್ರಮಾಣಪತ್ರ, ಎಲ್ಲವೂಗಳನ್ನು www.schooleducation.kara.nic.in   www.vidyavahini.kar.gov.in ವೆಬ್ ಸೈಟ್ ಮೂಲಕ ಆನ್ ಲೈನ್‌ನಲ್ಲಿ ಸಲ್ಲಿಸಬಹುದು. ಪ್ರವೇಶ ಪರೀಕ್ಷೆಯು ಮಾರ್ಚ 23 ರಂದು ನಡೆಯಲಿದೆ ಹೆಚ್ಚಿನ ಮಾಹಿತಿಗಾಗಿ ನೋಡಲ್ ಅಧಿಕಾರಿ ಎಸ್.ಪಿ.ಗೌಡರ ಅಥವಾ ಆದರ್ಶ ವಿದ್ಯಾಲಯದ ಪ್ರಾಚಾರ್ಯ ಶಂಕರ ಕುಲಕರ್ಣಿ(ಮೊ:9008250478,  7829781423) ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೇಶವ ವಾಮನ ಪೆಟ್ಲೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *