ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೃಷ್ಣ ರುಕ್ಮಿಣಿ ಕಾನೂನು ಕಾಲೇಜಿನಲ್ಲಿ ಎನ್. ಎನ್. ಎಸ್ ಸಂಸ್ಥಾಪನಾ ದಿನಾಚರಣೆ

ಬೆಂಗಳೂರು: ಚಿಕ್ಕಜಾಲ, ಬೆಂಗಳೂರು ಉತ್ತರದಕೃಷ್ಣ ರುಕ್ಮಿಣಿ ಕಾನೂನು ಕಾಲೇಜಿನಲ್ಲಿ ಎನ್. ಎಸ್.ಎಸ್ ಸಂಸ್ಥಾಪನ‌ ದಿನಾಚಾರಣೆಯನ್ನು ಸ್ವಚ್ಚತಾ ಅಭಿಯಾನ ಮತ್ತು ಗಿಡ ನೆಡುವ ಮೂಲಕ ಆಚರಿಸಲಾಯಿತು. ಕಾಲೇಜಿನಪ್ರಾಂಶುಪಾಲರಾದ ರಮ್ಯ ವರ್ಷಿಣಿ ಅವರು ಸೇರಿದಂತೆ ಕೃಷ್ಣ ರುಕ್ಮಿಣಿ ಕಾನೂನು ಕಾಲೇಜಿನ ಕಾನೂನು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಸ್ವಚ್ಚತಾ ಅಭಿಯಾನ ಮಾಡುವ ಮೂಲಕ ಗಾಂಧಿಯವರ ಮೌಲ್ಯಗಳನ್ನು ಶ್ರಮದಾನ ಮಾಡುವ ಮೂಲಕ ತೋರಿಸಿದರು.

ಪ್ರಾಂಶುಪಾಲರಾದ ರಮ್ಯ ವರ್ಷಿಣಿ ಅವರು ಮಾತನಾಡಿ ಸ್ವಯಂಪ್ರೇರಿತ ಸಮುದಾಯ ಸೇವೆಯ ಮೂಲಕ ವಿದ್ಯಾರ್ಥಿ ಯುವಜನರಲ್ಲಿ ದೇಶಪ್ರೇಮ, ನಾಯಕತ್ವ ಗುಣ ಹಾಗೂ ಉತ್ತಮ ವ್ಯಕ್ತಿತ್ವ ವಿಕಸನವನ್ನು ಮೂಡಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು.ಮಹಾತ್ಮ ಗಾಂಧೀಜಿಯವರ ಜನ್ಮ ಶತಮಾನೋತ್ಸವದ ಅಂಗವಾಗಿ 24 ಸೆಪ್ಟೆಂಬರ್ 1969 ರಂದು ಭಾರತ ಸರ್ಕಾರದ ಯುವ ಕಾರ್ಯಕ್ರಮ ಮತ್ತು ಕ್ರೀಡಾ ಸಚಿವಾಲಯವು ದೇಶಾದ್ಯಂತ ಈ ಯೋಜನೆಯನ್ನು ಅಧಿಕೃತವಾಗಿ ಜಾರಿಗೆ ತಂದಿತು ಎಂದು ಹೇಳಿದರು.

ನಾನಲ್ಲ ನೀನಲ್ಲ, ಆದರೆ ನಾವು, ಇದು ನಿಸ್ವಾರ್ಥ ಸೇವೆ ಹಾಗೂ ಪ್ರಜಾಸತ್ತಾತ್ಮಕ ಜೀವನದ ಸಾರವನ್ನು ಸಾರುತ್ತದೆ ಧ್ಯೇಯ ವಾಕ್ಯವಾಗಿದೆ. ಈ ದಿನದಂದು ದೇಶದಾದ್ಯಂತ ಇರುವ ಎಲ್ಲಾ ಶಾಲೆ ಮತ್ತು ಕಾಲೇಜುಗಳ ಎನ್.ಎಸ್.ಎಸ್ ಘಟಕಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಗುತ್ತದೆ ಎಂದು ವಿವರಿಸಿದರು.

Leave a Reply

Your email address will not be published. Required fields are marked *