ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಯಕ್ಷಗಾನ ಪ್ರಸಂಗ ಕರ್ತ, ವಿದ್ವಾಂಸ ಶಿರೂರು ಪಣಿಪ್ಪಯ್ಯ ಸಂಸ್ಮರಣೆ

ಕೋಟ: ಹದಿನೈದು ಯಕ್ಷಗಾನ ಪ್ರಸಂಗಗಳನ್ನು ರಚಿಸಿರುವ, ರಾಮಾಯಣ, ಮಹಾಭಾರತ, ಭಾಗವತಕ್ಕೆ ಸಂಬAದಿಸಿದ ಹಲವಾರು ಹಳೆ ತಾಡವಾಲೆ ಸಂಗ್ರಹಕರಾದ, ಸ್ವತಾ: ಯಕ್ಷಗಾನ ಕಲಾವಿದರಾದ, ಡಾ| ಶಿವರಾಮ ಕಾರಂತರ ಯಕ್ಷಗಾನ ಒಡನಾಡಿಯಾಗಿದ್ದ ಕುಂದಾಪುರ ತಾಲೂಕಿನ ಶಿರೂರಿನ ಮೇಲ್ಪಂಕ್ತಿ ಪಣಿಯಪ್ಪಯ್ಯನವರ ಸಂಸ್ಮರಣಾ ಕಾರ್ಯಕ್ರಮವು ಡಿ. 9 ರಂದು (ನಾಳೆ) ಸಾಲಿಗ್ರಾಮದ ಗುಂಡ್ಮಿಯಲ್ಲಿರುವ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿಯ ಸದಾನಂದ ರಂಗ ಮಂಟಪದಲ್ಲಿ ನಡೆಯಲಿದೆ.

ಗೀತಾನಂದ ಫೌಂಡೇಶನ್ ನ ಆನಂದ ಸಿ ಕುಂದರ್, ಹಿರಿಯ ವಿದ್ವಾಂಸ ಡಾ| ಕಬ್ಬಿನಾಲೆ ವಸಂತ ಭಾರದ್ವಾಜ್, ಉಡುಪಿಯ ಉಪನ್ಯಾಸಕರಾದ ಶಿವಕುಮಾರ ಅಳಗೋಡು, ಉಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಭಾಸ್ಕರ ಕಾಮತ್, ಲೇಖಕರಾದ ರಾಜಗೋಪಾಲ ಕನ್ಯಾನ ಇವರೆಲ್ಲರ ಯಪಸ್ಥಿತಿಯಲ್ಲಿ ಪಣಿಪ್ಪಯ್ಯ ರಚಿತ ಯಕ್ಷಗಾನ ಕೃತಿಗಳ ಬಿಡುಗಡೆ ಹಾಗೂ ಅವರು ರಚಿಸಿದ ಯಕ್ಷಗಾನ ಪ್ರಸಂಗ ಯೌವನಾಶ್ವನ ಕಾಳಗ ಪ್ರದರ್ಶನ, ಶ್ರೀನಿಧಿ ಶಿರೂರು ಸಂಗಡಿಗರಿAದ ಕೊಳಲುವಾದನ ಕಾರ್ಯಕ್ರಮವಿದೆ. ಸಂಜೆ 4-30 ಕ್ಕೆ ಕೊಳಲುವಾದನದಿಂದ ಸಮಾರಂಭ ಪ್ರಾರಂಭವಾಗುವುದೆಂದು ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *