ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸ.ಹಿ.ಪ್ರಾ ಶಾಲೆ ಮಣೂರಿನ ವಿದ್ಯಾರ್ಥಿಗಳ ಸಾಧನೆ

ಕೋಟ: ಇತ್ತೀಚಿಗೆ ಸ.ಹಿ ಪ್ರಾ ಶಾಲೆ ಸಾಹೇಬರಕಟ್ಟೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸ.ಹಿ.ಪ್ರಾ ಶಾಲೆ ಮಣೂರಿನ ವಿದ್ಯಾರ್ಥಿಗಳು ವಿವಿಧ ವಿಭಾಗದಲ್ಲಿ ಸ್ಥಾನ ಪಡೆದು ಜಿಲ್ಲಾ ಪಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇಲ್ಲಿನ ವಿದ್ಯಾರ್ಥಿ ನೂತನ ಕೋಟತಟ್ಟು ಕಿರಿಯರ ವಿಭಾಗ ಛದ್ಮವೇಷ ಸ್ಪರ್ಧೆಯಲ್ಲಿ ಪ್ರಥಮ, ಕೌಸ್ತುಬ್ ಕಿರಿಯರ ವಿಭಾಗ ಕಥೆ ಹೇಳುವ ಸ್ಪರ್ಧೆಯಲ್ಲಿ ಪ್ರಥಮ , ವೈಷ್ಣವಿ ಕಿರಿಯ ವಿಭಾಗ ಕನ್ನಡ ಕಂಠಪಾಠ ಪ್ರಥಮ, ಹಾಗೂ ನಿಧಿ ಹಿರಿಯರ ವಿಭಾಗ ಛದ್ಮವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಅಭಿನಂದಿಸಿದೆ.

Leave a Reply

Your email address will not be published. Required fields are marked *