ಕೋಟ : ಇಲ್ಲಿನ ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ಇತ್ತೀಚಿಗೆ ನಡೆದ ವಿಶ್ವ ಮೀನುಗಾರರ ದಿನಾಚರಣೆಯ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರ, ಜಲಾನಯನ ಅಭಿವೃದ್ಧಿ ಇಲಾಖೆ, ಮೀನುಗಾರಿಕೆ ಇಲಾಖೆ, ಹಾಗೂ ಸ್ಕೊಡವೇಸ ಸಂಸ್ಥೆಯ ಸಹಯೋಗದಲ್ಲಿ ರಚಿತವಾದ ಉಡುಪಿ ಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿಯಮಿತ ತನ್ನ ಕಂಪನಿಯಿAದ ತಯಾರಿಸಿದ ವಿವಿಧ ಮೀನಿನ ಉತ್ಪನ್ನಗಳ ಜೊತೆಗೆ ಕಂಪನಿಯ ಮೀನುಗಾರ ಷೇರುದಾರರು ನಡೆಸುತ್ತಿರುವ ಪಚ್ಚಿಲೇ ಮತ್ತು ಕಲ್ಲ ಕೃಷಿಯ ಪಚ್ಚಿಲೇ, ಕಲ್ಲವನ್ನು ಪ್ರದರ್ಶಿಸಿ ಪ್ರದರ್ಶನದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ಮೀನುಗಾರಿಕಾ ಸಚಿವ ಮಂಕಾಳ ಎಸ್ ವೈದ್ಯ ಹಾಗೂ ಇಲಾಖೆಯ ಅಧಿಕಾರಿಗಳು ಉಡುಪಿ ಕಿನಾರ ಮೀನುಗಾರರ ಉತ್ಪಾದಕರ ಕಂಪನಿಯ ಮಳಿಗೆಯನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಕಂಪನಿಯ ಅಧ್ಯಕ್ಷರು ಲೋಹಿತ್ ಖಾರ್ವಿ, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಗಾಯತ್ರಿ ವಿಜಯ್ , ಡಿಇಒ ವಿದೀಕ್ಷಾ, ಎಲ್.ಆರ್.ಪಿ ಭೂಮಿಕಾ, ನಿರ್ದೇಶಕರು ಸುದಿನ ಅವರು ಕಂಪನಿಯ ಉತ್ಪನ್ನ ಮತ್ತು ಮೀನು ಕೃಷಿ ಬಗ್ಗೆ ಮಾಹಿತಿ ನೀಡಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಮೀನುಗಾರಿಕ ಸಚಿವ ಮಂಕಾಳ್ ಎಸ್ ವೈದ್ಯ ,ಇಲಾಖಾ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಉಡುಪಿ ಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿಯಮಿತ ತನ್ನ ಕಂಪನಿಯಿAದ ತಯಾರಿಸಿದ ವಿವಿಧ ಮೀನಿನ ಉತ್ಪನ್ನಗಳ ಜೊತೆಗೆ ಕಂಪನಿಯ ಮೀನುಗಾರ ಷೇರುದಾರರು ನಡೆಸುತ್ತಿರುವ ಪಚ್ಚಿಲೇ ಮತ್ತು ಕಲ್ಲ ಕೃಷಿಯ ಪಚ್ಚಿಲೇ, ಕಲ್ಲವನ್ನು ಪ್ರದರ್ಶನವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಕ್ಷೀಸಿದರು.












Leave a Reply