ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಮಣೂರಿನಲ್ಲಿ  ಹೆಜ್ಜೇನು ದಾಳಿ  ಐವರು ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

ಕೋಟ: ಕೋಟ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಣೂರಿನಲ್ಲಿ ಹೆಜ್ಜೇನು ದಾಳಿಯಿಂದ ಐವರು ಗಂಭೀರ ಗಾಯಗೊಂಡ ಘಟನೆ ಮಂಗಳವಾರ  ಬೆಳಿಗ್ಗೆ ಸಂಭವಿಸಿದೆ.

ಹೆಜ್ಜೇನು ದಾಳಿಗೊಳಗಾದ ಕಲ್ಲು ಕೆಲಸದ ಮೇಸ್ತಿç ಹಾಜಿ ಇಬ್ರಾಹಿಂ ಪಾರಂಪಳ್ಳಿ, ಕಾರ್ಮಿಕರಾದ ಮೊಹಮ್ಮದ್ ಪಾರಂಪಳ್ಳಿ, ಪ್ರಭಾಕರ, ಶೇಖರ್ ಪೂಜಾರಿ ಎಂದು ಗುರುತಿಸಲಾಗಿದೆ.

ಕೋಟ ಮಣೂರಿನಲ್ಲಿ ಕಾಂಪೌoಡ್ ಕೆಲಸ ಮಾಡುತ್ತಿದ್ದ ವೇಳೆ  ಹೆಜ್ಜೇನು ಏಕಾಏಕಿ ದಾಳಿ ನಡೆಸಿದೆ.  ಈ ಜೇನು ನೊಣಗಳ ಕಡಿತದಿಂದ ತಪ್ಪಿಸಿಕೊಂಡು ಐವರು ರಸ್ತೆಗೆ ಓಡಿ ಬಂದಿದ್ದರಿoದ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಗಂಭೀರ ಗಾಯಗೊಂಡವರನ್ನು ತಕ್ಷಣ ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *