ಕೋಟ: ಮಾತಾ ಅಮೃತಾನಂದಮಯಿ ಸೇವಾ ಸಮಿತಿ, ಕುಂದಾಪುರ ಇದರ ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಗೌರವಾಧ್ಯಕ್ಷರಾಗಿ ಆನಂದ್ ಸಿ. ಕುಂದರ್, ಗೌರವ ಸಲಹೆಗಾರರಾಗಿ ಸುರೇಶ್ ಬೆಟ್ಟಿನ್, ಅಧ್ಯಕ್ಷರಾಗಿ ಸಟ್ವಾಡಿ ಅನಿಲ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾಗಿ ಶಿವರಾಮ ಶೆಟ್ಟಿ, ರಾಮ ಮೊಗವೀರ ಬಳ್ಕೂರು ಹಾಗೂ ಶಂಕರ ಪೂಜಾರಿ ಆಯ್ಕೆಯಾಗಿದ್ದಾರೆ.ಕಾರ್ಯದರ್ಶಿಯಾಗಿ ಸರಸ್ವತಿ ಗಣೇಶ್ ಪುತ್ರನ್ ಹಾಗೂ ಖಜಾಂಚಿಯಾಗಿ ರಮೇಶ್ ಪುತ್ರನ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ.ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಲ್ಪನಾ ಭಾಸ್ಕರ್, ಭರತ್ ಬಂಗೇರ, ಪ್ರಕಾಶ್ ಅಮೀನ್, ಜಯಂತಿ ಕೋಟ್ಯಾನ್ ಹಾಗೂ ಸುಮತಿ ಮೊಗವೀರ ಆಯ್ಕೆಯಾಗಿದ್ದಾರೆ.












Leave a Reply