ಕುಂದಾಪುರ ಕೊಂಕಣಿ ಖಾರ್ವಿ ಸಮಾಜದ ಪ್ರತಿಷ್ಠಿತ ಸಂಸ್ಥೆ ವಿದ್ಯಾರಂಗ ಮಿತ್ರ ಮಂಡಳಿಯ ಮಹಾಸಭೆಯು ಜರುಗಿ ನೂತನ ಅಧ್ಯಕ್ಷರಾಗಿ ಶ್ರೀ ಜಯಾನಂದ ಕೃಷ್ಣ ಖಾರ್ವಿ ಸರ್ವಾನುಮತದಿಂದ ಆಯ್ಕೆಯಾದರು. ಕಳೆದ ಹಲವಾರು ವರ್ಷಗಳಿಂದ ಸಂಸ್ಥೆಯಲ್ಲಿ ಸದಸ್ಯರಾಗಿ, ಕ್ರೀಡಾ ಕಾರ್ಯದರ್ಶಿಯಾಗಿ, ಕಳೆದ ಎರಡು ವರ್ಷಗಳಿಂದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಶ್ರೀ ಜಯಾನಂದ ಕೃಷ್ಣ ಖಾರ್ವಿಯವರು ಅಧ್ಯಕ್ಷರಾಗಿ 2026-2027ರ ಸಾಲಿನ ವಿದ್ಯಾರಂಗ ಮಿತ್ರ ಮಂಡಳಿಯ ಚುಕ್ಕಾಣಿಯನ್ನು ಹಿಡಿದರು.
ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಅರುಣ್ ಖಾರ್ವಿ, ಉಪಾಧ್ಯಕ್ಷರಾಗಿ ಶ್ರೀಮತಿ ಶಶಿಕಲಾ ಮೋಹನ್ ಖಾರ್ವಿ, ಕೋಶಾಧಿಕಾರಿಯಾಗಿ ಶ್ರೀ ಸತೀಶ್ ಎಸ್ ಖಾರ್ವಿ, ಆಯ್ಕೆಯಾದರು ಹಾಗೂ ಕಾರ್ಯಕಾರಿ ಸಮಿತಿಯ ರಚನೆ ಮಾಡಲಾಯಿತು.












Leave a Reply