ಕೋಟ: ಕಾರ್ತಟ್ಟು-ಚಿತ್ರಪಾಡಿ ಅಧ್ವರ್ಯು ವಿಷ್ಣು ದೇವಸ್ಥಾನ ಇಲ್ಲಿ ವೈಕುಂಠ ಚತುರ್ದಶಿಯ ಅಂಗವಾಗಿ ವಾರ್ಷಿಕ ದೀಪೋತ್ಸವ, ನವಕಪ್ರಧಾನ ಹೋಮ, ಸತ್ಯನಾರಾಯಣ ಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊAಡಿತು.
ಪ್ರತಿ ವರ್ಷದಂತೆ ಈ ಬಾರಿಯೂ ಸಾಲಿಗ್ರಾಮ ವಲಯ ಬ್ರಾಹ್ಮಣ ಸಭಾದವರಿಂದ ಸುಶ್ರಾವ್ಯ ಭಜನೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಸೇವಾಕರ್ತರಾದ ನಡೂರು ಎಸೋಸಿಯೇಟ್ಸನ, ಮಂದಿರ ನಿರ್ಮಾಣ ಹೊಣೆಹೊತ್ತ ಸಂದೀಪ ಪೂಜಾರಿಯವರನ್ನು ಪ್ರಸಾದ ಇತ್ತು ಗೌರವಿಸಿದರು. ಈ ಸಂದರ್ಭದಲ್ಲಿ ಮಂದಿರ ನಿರ್ಮಾಣ ಸಮಿತಿಯ ಹರಿಕೃಷ್ಣ ಸೋಮಯಾಜಿ, ಶಂಕರನಾರಾಯಣ ಸೋಮಯಾಜಿ, ಉಪೇಂದ್ರ ಸೋಮಯಾಜಿ ಇದ್ದರು. ಪೂಜಾ ವಿಧಿಯನ್ನು ಅರ್ಚಕ ಮಹೇಶ ಮತ್ತು ಗಣೇಶ ಮಯ್ಯ, ಧಾರ್ಮಿಕ ವಿಧಿ ವಿಧಾನಗಳನ್ನು ಬಲರಾಮ ಸೋಮಯಾಜಿ ಮತ್ತು ರಾಜಾರಾಮ ಸೋಮಯಾಜಿಯವರು ನೆರವೇರಿಸಿಕೊಟ್ಟರು.
ಕಾರ್ತಟ್ಟು-ಚಿತ್ರಪಾಡಿ ಅಧ್ವರ್ಯು ವಿಷ್ಣು ದೇವಸ್ಥಾನ ಇಲ್ಲಿ ವೈಕುಂಠ ಚತುರ್ದಶಿಯ ಅಂಗವಾಗಿ ವಾರ್ಷಿಕ ದೀಪೋತ್ಸವ, ನವಕಪ್ರಧಾನ ಹೋಮ, ಸತ್ಯನಾರಾಯಣ ಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಹಂಪನಗೊಂಡಿತು..












Leave a Reply