ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮಣೂರು ಪಡುಕರೆ ಶಾಲೆಯ  ಇಂರ‍್ಯಾಕ್ಟ ಕ್ಲಬ್ ಪದಪ್ರಧಾನ.
ಭವಿಷ್ಯದಲ್ಲಿ ಸಮುದಾಯ ಸೇವೆಯಲ್ಲಿ ತೊಡಗಿಕೊಳ್ಳಿ- ಮಂಜುನಾಥ ಕಾಂಚನ್

ಕೋಟ: ರೋಟರಿ ಕ್ಲಬ್ ಕೋಟ ಸಿಟಿ ಸಹಭಾಗಿತ್ವದಲ್ಲಿ ಸರಕಾರಿ ಸಂಯುಕ್ತ ಪ್ರೌಢಶಾಲೆ ಮಣೂರು ಪಡುಕರೆಯಲ್ಲಿ ಇಂರ‍್ಯಾಕ್ಟ್ ಪದ ಪ್ರಧಾನ ಸಮಾರಂಭ ಜರುಗಿತು. ಅಂತರಾಷ್ಟಿçÃಯ ರೋಟರಿ ಸಂಸ್ಥೆಯು ಎಲ್ಲಾ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದೆ ಮಕ್ಕಳಲ್ಲಿ ನಾಯಕತ್ವ ಹಾಗೂ ವ್ಯಕ್ತಿತ್ವ ಬೆಳೆಸುವಲ್ಲಿ ಇಂರ‍್ಯಾಕ್ಟ್ ಕ್ಲಬ್‌ಗಳ ಪಾತ್ರ ಹಿರಿದು ಎಂದು ರೋಟರಿ ಜಿಲ್ಲೆಯ ಇಂರ‍್ಯಾಕ್ಟ ಉಪಸಭಾತಿ ಮಂಜುನಾಥ ಕಾಂಚನ್ ಹೇಳಿದರು.

ಸಮಾಜದಲ್ಲಿ ಉತ್ತಮ ಪ್ರಜೆಯ ನಿರ್ಮಾಣದಲ್ಲಿ ಶಾಲೆಯ ಶೈಕ್ಷಣಿಕ ಕ್ಲಬ್ ಗಳ ಜೊತೆಗೆ ಇಂಟರ್ಯಾಕ್ಟ ಕ್ಲಬ್ ಪ್ರಮುಖ ಪಾತ್ರವಹಿಸಲಿದೆ. ಮಕ್ಕಳಲ್ಲಿ ಜೀವನ ಮೌಲ್ಯ ಬೆಳೆಸುವಲ್ಲಿ ಸಹಕಾರಿ ಎಂದು ಪದ ಪ್ರಧಾನ ಮಾಡಿದ ರೋಟರಿ ಕ್ಲಬ್ ಕೋಟ ಸಿಟಿ ಅಧ್ಯಕ ಅನಿಲ್ ಸುವರ್ಣ ಮಾತನಾಡಿದರು. ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷೆ ಅನುಶ್ರೀ ಕಾರ್ಯದರ್ಶಿ ಪೂರ್ವಿ ಇವರಿಗೆ ಪದವಿ ಹಸ್ತಾಂತರಿಸಲಾಯಿತು. ಸಭೆಯಲ್ಲಿ ವಲಯ ಸೇನಾನಿ  ನಿತ್ಯಾನಂದ ನಾಯರಿ,ಕಾರ್ಯದರ್ಶಿ ಪ್ರಕಾಶ್ ಪೂಜಾರಿ , ಇಂಟರ್ಯಾಕ್ಟ ಕ್ಲಬ್ ಸಭಾಪತಿ ಉಮೇಶ್ ನಾಯರಿ , ಮಾಜಿ ಅಧ್ಯಕ್ಷ ಡಾ.ಗಣೇಶ್ ಯು,ನಿಯೋಜಿತ ಅಧ್ಯಕ್ಷ ಪ್ರಕಾಶ್ ಹಂದಟ್ಟು ಉಪಸ್ಥಿತರಿದ್ದರು. ಹಿರಿಯ ಶಿಕ್ಷಕಿ ಸುವರ್ಣ ಜಿ.ನಾವಡ ಸ್ವಾಗತಿಸಿದರು.,ಶಾಲೆಯ ಇಂರ‍್ಯಾಕ್ಟ್ ಕೋ ಆರ್ಡಿನೇಟರ್ ಹೆರಿಯ ಮಾಸ್ಟರ್ ಪ್ರಾಸ್ತವಿಕ ಮಾತನಾಡಿದರು. ರಸಪ್ರಶ್ನೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಪೂರ್ವಿ ಇಂಟರ್ಯಾಕ್ಟ ಕಾರ್ಯದರ್ಶಿ ವಂದಿಸಿದರು.ಶಿಕ್ಷಕ ರಾಜೀವ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *