ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ತೆಕ್ಕಟ್ಟೆ- ಸೇವಾ ಸಂಗಮ ವಿದ್ಯಾಕೇಂದ್ರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ

ಕೋಟ: ಸೇವಾ ಸಂಗಮ ವಿದ್ಯಾಕೇಂದ್ರ, ವಿದ್ಯಾಗಿರಿ ತೆಕ್ಕಟ್ಟೆ ಹಾಗೂ ಸೇವಾ ಸಂಗಮ ಮಾದರಿ ಶಿಶು ಮಂದಿರ, ತೆಕ್ಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ತೆಕ್ಕಟ್ಟೆಯ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವು ಸಂಭ್ರಮ ಹಾಗೂ ಸಡಗರದಿಂದ ನಡೆಯಿತು.

ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಜೀವನ ಮೌಲ್ಯಗಳ ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಶ್ರೀಕೃಷ್ಣನ ಬಾಲಲೀಲೆಗಳು, ತುಂಟಾಟಗಳು ಹಾಗೂ ಧರ್ಮ, ಸತ್ಯ, ಕರ್ತವ್ಯ ಮತ್ತು ಮಾನವೀಯತೆಯ ಸಂದೇಶಗಳನ್ನು ಮಕ್ಕಳಿಗೆ ಪರಿಚಯಿಸಲಾಯಿತು. ಪುಟಾಣಿ ಮಕ್ಕಳು ಕೃಷ್ಣ ಹಾಗೂ ರಾಧೆಯ ವೇಷಭೂಷಣ ಧರಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಗಮನ ಸೆಳೆದವು.

ಸಭಾ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ತೆಕ್ಕಟ್ಟೆ ಅಧ್ಯಕ್ಷ ರಾಜೀವ್ ಶೆಟ್ಟಿ, ಸೇವಾ ಸಂಗಮ ವಿದ್ಯಾಕೇಂದ್ರದ ಅಧ್ಯಕ್ಷ ಸುರೇಶ್ ಬೆಟ್ಟಿನ್, ಸೇವಾ ಸಂಗಮ ಮಾದರಿ ಶಿಶು ಮಂದಿರದ ಅಧ್ಯಕ್ಷ ಸಂತೋಷ ನಾಯಕ್, ಸೇವಾ ಸಂಗಮ ವಿದ್ಯಾಕೇಂದ್ರದ ಗೌರವಾಧ್ಯಕ್ಷ ಸಂಜೀವ್ ಗುಂಡ್ಮಿ, ರೋಟರಿ ಸಮುದಾಯ ದಳ ಕೋಟೇಶ್ವರದ ಅಧ್ಯಕ್ಷರಾದ ಸುಪ್ರೀತಾ ಪುರಾಣಿಕ್ ಹಾಗೂ ಸೇವಾ ಸಂಗಮ ವಿದ್ಯಾಕೇಂದ್ರದ ಮುಖ್ಯೋಪಾಧ್ಯಾಯರಾದ ಹರ್ಷ ಕೋಟೇಶ್ವರ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ನಯನ ನಿರ್ವಹಿಸಿದರು. ಜಯಶ್ರೀ ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು. ತೆಕ್ಕಟ್ಟೆ ದುರ್ಗಾಪರಮೇಶ್ವರಿ ಸಭಾಂಗಣದಿoದ ಹಯಗ್ರೀವ ಕಲ್ಯಾಣ ಮಂಟಪದೊರಗಿನ ಶೋಭಾಯಾತ್ರೆ ಯಲ್ಲಿನ ರಾಧಾ ಕೃಷ್ಣರು, ಕಳಶ, ಭಜನಾ ಕುಣಿತ ಮತ್ತು ಕೋಲಾಟ ಸಾರ್ವಜನಿಕರನ್ನು ಆಕರ್ಷಿಸಿದವು.

ಸೇವಾ ಸಂಗಮ ವಿದ್ಯಾಕೇಂದ್ರ, ವಿದ್ಯಾಗಿರಿ ತೆಕ್ಕಟ್ಟೆ ಹಾಗೂ ಸೇವಾ ಸಂಗಮ ಮಾದರಿ ಶಿಶು ಮಂದಿರ, ತೆಕ್ಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ತೆಕ್ಕಟ್ಟೆಯ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವು ಸಂಭ್ರಮ ಹಾಗೂ ಸಡಗರದಿಂದ ನಡೆಯಿತು. ರೋಟರಿ ಕ್ಲಬ್ ತೆಕ್ಕಟ್ಟೆ ಅಧ್ಯಕ್ಷ ರಾಜೀವ್ ಶೆಟ್ಟಿ, ಸೇವಾ ಸಂಗಮ ವಿದ್ಯಾಕೇಂದ್ರದ ಅಧ್ಯಕ್ಷ ಸುರೇಶ್ ಬೆಟ್ಟಿನ್, ಸೇವಾ ಸಂಗಮ ಮಾದರಿ ಶಿಶು ಮಂದಿರದ ಅಧ್ಯಕ್ಷ ಸಂತೋಷ ನಾಯಕ್ ಇದ್ದರು.

Leave a Reply

Your email address will not be published. Required fields are marked *