ಕೋಟ: ಇಲ್ಲಿನ ಸಾಲಿಗ್ರಾಮದ ಕಾರ್ಕಡ ಗೆಳೆಯರ ಬಳಗ ವತಿಯಿಂದ ಪ್ರತಿವರ್ಷ ನಡೆಸಲ್ಪಡುವ ಕೀರ್ತಿಶೇಷ ಡಾ. ಕೋಟ ಶಿವರಾಮ ಕಾರಂತರ ಹುಟ್ಟು ಹಬ್ಬದ ಪ್ರಯುಕ್ತ ಗೆಳೆಯರ ಬಳಗ ಕಾರಂತ ಪುರಸ್ಕಾರ – 2026 ಪ್ರಶಸ್ತಿಗೆ ಕಾರಂತರ ಓಡನಾಡಿ ಕೋಟತಟ್ಟು ನಿವಾಸಿ ರಾಮ ಮರಕಾಲ ಆಯ್ಕೆಗೊಳಿಸಲಾಗಿದೆ.
ಮಾಲಿನಿ ಮಲ್ಯ, ಎಸ್. ನಾರಾಯಣ ರಾವ್,ಪೇತ್ರಿ ಮಾಧವ ನಾಯಕ್,ಶ್ರೀನಿವಾಸ ಸಾಸ್ತಾನ,ಹಿರಿಯಡ್ಕ ಗೋಪಾಲರಾವ್, ಎಚ್. ಇಬ್ರಾಹಿಂ ಸಾಹೇಬ್, ಪಾಂಡೇಶ್ವರ ಚಂದ್ರಶೇಖರ ಚಡಗ, ಬನ್ನಂಜೆ ಸಂಜೀವ ಸುವರ್ಣ, ವೈದೇಹಿ, ಡಾ ನಾ ಮೊಗಸಾಲೆ ಹಾಗೂ ಶಾಕುಂತಲಾ ಭಟ್ ಇವರುಗಳಿಗೆ ಈ ಹಿಂದೆ ಗೆಳೆಯರ ಬಳಗ ಕಾರಂತ ಪುರಸ್ಕಾರ ನೀಡಲಾಗಿದೆ.
ಗೆಳೆಯರ ಬಳಗ ಕಾರಂತ ಪುರಸ್ಕಾರ-2026 ನ್ನು ಅಕ್ಟೋಬರ್ ತಿಂಗಳ 11ರ ಭಾನುವಾರ ಸಂಜೆ ಸಾಲಿಗ್ರಾಮ ಶ್ರೀ ಗುರುನರಸಿಂಹ ಬಯಲು ರಂಗ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ಜರಗಲಿರುವುದು. ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ವಿತರಿಸಲಾಗುವುದು ಎಂದು ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Leave a Reply