ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮೊಬೈಲ್ ವ್ಯಸನದಿಂದ ಬಿಡುಗಡೆ

ಮೊಬೈಲ್ ವ್ಯಸನದಿಂದ ಬಿಡುಗಡೆ ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಕುಂಜಿಬೆಟ್ಟುವಿನ ಸುನಾಗ್ ಆಸ್ಪತ್ರೆಯ ಸಹಯೋಗ ದಲ್ಲಿ ಮೊಬೈಲ್ ವ್ಯಸನ ಮುಕ್ತಿಗೆ ಸಂಬಂಧಿಸಿದ ಸಂಶೋಧನ ಫಲಿತಾಂಶ ಗಳನ್ನು ಚರ್ಚಿಸುವ ಕಾರ್ಯಕ್ರಮ ವೊಂದನ್ನು ಈಚೆಗೆ ಏರ್ಪಡಿಸಲಾಯಿತು.

ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾನಿಲಯದ ಮನೋವೈದ್ಯಕೀಯ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ ಮಿಧುನ್ ಆಚಾರ್ಯ ಅವರು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೊಬೈಲ್ ವ್ಯಸನ ಮುಕ್ತಿಗೆ ಸಂಬಂಧಿಸಿದಂತೆ ಆನ್ಲೈನ್ ನಲ್ಲಿ ನಡೆಸಿದ ಸಂಶೋಧನೆ ಮತ್ತು ಚಿಕಿತ್ಸೆಯ ವಿವರಗಳನ್ನು ವಿದ್ಯಾರ್ಥಿ- ಶಿಕ್ಷಕರೊಂದಿಗೆ ಸಂವಾದ ರೂಪದಲ್ಲಿ ಹಂಚಿಕೊಂಡರು. ಹವ್ಯಾಸ,ಅಭ್ಯಾಸ ಮತ್ತು ವ್ಯಸನದ ನಡುವೆ ಇರುವ ಸೂಕ್ಷ್ಮ ವ್ಯತ್ಯಾಸಗಳನ್ನು ವಿವರಿಸಿ ಮೊಬೈಲ್ ಬಳಕೆ ಮಿತವಾಗಿರಲಿ ಎಂಬ ಕಿವಿಮಾತನ್ನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ಮಾತನಾಡುತ್ತ” ಮೊಬೈಲ್ ಕಿಸೆಯಲ್ಲಿರಲಿ, ಪುಸ್ತಕ ಕೈಯಲ್ಲಿರಲಿ. ಪುಸ್ತಕ ಬರಿಯ ಹಸ್ತಭೂಷಣವಾಗದಿರಲಿ. ಮೊಬೈಲ್ ಪರದೆಯ ವೀಕ್ಷಣೆಯನ್ನು ಮಿತಗೊಳಿಸಿ ಮರಳಿ ನಾವು ಮುದ್ತಿತ ಪುಟಗಳನ್ನು ಹೆಚ್ಚು ಓದ ಬೇಕು” ಎಂದು ನುಡಿದರು.

ಸುನಾಗ್ ಆಸ್ಪತ್ರೆಯ ಡಾ ನರೇಂದ್ರ ಕುಮಾರ್ ಅವರ ಸಹಯೋಗದಿಂದ ನೆರವೇರಿದ ಈ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಆಡಳಿತ ವ್ಯವಸ್ಥಾಪಕಿ ಶ್ರೀ ಮತಿ ಶೋಭಾ ಆಚಾರ್ಯ ಉಪಸ್ಥಿತರಿದ್ದರು. ಶ್ರೇಯಾ ಶೆಟ್ಟಿ ಸ್ವಾಗತಿಸಿದರೆ ಶ್ರೀರತ್ನ ಭಟ್ ಧನ್ಯವಾದ ಸಮರ್ಪಿಸಿದರು. ರೀಮಾ ರಚನ ಸಲ್ದಾನ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರೆ ಫಮಾ ಮರಿಯಮ್ ಮತ್ತು ಅನುಷಾ ಕಾರ್ಯಕ್ರಮ ನಿರೂಪಣೆ ಮಾಡಿದರು.

Leave a Reply

Your email address will not be published. Required fields are marked *